ತಂದೆಯೇ ತನ್ನ ಮಗುವನ್ನು ವರ್ಷಗಳ ಕಾಲ ವ್ಯಾನ್‌ನಲ್ಲಿ ಬಂಧಿಸಿಟ್ಟ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ. ಇಲ್ಲಿ, ಚಿಕ್ಕ ಮಗುವನ್ನು ಅವನ ಸ್ವಂತ ಜನರು ಎಂತಹ ಸ್ಥಿತಿಯಲ್ಲಿ ಇರಿಸಿದ್ದಾರೆಂದರೆ, ಆ ಸ್ಥಿತಿ ಅದು ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಮಕ್ಕಳ ಪ್ರತಿಯೊಂದು ಅಗತ್ಯವನ್ನು ನಾವು ನೋಡಿಕೊಳ್ಳುತ್ತೇವೆ, ಆದರೆ ಒಂದು ಮಗುವಿಗೆ ಎರಡು ವರ್ಷಗಳ ಕಾಲ ತನ್ನ ಮೂಲಭೂತ ಅವಶ್ಯಕತೆಗಳು ಸಹ ಸಿಗಲಿಲ್ಲ. ನೆರೆಹೊರೆಯವರು ದೂರು ನೀಡದಿದ್ದರೆ, ಬಹುಶಃ ಅವನು ಆ ನರಕದಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ.
ಕೆಲ ವರದಿಗಳ ಪ್ರಕಾರ, ಪೂರ್ವ ಫ್ರಾನ್ಸ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 2024 ರಿಂದ ತನ್ನ ತಂದೆಯೇ ವ್ಯಾನ್‌ನಲ್ಲಿ ತನ್ನ 9ವರ್ಷದ ಮಗನನ್ನು ಬಂಧಿಸಲ್ಪಟ್ಟಿದ್ದ. ಅವನ್ನು ಈಗ ರಕ್ಷಿಸಲಾಗಿದೆ. ಮಗುವನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ತಂದೆಯನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ.
ಘಟನೆ ಬೆಳಕಿಗೆ ಬಂದಿದ್ದೇಗೆ?
ಸೋಮವಾರ ಹ್ಯಾಗೆನ್‌ಬುಚ್ ಪಟ್ಟಣದ ನೆರೆಹೊರೆಯವರು ವ್ಯಾನ್ ಒಳಗಿನಿಂದ ಮಗುವಿನ ಧ್ವನಿ ಬರುತ್ತಿರುವುದನ್ನು ಕೇಳಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆಯ ಸಮಯದಲ್ಲಿ ವ್ಯಾನ್ ಅನ್ನು ಬಲವಂತವಾಗಿ ತೆರೆಯಬೇಕಾಯಿತು. ಆಗ ಕಂಡಿದ್ದ ದೃಶ್ಯ ಮನಕಲಕುವಂಥದ್ದು.
ಅಧಿಕಾರಿಗಳು ವ್ಯಾನ್ ತೆರೆದಾಗ, ಒಳಗಿನ ದೃಶ್ಯ ಭಯಾನಕವಾಗಿತ್ತು. ಮಗು ಕಂಬಳಿಯಲ್ಲಿ ಸುತ್ತಿಕೊಂಡು, ಕಸದ ರಾಶಿಯ ಮೇಲೆ, ಹೊಲಸು ಮತ್ತು ಮಲದಿಂದ ಆವೃತವಾಗಿ ಬಿದ್ದಿತ್ತು. ಅವನು ಸಂಪೂರ್ಣವಾಗಿ ಬೆತ್ತಲೆಯಾಗಿದ್ದನು. ಸ್ಥಳೀಯ ಪ್ರಾಸಿಕ್ಯೂಟರ್ ನಿಕೋಲಸ್ ಹೈಟ್ಸ್ ಪ್ರಕಾರ, ಮಗು ಅಪೌಷ್ಟಿಕತೆಯಿಂದ ಬಳಲುತ್ತಿತ್ತು ಮತ್ತು ಸುಮಾರು ಎರಡು ವರ್ಷಗಳ ಕಾಲ ಅದೇ ಸ್ಥಳದಲ್ಲಿ ಸಿಲುಕಿದ ನಂತರ ನಡೆಯಲು ಸಾಧ್ಯವಾಗಲಿಲ್ಲ ಅಷ್ಟು ಹೀನ ಸ್ಥಿಗೆ ಆ ಮಗು ತಲುಪಿತ್ತು.
ತನಿಖೆಯ ಸಮಯದಲ್ಲಿ, ಮಗುವಿನ ತಂದೆ ನವೆಂಬರ್ 2024 ರಲ್ಲಿ ಮಗುವನ್ನು ಸುರಕ್ಷಿತವಾಗಿಡಲು ವ್ಯಾನ್‌ನಲ್ಲಿ ಇರಿಸಿದ್ದಾಗಿ ಹೇಳಿದ್ದಾರೆ. ತನ್ನ ಸಂಗಾತಿ ಅವನನ್ನು ಮಾನಸಿಕ ಆಸ್ಪತ್ರೆಗೆ ಕಳುಹಿಸಲು ಬಯಸಿದ್ದರು ಎಂದು ಅವರು ಹೇಳಿದ್ದಾರೆ. ಇದಲ್ಲದೇ, ಪ್ರಾಸಿಕ್ಯೂಟರ್ ಪ್ರಕಾರ, ಮಗುವಿಗೆ ಯಾವುದೇ ಮಾನಸಿಕ ಅಸ್ವಸ್ಥತೆ ಇದೆ ಎಂದು ಸೂಚಿಸುವ ಯಾವುದೇ ವೈದ್ಯಕೀಯ ದಾಖಲೆ ಕಂಡುಬಂದಿಲ್ಲ. ಪೊಷಕರ ಹೇಳಿಕೆ ವಿರುದ್ಧವಾಗಿ, ಘಟನೆಯ ಮೊದಲು, ಅವನು ಶಾಲೆಯಲ್ಲಿ ಉತ್ತಮ ಶ್ರೇಣಿಗಳನ್ನು ಗಳಿಸುತ್ತಿದ್ದನು ಎನ್ನುವುದು ದಾಖಲಾಗಿದೆ. ಇದಲ್ಲದೇ ತನ್ನ ಸಂಗಾತಿಗಾಗಿ ಈ ಕೃತ್ಯ ಎಸಗಿದ್ದಾನೆ ಎನ್ನುವ ಆರೋಪಗಳು ಕೇಳಿಬಂದಿವೆ.
ಇರಾನ್ ಜೊತೆಗಿನ ಮಾತುಕತೆ ವಿಫಲ: ಟ್ರಂಪ್ ಘೋಷಣೆಗೆ ಇಡೀ ವಿಶ್ವವೇ ಸ್ತಬ್ಧ!