Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ರಾಜ್ಯದಲ್ಲಿ ಹೊಸ `ಮೋಟಾರು ವಾಹನಗಳ ತೆರಿಗೆ ತಿದ್ದುಪಡಿ ಕಾಯ್ದೆ’ ಜಾರಿ
ಕರ್ನಾಟಕಪ್ರಮುಖ

ರಾಜ್ಯದಲ್ಲಿ ಹೊಸ `ಮೋಟಾರು ವಾಹನಗಳ ತೆರಿಗೆ ತಿದ್ದುಪಡಿ ಕಾಯ್ದೆ’ ಜಾರಿ

Share
2 Min Read
SHARE

newsics.com

ಬೆಂಗಳೂರು: ರಾಜ್ಯದಲ್ಲಿ ಸಂಚರಿಸುವ ವಿವಿಧ ವರ್ಗದ ವಾಹನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ಕಾಯ್ದೆ, 2026’ಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. 2026ರ ಏಪ್ರಿಲ್ 9ರಂದು ರಾಜ್ಯಪಾಲರ ಒಪ್ಪಿಗೆ ಪಡೆದಿರುವ ಈ ಹೊಸ ಕಾಯ್ದೆಯು ಈಗ ಜಾರಿಗೆ ಬಂದಿದೆ.

ಈ ತಿದ್ದುಪಡಿಯ ಅನ್ವಯ, ಕಮರ್ಷಿಯಲ್ ಟ್ರಾಕ್ಟರ್ಗಳು, ಲಕ್ಸುರಿ ಬಸ್ಗಳು ಮತ್ತು ಎಲೆಕ್ಟ್ರಿಕ್ ವಾಹನಗಳೂ ಸೇರಿದಂತೆ ಹಲವು ವಿಧದ ವಾಹನಗಳ ಜೀವಿತಾವಧಿ ತೆರಿಗೆ (Lifetime Tax) ದರಗಳಲ್ಲಿ ಬದಲಾವಣೆಯಾಗಿದೆ.

 

ಲಕ್ಸುರಿ ಮತ್ತು ಸ್ಲೀಪರ್ ಬಸ್ ತೆರಿಗೆ: 12ಕ್ಕಿಂತ ಹೆಚ್ಚು ಪ್ರಯಾಣಿಕರ ಸಾಮರ್ಥ್ಯ ಹೊಂದಿರುವ ಲಕ್ಸುರಿ ಬಸ್ಗಳಿಗೆ ಪ್ರತಿ ಪ್ರಯಾಣಿಕನಿಗೆ 2,500 ರೂ. ಹಾಗೂ ಸ್ಲೀಪರ್ ಕೋಚ್ ಬಸ್ಗಳಿಗೆ ಪ್ರತಿ ಸೀಟಿಗೆ 3,000 ರೂ. ತೆರಿಗೆ ನಿಗದಿಪಡಿಸಲಾಗಿದೆ.

ವಾಣಿಜ್ಯ ಟ್ರಾಕ್ಟರ್ ಟ್ರೈಲರ್ಗಳು: ಹೊಸದಾಗಿ ನೋಂದಣಿಯಾಗುವ ವಾಣಿಜ್ಯ ಟ್ರಾಕ್ಟರ್ ಟ್ರೈಲರ್ಗಳಿಗೆ ವಾಹನದ ಒಟ್ಟು ಬೆಲೆಯ 10% ರಷ್ಟು ಜೀವಿತಾವಧಿ ತೆರಿಗೆಯನ್ನು ನಿಗದಿಪಡಿಸಲಾಗಿದೆ.

ಖಾಸಗಿ ಕಾರುಗಳು ಮತ್ತು ಜೀಪುಗಳು: ಕಾರು ಮತ್ತು ಜೀಪುಗಳ ಬೆಲೆಗೆ ಅನುಗುಣವಾಗಿ ತೆರಿಗೆ ದರವನ್ನು ಪರಿಷ್ಕರಿಸಲಾಗಿದೆ:

5 ಲಕ್ಷದವರೆಗಿನ ವಾಹನಗಳಿಗೆ: 13%

5 ರಿಂದ 10 ಲಕ್ಷದವರೆಗಿನ ವಾಹನಗಳಿಗೆ: 14%

10 ರಿಂದ 20 ಲಕ್ಷದವರೆಗಿನ ವಾಹನಗಳಿಗೆ: 17%

20 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕಾರುಗಳಿಗೆ: 18%

ಬ್ಯಾಟರಿ ಚಾಲಿತ  ಕ್ಯಾಬ್ಗಳು: ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳಿಗೂ ಈಗ ತೆರಿಗೆ ಅನ್ವಯವಾಗಲಿದ್ದು, ವಾಹನದ ಬೆಲೆಯ ಆಧಾರದ ಮೇಲೆ 5% ರಿಂದ 10% ರಷ್ಟು ಜೀವಿತಾವಧಿ ತೆರಿಗೆ ವಿಧಿಸಲಾಗುತ್ತದೆ.

ನಿರ್ಮಾಣ ಉಪಕರಣಗಳ ವಾಹನಗಳು : ಕ್ರೇನ್, ಎಕ್ಸಾವೇಟರ್ ಮುಂತಾದ ನಿರ್ಮಾಣ ಕಾಮಗಾರಿಗೆ ಬಳಸುವ ವಾಹನಗಳಿಗೆ ವಾಹನದ ಬೆಲೆಯ 10% ತೆರಿಗೆ ನಿಗದಿಪಡಿಸಲಾಗಿದೆ.

 

ಹಳೆಯ ವಾಹನಗಳಿಗೂ ಅನ್ವಯ:

ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ವಲಸೆ ಬರುವ ಅಥವಾ ಈಗಾಗಲೇ ನೋಂದಣಿಯಾಗಿರುವ ವಾಹನಗಳ ವಯಸ್ಸಿನ ಆಧಾರದ ಮೇಲೆ (ಉದಾಹರಣೆಗೆ 2 ವರ್ಷದಿಂದ 15 ವರ್ಷ ಮೇಲ್ಪಟ್ಟ ವಾಹನಗಳು) ತೆರಿಗೆಯಲ್ಲಿ ರಿಯಾಯಿತಿ ನೀಡಿ ಹೊಸ ದರಗಳನ್ನು ಅನ್ವಯಿಸಲಾಗುತ್ತದೆ. ವಾಹನ ಹಳೆಯದಾದಂತೆ ಕಟ್ಟಬೇಕಾದ ತೆರಿಗೆಯ ಪ್ರಮಾಣವು ಮೂಲ ದರದ ಶೇ. 93 ರಿಂದ ಶೇ. 25 ರವರೆಗೆ ಇಳಿಕೆಯಾಗುತ್ತಾ ಹೋಗುತ್ತದೆ.

https://www.newsics.com/2026/04/12/a-sinful-father-locked-his-little-son-inside-a-van-for-2-years-for-his-girlfriend/

Share This Article
Facebook Twitter Copy Link Print
Previous Article ಗರ್ಲ್‌ಫ್ರೆಂಡ್‌ಗಾಗಿ ಪುಟ್ಟ ಮಗನನ್ನು 2 ವರ್ಷ ವ್ಯಾನ್ ಒಳಗೆ ಕೂಡಿಹಾಕಿದ್ದ ಪಾಪಿ ತಂದೆ!
Next Article ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ : ಆರು ಜನ ಸಾವು

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?