newsics.com
ಐಷರ್ ಮೋಟರ್ಸ್ ಸಮೂಹದ ರಾಯಲ್ ಎನ್ಫೀಲ್ಡ್ ಈಗ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಅಧಿಕೃತವಾಗಿ ಪ್ರವೇಶಿಸಿದೆ.
ತನ್ನ ಮೊದಲ ಇ.ವಿ. ದ್ವಿಚಕ್ರ ವಾಹನ ‘ಫ್ಲೈಯಿಂದ ಫ್ಲೀ ಸಿ6’ ವಾಹನವನ್ನು ಬಿಡುಗಡೆ ಮಾಡಿದೆ. ಇದರ ಎಕ್ಸ್ ಷೋರೂಂ ಬೆಲೆಯು ₹2.79 ಲಕ್ಷ.
ಆದರೆ, ಬ್ಯಾಟರಿ ಹೊರತುಪಡಿಸಿದರೆ ಈ ವಾಹನವು ₹1.99 ಲಕ್ಷಕ್ಕೆ ಸಿಗುತ್ತದೆ ಎಂದು ಐಷರ್ ಮೋಟರ್ಸ್ ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.
ಕಂಪನಿಯು ಈ ವಾಹನವನ್ನು ಗ್ರಾಹಕರಿಗೆ ವಿತರಿಸುವ ಕೆಲಸವನ್ನು ಮೇ ಕೊನೆಯ ಭಾಗದಿಂದ ಶುರು ಮಾಡಲಿದೆ. ವಾಹನವು ಗಂಟೆಗೆ ಗರಿಷ್ಠ 115 ಕಿ.ಮೀ. ವೇಗದಲ್ಲಿ ಸಾಗಬಲ್ಲದು.