Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > ಈ ವಾರ ಗಜಕೇಸರಿ, ಬುಧಾದಿತ್ಯ ರಾಜಯೋಗ: ಈ 5 ರಾಶಿಯವರಿಗೆ ಅದೃಷ್ಟ
ಪಂಚಾಂಗಜ್ಯೋತಿಷ್ಯಪ್ರಮುಖವಾರ ಭವಿಷ್ಯ

ಈ ವಾರ ಗಜಕೇಸರಿ, ಬುಧಾದಿತ್ಯ ರಾಜಯೋಗ: ಈ 5 ರಾಶಿಯವರಿಗೆ ಅದೃಷ್ಟ

Share
4 Min Read
SHARE

 

newsics.com/ ನ್ಯೂಸಿಕ್ಸ್.ಕಾಮ್

ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಗಜಕೇಸರಿ- ಬುಧಾದಿತ್ಯ ರಾಜಯೋಗದ ನಿರ್ಮಾಣವಾಗಲಿದೆ. ಹಾಗಾಗಿ ಏಪ್ರಿಲ್ ತಿಂಗಳ ಈ ವಾರದಲ್ಲಿ ಯಾವ 5 ರಾಶಿಗೆ ಸೇರಿದವರಿಗೆ ಹೆಚ್ಚಿನ ಲಾಭ ದೊರಕುವ ಯೋಗವಿದೆ..? ಯಾವ ರಾಶಿಗೆ ಸೇರಿದ ಜನರಿಗೆ ಈ ವಾರ ಅದೃಷ್ಟಶಾಲಿಯಾಗಿರಲಿದೆ..?

ವಾರದ 5 ಅದೃಷ್ಟದ ರಾಶಿ ಚಿಹ್ನೆಗಳು ಯಾವುವು?

ಏಪ್ರಿಲ್ ತಿಂಗಳ ಈ ವಾರದಲ್ಲಿ ಎರಡು ರಾಜಯೋಗಗಳ ನಿರ್ಮಾಣವಾಗಲಿದೆ. ಈ ವಾರದ ಮಧ್ಯದಲ್ಲಿ ಗಜಕೇಸರಿ ಯೋಗ ಮತ್ತು ವಾರದ ಕೊನೆಯಲ್ಲಿ ಬುಧಾದಿತ್ಯ ರಾಜಯೋಗದ ನಿರ್ಮಾಣವಾಗುವುದು. ಈ ವಾರದ ಮಧ್ಯದಲ್ಲಿ ಚಂದ್ರನು ಧನು ರಾಶಿಯನ್ನು ಪ್ರವೇಶಿಸುವನು ಮತ್ತು ಗುರು ಗ್ರಹದೊಂದಿಗೆ ಕೇಂದ್ರ ಸ್ಥಾನದಲ್ಲಿರುವುದು. ಹಾಗಾಗಿ ಗುರು ಮಿಥುನ ರಾಶಿಯಲ್ಲಿ ಮತ್ತು ಚಂದ್ರನು ಧನು ರಾಶಿಯಲ್ಲಿ ಚಲಿಸುವ ಮೂಲಕ ಗಜಕೇಸರಿ ರಾಜಯೋಗದ ನಿರ್ಮಾಣವಾಗುವುದು.

ಹಾಗೆಯೇ ಬುಧ ಮತ್ತು ಸೂರ್ಯ ಗ್ರಹಗಳ ಸಂಯೋಗದಿಂದಾಗಿ ಮೀನ ರಾಶಿಯಲ್ಲಿ ಬುಧಾದಿತ್ಯ ರಾಜಯೋಗವು ಪ್ರಭಾವಶಾಲಿಯಾಗಿರುವುದು. ಗ್ರಹಗಳ ಈ ಸ್ಥಿತಿಯ ಲಾಭವನ್ನು ವಿಶೇಷವಾಗಿ ವೃಷಭ, ಮಿಥುನ ಸೇರಿ ಐದು ರಾಶಿಗೆ ಸೇರಿದ ಜನರು ಪಡೆದುಕೊಳ್ಳಲಿದ್ದಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ ತಿಂಗಳಿನ ಈ ವಾರದಲ್ಲಿ ಎರಡು ರಾಜಯೋಗಗಳ ಪ್ರಭಾವದಿಂದಾಗಿ ಯಾವ ಐದು ರಾಶಿಗೆ ಸೇರಿದ ಜನರು ಜೀವನದಲ್ಲಿ ಲಾಭ ಮತ್ತು ಮಾನಸಿಕ ಶಾಂತಿಯನ್ನು ಪಡೆಯುವರು..? ಹಾಗಾಗಿ ಏಪ್ರಿಲ್ ತಿಂಗಳ ಈ ವಾರವು ಯಾವ ಐದು ರಾಶಿ ಅವರಿಗೆ ಅದೃಷ್ಟಶಾಲಿಯಾಗಿರಲಿದೆ. ಈ ವಾರದ 5 ಅದೃಷ್ಟದ ರಾಶಿಗಳು ಯಾವುವು?

ವೃಷಭ 

ಈ ವಾರ ನಿಮಗೆ ಧನ ಲಾಭದ ಯೋಗವಿದೆ. ವೃಷಭ ರಾಶಿಗೆ ಸೇರಿದ ಜನರಿಗೆ ಏಪ್ರಿಲ್ ತಿಂಗಳ ಈ ವಾರವು ಬಹಳಷ್ಟು ಅನುಕೂಲಕರವಾಗಿರಲಿದೆ. ಈ ವಾರದಲ್ಲಿ ನಿಮಗೆ ಅಪಾರ ಧನ ಲಾಭವನ್ನುಂಟು ಮಾಡುವ ಅವಕಾಶಗಳು ಹೆಚ್ಚಾಗಿ ದೊರಕಲಿವೆ. ಜತೆಗೆ ಈ ವಾರದಲ್ಲಿ ವೃಷಭ ರಾಶಿಗೆ ಸೇರಿದ ಜನರಿಗೆ ಪ್ರಯಾಣಕ್ಕೆ ಸಂಬಂಧಿಸಿದಂತೆ ಉತ್ತಮ ಲಾಭವನ್ನು ಗಳಿಸುವ ಯೋಗ ನಿರ್ಮಾಣಗೊಳ್ಳುವುದು.

ಜತೆಗೆ ವೃಷಭ ರಾಶಿಗೆ ಸೇರಿದ ಜನರಿಗೆ ಈ ವಾರದಲ್ಲಿ ಯಾವುದಾದರೂ ವಿಚಾರಗಳಿಂದಾಗಿ ಮನಸ್ಸು ಅಶಾಂತಿಗೆ ಒಳಗಾಗಬಹುದು. ಆದರೆ ತಂದೆಗೆ ಸಮಾನರಾದ ವ್ಯಕ್ತಿಯ ಸಹಾಯದಿಂದ ಉತ್ತಮ ಆರ್ಥಿಕ ವೃದ್ಧಿಯಾಗುವ ಸಂಭವವಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಈ ವಾರದಲ್ಲಿ ನೀವು ನೀಡಿದಂತಹ ಮಾತುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಉತ್ತಮ ಅವಕಾಶಗಳು ದೊರಕಬಹುದು.

ಮಿಥುನ 

ಈ ವಾರ ನಿಮಗೆ ಶುಭ ಸುದ್ದಿ ದೊರಕಬಹುದು.

ಮಿಥುನ ರಾಶಿಗೆ ಸೇರಿದ ಜನರಿಗೆ ಏಪ್ರಿಲ್ ತಿಂಗಳ ಈ ವಾರ ಕೆಲಸದ ಸ್ಥಳದಲ್ಲಿ ಪ್ರಗತಿ ದೊರಕುವುದು. ಹಾಗೆ ಯಾವುದಾದರೂ ಹೊಸ ಯೋಜನೆಗಳಲ್ಲಿ ಸುಲಭವಾಗಿ ಯಶಸ್ಸು ದೊರಕಬಹುದಾಗಿದೆ. ಜೊತೆಗೆ ಮಿಥುನ ರಾಶಿಗೆಸೇರಿದ ಆರ್ಥಿಕ ಸ್ಥಿತಿಯು ಮೊದಲಿಗಿಂತ ಸಾಕಷ್ಟು ಉತ್ತಮವಾಗಿರುವುದು. ಪ್ರೀತಿಯ ಜೀವನಕ್ಕೆ ಸಂಬಂಧಿಸಿದಂತೆ ಈ ವಾರದಲ್ಲಿ ನೀವು ಬಹಳಷ್ಟು ಶುಭ ಸುದ್ಧಿಯನ್ನು ಪಡೆಯಬಹುದು.

ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ, ಇಲ್ಲದಿದ್ದರೆ ಸಂಕಷ್ಟ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ಮಾಧುರ್ಯವಿರಲಿ. ಈ ಸಂದರ್ಭದಲ್ಲಿ ನಿಮ್ಮ ನಿದ್ರೆಯ ಸಮಯವು ಬದಲಾಗಬಹುದು. ಈ ವಾರ ಪ್ರಯಾಣಿಸಬೇಕಾದರೆ, ಅದನ್ನು ಮುಂದೂಡುವುದು ಉತ್ತಮ. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಶುಭಫಲ ದೊರಕುವುದು.

ಕರ್ಕಾಟಕ 

ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಈ ವಾರವು ನಿಮಗೆ ಅನುಕೂಲಕರವಾಗಿರಲಿದೆ. 

ಕರ್ಕಾಟಕ ರಾಶಿಗೆ ಸೇರಿದ ಜನರಿಗೆ ಏಪ್ರಿಲ್ ತಿಂಗಳ ಈ ವಾರ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಿಮಗೆ ಅನುಕೂಲಕರವಾಗಿರಲಿದೆ. ಈ ವಾರ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಟಕ ರಾಶಿಗೆ ಸೇರಿದ ಜನರು ಸಾಕಷ್ಟು ಸುಧಾರಣೆಯನ್ನು ಹೊಂದುವ ಸಂಭವವಿದೆ. ಕಟಕ ರಾಶಿಗೆ ಸೇರಿದ ಜನರು ಈ ವಾರ ಮನೆಯಲ್ಲಿ ಯಾವುದಾದರೂ ಹೊಸ ಆರಂಭವನ್ನು ಹೊಂದುವ ಮೂಲಕ ಮನಸ್ಸು ಸಂತಸದಿಂದಿರುವುದು.

ಈ ವಾರ ಕರ್ಕಾಟಕ ರಾಶಿಗೆ ಸೇರಿದ ಜನರು ಪ್ರಯಾಣಿಸುವ ಸಂದರ್ಭದಲ್ಲಿ ಹೆಚ್ಚಿನ ಸಂಪರ್ಕಗಳನ್ನು ಸಾಧಿಸಲು ಸಾಧ್ಯವಾಗುವುದು. ಈ ಸಂದರ್ಭದಲ್ಲಿ ಆ ಸಂಪರ್ಕಗಳಿಂದ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಉತ್ತಮ ಅವಕಾಶಗಳನ್ನು ಪಡೆಯುವ ಯೋಗ ಹೆಚ್ಚಾಗಿ ದೊರಕುವುದು.

ಕನ್ಯಾ 

ಈ ವಾರ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ಕನ್ಯಾ ರಾಶಿಗೆ ಸೇರಿದ ಜನರಿಗೆ ಈ ವಾರವು ಬಹಳ ಅನುಕೂಲಕರವಾಗಿರಲಿದೆ. ಈ ಸಂದರ್ಭದಲ್ಲಿ ಧನ ಲಾಭವನ್ನು ಹೊಂದುವ ಉತ್ತಮ ಅವಕಾಶಗಳ ಪ್ರಾಪ್ತಿಯಾಗುವ ಸಂಭವವಿದೆ. ಈ ವಾರ ಹೂಡಿಕೆಗೆ ಸಂಬಂಧಿಸಿದಂತೆ ನೀವು ಸಾಕಷ್ಟು ಕಾರ್ಯನಿರತರಾಗಿರುವಿರಿ. ಈ ವಾರ ಕನ್ಯಾ ರಾಶಿಗೆ ಸೇರಿದ ಜನರು ಪ್ರಯಾಣಿಸಬೇಕಾಗಿ ಬರಬಹುದು. ಈ ಪ್ರಯಾಣದ ಸಂದರ್ಭದಲ್ಲಿ ನಿಮಗೆ ಯಶಸ್ಸು ದೊರಕುವ ಸಂಭವ ಕೂಡ ಹೆಚ್ಚಾಗಿರುವುದು.

ಹಾಗೆ ಕನ್ಯಾ ರಾಶಿಗೆ ಸೇರಿದ ಜನರು ಕೆಲಸದಲ್ಲಿ ಸರಿಯಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಹಾಗಾದರೆ ಮಾತ್ರ ನಿಮ್ಮ ಸುಖ, ಸಮೃದ್ಧಿಯಲ್ಲಿ ಹೆಚ್ಚಳವಾಗಬಹುದು. ವಾರದ ಕೊನೆಯಲ್ಲಿ ನಿಮಗೆ ಶುಭ ಫಲಗಳ ಪ್ರಾಪ್ತಿಯಾಗುವ ಯೋಗ ನಿರ್ಮಾಣಗೊಳ್ಳುವುದು.


ವೃಶ್ಚಿಕ 

ಈ ವಾರ ಕೆಲಸದಲ್ಲಿ ಪ್ರಗತಿ ದೊರಕಲಿದೆ.

ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ಈ ವಾರದಲ್ಲಿ ಕೆಲಸದಲ್ಲಿ ಪ್ರಗತಿ ದೊರಕುವ ಸಂಭವ ಸಾಕಷ್ಟು ಹೆಚ್ಚಾಗಿರುವುದು. ಈ ವಾರ ಪಾಲುದಾರಿಕೆಯೊಂದಿಗೆ ಮಾಡಿದಂತಹ ಪ್ರಯತ್ನಗಳಿಗೆ ಉತ್ತಮ ಫಲಿತಾಂಶ ದೊರಕುವ ಸಂಭವವಿದೆ. ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಈ ವಾರದಲ್ಲಿ ನೀವು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುವಿರಿ.

ಹಾಗೆ ಈ ವಾರ ನಿಮ್ಮ ಮನೆಯವರಿಂದ ಹೆಚ್ಚಿನ ಸಹಾಯವನ್ನು ಪಡೆಯುವ ಸಾಧ್ಯತೆ ಇರುವುದು. ಈ ವಾರ ಪ್ರಯಾಣಿಸುವ ಸಂದರ್ಭದಲ್ಲಿ ಸುಲಭವಾಗಿ ನಿಮಗೆ ಯಶಸ್ಸು ದೊರಕಬಹುದು. ಈ ವಾರ ನಿಮ್ಮ ಯಾವುದಾದರೂ ಮಹಿಳೆ ಸಂಬಂಧಿಯ ಸಹಾಯ ಮತ್ತು ಹೊಗಳಿಕೆ ದೊರಕಬಹುದು.

 

Health ಸೊಂಟ ನೋವು ನಿವಾರಣೆಗೆ ಹೊಸ ಸೂತ್ರ, ಏನಿದು ವಿಶೇಷ ತಂತ್ರ?

TAGGED:this-week-gajakesari-budhaditya-raja-yoga-good-luck-for-these-5-zodiac-signs
Share This Article
Facebook Twitter Copy Link Print
Previous Article ವಿಶ್ವಾದ್ಯಂತ 30,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ಒರಾಕಲ್ ಕಂಪನಿ ಮೇಲೆ ಇರಾನ್ ದಾಳಿ!
Next Article ಮಾಗಡಿ ಶಾಸಕ ಹೆಚ್​​.ಸಿ. ಬಾಲಕೃಷ್ಣಗೆ ಜಾಮೀನು ರಹಿತ ವಾರೆಂಟ್ ಜಾರಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?