Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health ಸೊಂಟ ನೋವು ನಿವಾರಣೆಗೆ ಹೊಸ ಸೂತ್ರ, ಏನಿದು ವಿಶೇಷ ತಂತ್ರ?
ಕರ್ನಾಟಕಆರೋಗ್ಯಪ್ರಮುಖಲೈಫ್‌ಸ್ಟೈಲ್

Health ಸೊಂಟ ನೋವು ನಿವಾರಣೆಗೆ ಹೊಸ ಸೂತ್ರ, ಏನಿದು ವಿಶೇಷ ತಂತ್ರ?

Share
2 Min Read
SHARE

 

newsics.com

ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ನಮ್ಮ ದೇಹದ ಕೆಲವೊಂದು ಭಾಗಗಳು ನೋವನ್ನು ಅನುಭವಿಸಲು ಪ್ರಾರಂಭಿಸುತ್ತವೆ.

ನಮ್ಮ ಸೊಂಟ ಮತ್ತು ಕೀಲುಗಳು ಬಂಡೆಯಂತೆ ಗಟ್ಟಿಯಾಗುತ್ತವೆ. ಈ ನೋವನ್ನು ಸಾಮಾನ್ಯ ಸಮಸ್ಯೆ ಎಂದು ತಳ್ಳಿಹಾಕುತ್ತೇವೆ. ಆದರೆ, ಈ ಸಮಸ್ಯೆ ದೊಡ್ಡ ನೋವಾಗಿ ಬೆಳೆಯಬಹುದು.

ವಿಜ್ಞಾನದ ಪ್ರಕಾರ, ನಾವು ಸಾಮಾನ್ಯ ವೇಗದಲ್ಲಿ ನಡೆಯುವಾಗ ನಮ್ಮ ದೇಹದ ಪ್ರತಿ ಪೌಂಡ್ ತೂಕಕ್ಕೂ ಸೊಂಟದ ಮೇಲೆ ಸುಮಾರು 3 (ಶೇ.300) ಪಟ್ಟು ಒತ್ತಡ ಬೀಳುತ್ತದೆ. ಇದು ಓಡುವಾಗ ಸುಮಾರು 9 (ಶೇ.900) ಪಟ್ಟು ಹೆಚ್ಚಾಗುತ್ತದೆ. ಆದ್ದರಿಂದಲೇ ಕೀಲುಗಳನ್ನು ಸಕ್ರಿಯವಾಗಿಡುವುದು ಬಹಳ ಮುಖ್ಯ.

ಆದಾಗ್ಯೂ, ಕೀಲುಗಳು ಸಕ್ರಿಯವಾಗಿದ್ದಾಗ ಮಾತ್ರ ಅವುಗಳಲ್ಲಿರುವ ‘ಸೈನೋವಿಯಲ್ ಫ್ಲೂಯಿಡ್’ (Synovial Fluid) ಸರಿಯಾಗಿ ಕೆಲಸ ಮಾಡುತ್ತದೆ. ಇದು ಕೀಲುಗಳ ನಡುವೆ ಗ್ರೀಸ್ ಅಥವಾ ಲ್ಯೂಬ್ರಿಕಂಟ್‌ನಂತೆ ಕಾರ್ಯನಿರ್ವಹಿಸಿ ಘರ್ಷಣೆಯನ್ನು ಕಡಿಮೆ ಮಾಡುತ್ತದೆ.

15 ನಿಮಿಷಗಳ ನಿಯಮ ಏನು?

ನೀವು ಸಂಧಿವಾತ ಮತ್ತು ಸೊಂಟ ನೋವನ್ನು ಅನುಭವಿಸುತ್ತಿದ್ದರೆ, ಕಠಿಣ ವ್ಯಾಯಾಮದ ಬದಲಿಗೆ ಪ್ರತಿನಿತ್ಯ 15 ನಿಮಿಷಗಳ ಕಾಲ ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಿ.

ನೀವು ಯಾವಾಗ ನಡೆಯಲು ಪ್ರಾರಂಭಿಸಿರುತ್ತೀರೋ ಆಗ ಕೀಲುಗಳ ಮೇಲಿನ ಸ್ವಲ್ಪ ಒತ್ತಡವು ದೇಹದಲ್ಲಿರುವ ವಿಶೇಷ ಗ್ರಾಹಕಗಳನ್ನು (Mechanoreceptors) ಜಾಗೃತಗೊಳಿಸುತ್ತದೆ. ಇವು ಮೆದುಳಿಗೆ ಮತ್ತು ಇಡೀ ದೇಹಕ್ಕೆ “ನಾವು ಚಲಿಸುತ್ತಿದ್ದೇವೆ” ಎಂಬ ಸಂದೇಶವನ್ನು ರವಾನಿಸುತ್ತವೆ. ಈ ಸಂದೇಶವನ್ನು ಸ್ವೀಕರಿಸಿದ ತಕ್ಷಣ, ಕೀಲುಗಳ ನಡುವೆ ಗ್ರೀಸ್‌ನಂತೆ ಕೆಲಸ ಮಾಡುವ ‘ಸೈನೋವಿಯಲ್ ದ್ರವ’ ಉತ್ಪತ್ತಿಯಾಗುತ್ತದೆ. ಇದು ಕೀಲುಗಳ ಸವೆತವನ್ನು ತಡೆದು ಅವುಗಳನ್ನು ಸುಗಮಗೊಳಿಸುತ್ತದೆ.

ಈ ಅಭ್ಯಾಸವು ಹಾನಿಗೊಳಗಾದ ಅಂಗಾಂಶವನ್ನು ಸರಿಪಡಿಸುತ್ತದೆ ಮತ್ತು ಹೊಸದನ್ನು ಸೃಷ್ಟಿಸುತ್ತದೆ. ಏಕೆಂದರೆ, ಹೆಚ್ಚು ನಡೆದಂತೆ ನಿಮ್ಮ ಕೀಲುಗಳು ಬಲವಾಗಿರುತ್ತದೆ.

ಹೆಚ್ಚು ಕುಳಿತುಕೊಳ್ಳುವುದು ಏಕೆ ಅಪಾಯಕಾರಿ?

ದೀರ್ಘಕಾಲ ಕುಳಿತುಕೊಳ್ಳುವುದರಿಂದ ಆಯಾಸ ಉಂಟಾಗುತ್ತದೆ. ಇದರಿಂದ ಸೊಂಟದ ಮುಂಭಾಗದಲ್ಲಿರುವ ಸ್ನಾಯುಗಳು ಬಿಗಿಯಾಗುತ್ತವೆ. ಸ್ನಾಯುಗಳು ಪೂರ್ಣ ಪ್ರಮಾಣದ ಚಲನೆಯನ್ನು ಪಡೆಯುವುದಿಲ್ಲ. ಇದರಿಂದ ಒತ್ತಡವನ್ನು ಅನುಭವಿಸಬೇಕಾಗುತ್ತದೆ.

ಗ್ಲುಟ್ ಬಲ ಹೆಚ್ಚಿಸಿ

ನಾವು ಜಿಮ್ ಅಥವಾ ವ್ಯಾಯಾಮಕ್ಕೆ ಹೋದಾಗ, ದೇಹದ ಮುಂಭಾಗದ ಮೇಲೆ ಹೆಚ್ಚು ಗಮನ ಹರಿಸುತ್ತೇವೆ. ಆದರೆ, ನೋವನ್ನು ಕಡಿಮೆ ಮಾಡಲು ಭೌತಚಿಕಿತ್ಸಕರು ನಮ್ಮ ಸೊಂಟದ ಹಿಂದಿನ ಸ್ನಾಯುಗಳನ್ನು ಬಲಪಡಿಸಲು ಶಿಫಾರಸು ಮಾಡುತ್ತಾರೆ.

ವೇಟ್ ಲಾಸ್ ಇಂಜೆಕ್ಷನ್ ಮೊರೆ ಹೋದ ವಧುಗಳು; ಏನಿದು ಮೌಂಜಾರೊ ಕ್ರೇಜ್?

TAGGED:New formula for relieving hip painwhat is the special technique?
Share This Article
Facebook Twitter Copy Link Print
Previous Article ಜಿಯೋ ಮೊಬೈಲ್‌ ರೀಚಾರ್ಜ್ ಪ್ಲಾನ್‌ಗಳ ‘ಆಟ’ಕ್ಕೆ ಟ್ರಾಯ್ ಬ್ರೇಕ್
Next Article Science Debate ಅಂತರಿಕ್ಷದಲ್ಲಿ ಲೈಂಗಿಕ ಚಟುವಟಿಕೆ ಸಾಧ್ಯವಾ? ಭಾರೀ ಚರ್ಚೆಗೆ ಕಾರಣವಾಯ್ತು ಪೋರ್ನ್‌ಹಬ್ ಕಂಟೆಂಟ್‌! ನಾಸಾ ಹೇಳಿದ್ದೇನು?

Popular Posts

Wall Fungus ಮಳೆಗಾಲದಲ್ಲಿ ಗೋಡೆಗಳ ಮೇಲೆ ಬೂಷ್ಟು ಸಮಸ್ಯೆಯೇ? ದುಬಾರಿ ಕೆಮಿಕಲ್ ಬೇಡ, ಮನೆಯಲ್ಲೇ ಇದೆ ಸುಲಭ ಪರಿಹಾರ

2 Min Read

Pregnancy Skincare Guide ಗರ್ಭಿಣಿಯರೇ ಎಚ್ಚರ..! ನೀವು ಬಳಸುವ ಮೇಕಪ್ ಪ್ರಾಡಕ್ಟ್ ಮಗುವಿಗೆ ಸೇಫ್ ಅಲ್ವಾ? ತಪ್ಪದೇ ಓದಿ ಈ ಸ್ಟೋರಿ

2 Min Read

Cholesterol problem ದೇಶದ ಹತ್ತು ವಯಸ್ಕರಲ್ಲಿ 9 ಮಂದಿಗೆ ಕೊಲೆಸ್ಟ್ರಾಲ್ ಸಮಸ್ಯೆ!

3 Min Read

Techie mysterious death ಬೆತ್ತಲೆಯಾಗಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹ ಹೊತ್ತೊಯ್ದ ಯುವತಿ ನಿಗೂಢ ಸಾವು!

2 Min Read

You Might Also Like

ದೇಶಪ್ರಮುಖ

Today Gold Rate | ಚಿನ್ನದ ಬೆಲೆ ಮತ್ತೆ ಏರಿಕೆ

2 Min Read
ದೇಶಪ್ರಮುಖವಿದೇಶ

P V Sindhu Record ಜಪಾನ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಬರೆದ ಪಿ.ವಿ. ಸಿಂಧು

3 Min Read
ಕರ್ನಾಟಕಪ್ರಮುಖ

Crime news ಆಸ್ತಿ ಕೊಡದ ತಂದೆಯನ್ನು‌ ಕೊಂ*ದು ತಾನೂ ಜೀವ ಕಳೆದುಕೊಂಡ ಮಗ!

1 Min Read
ಆರೋಗ್ಯಕರ್ನಾಟಕ

Karnataka – India’s No.1 Medical Hub: ದೇಶದಲ್ಲೇ ನಂ.1 ಮೆಡಿಕಲ್ ಹಬ್ ಆಗಿ ಕರ್ನಾಟಕದ ಸಾಧನೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?