Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING Today’s Horoscope ಇಂದಿನ ರಾಶಿ ಭವಿಷ್ಯ 01-04-2026, ಬುಧವಾರ, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING Today’s Horoscope ಇಂದಿನ ರಾಶಿ ಭವಿಷ್ಯ 01-04-2026, ಬುಧವಾರ, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

Share
5 Min Read
SHARE

newsics.com

ಶುಭೋದಯ

ಇಂದಿನ ಪಂಚಾಂಗ/ ರಾಶಿ ಭವಿಷ್ಯ

01-04-2026, ಬುಧವಾರ

ಪರಾಭವ ನಾಮ ಸಂವತ್ಸರ ವಸಂತ ಋತು ಚೈತ್ರ ಮಾಸ ಶುಕ್ಲಪಕ್ಷದ ಚತುರ್ದಶಿ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಗಂಡ, ಕರಣ : ಕೌಲವ, ಸೂರ್ಯೋದಯ – 06 – 21 am, ಸೂರ್ಯಾಸ್ತ – 06 – 35 pm,

ಇಂದಿನ ಶುಭಾಶುಭ ಕಾಲ : ರಾಹು ಕಾಲ 12:28 – 14:00, ಯಮಗಂಡ ಕಾಲ 07:53 – 09:25, ಗುಳಿಕ ಕಾಲ 10:57 – 12:28.

* ಹುಣ್ಣಿಮೆ ಆರಂಭ

* ಮಂಗಲಪಾಂಡೆ ಬಲಿದಾನ ದಿನ

* ಸಿದ್ಧಗಂಗಾ ಮಠ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಜನ್ಮದಿನ

=============

ಮೇಷ

ನಿಮ್ಮ ಆತ್ಮವಿಶ್ವಾಸದಿಂದ ಆಗಬೇಕಾದ ಕಾರ್ಯವನ್ನು ಸಾಧಿಸಿಕೊಳ್ಳಬಹುದು.‌ ಹಳೆಯ ಯೋಜನೆಗಳನ್ನು ಇಂದು ಕಾರ್ಯಕ್ಕೆ ತರುವಿರಿ. ವಿದೇಶ ಪ್ರವಾಸವು ನಿಶ್ಚಯವಾಗಲಿದೆ. ನಿಷ್ಠುರವಾಗಿ ವರ್ತಿಸುವುದು ಅವಶ್ಯಕವಾಗಿದೆ. ನಿಮ್ಮವರನ್ನು ಭಿನ್ನಾಭಿಪ್ರಾಯ ಬರದಂತೆ ಇಟ್ಟುಕೊಳ್ಳುವುದೂ ನಿಮ್ಮ ಮುಖ್ಯ.

ನೀವು ಕೆಲವು ಪ್ರಮುಖ ವಿಷಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಮಾನಸಿಕ ನೋವಿನಿಂದ ಹೊರಬರಲು ನಿಮಗೆ ಕಷ್ಟವಾದೀತು. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ.‌

ವೃಷಭ 

ಯಾವುದೋ ಕಾರಣಕ್ಕೆ ಮಾಡಿದ ಪ್ರಯಾಣ ಇನ್ನಾವುದೋ ವಿಚಾರಕ್ಕೆ ಅನುಕೂಲವಾಗಿರುವುದು. ಉತ್ತಮ ಫಲಿತಾಂಶಗಳನ್ನು ಪರೀಕ್ಷೆಯಲ್ಲಿ ಪಡೆಯುತ್ತೀರಿ. ವ್ಯವಹಾರದಲ್ಲಿ ಒಂದು ಹೆಜ್ಜೆ ಮುಂದಿಡು ಧೈರ್ಯ ಮಾಡುವಿರಿ. ಆರ್ಥಿಕ‌ ಸ್ಥಿತಿಯನ್ನು ಯಾರ ಜೊತೆಗೂ ಹಂಚಿಕೊಳ್ಳಲಾರಿರಿ. ಕಛೇರಿಯಲ್ಲಿ ನಿಮ್ಮ ಶ್ರಮವು ಲೆಕ್ಕಕ್ಕೆ ಬಾರದೇ ಹೋದೀತು. ಶ್ರಮಕ್ಕೆ ಫಲವನ್ನು ನಿರೀಕ್ಷಿಸುತ್ತ‌ ಸಮಯವನ್ನು ವ್ಯರ್ಥ ಮಾಡುವಿರಿ. ಮಾತಿನಲ್ಲಿ ಮಾರ್ದವವು ಇಲ್ಲವಾಗುವುದು. ಅತಿಯಾದ ಭಾರದ ವಸ್ತುಗಳನ್ನು ಒಯ್ಯುವಿರಿ.

ಮಿಥುನ 

ಆರ್ಥಿಕವಾಗಿ ಆದ ಬೆಳವಣಿಗೆ ತೃಪ್ತಿ ನೀಡುವುದು. ಪ್ರಯೋಜನವಾಗದ ವಿವಾದಗಳಿಂದ ಸುಮ್ಮನಿರುವಿರಿ. ಅಧ್ಯಾತ್ಮಿಕಕ್ಕೆ ಹೆಚ್ಚು ಒತ್ತುಕೊಡುವಿರಿ. ಭೂ ಮಾರಾಟದಿಂದ ಲಾಭಪ್ರದ. ನಿಮ್ಮ ಕೆಲವು ವಿರೋಧಿಗಳು ನಿಮಗೆ ತೊಂದರೆ ಕೊಡಲು ಪ್ರಯತ್ನಿಸಬಹುದು. ನಿಮ್ಮ ಜಾಣ್ಮೆಯಿಂದ ನೀವು ಸುಲಭವಾಗಿ ಏನನ್ನಾದರೂ ಸಾಧಿಸುವಿರಿ. ಅತಿಯಾದ ಒತ್ತಡದಿಂದ ಹೊರಬರಲು ಸಹೋದ್ಯೋಗಿಗಳ ಸಹಾಯವನ್ನು ಪಡೆಯುವಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಓದು ಹೆಚ್ಚು ಸಿದ್ಧಿಸುವುದು.

ಕರ್ಕಾಟಕ 

ಹಿರಿಯರ ಮಾತನ್ನು ಪಾಲಿಸುವುದು ಅವಶ್ಯಕ. ಒಳ್ಳೆಯ ಕಾರ್ಯಗಳಿಗೆ ಪ್ರಯತ್ನ ಮುಂದುವರಿಯಲಿ. ವಿವಾಹದ ಮಾತುಕತೆಗೆ ಸಂಬಂಧಿಕರ ಮತ್ತು ಸ್ನೇಹಿತರ ಬೆಂಬಲವಿರಲಿದೆ. ನೀವು ಅವಕಾಶಗಳತ್ತ ಗಮನ ಹರಿಸಬೇಕು. ಮಕ್ಕಳ ವಿಚಾರದಲ್ಲಿ ನಿಮಗೆ ಸಮಾಧಾನವು ಸಿಗದೇ ಇರಬಹುದು. ಕೆಟ್ಟವರ ಸಹವಾಸ ಸಿಗುವ ಸಾಧ್ಯತೆ ಇದೆ. ಬೇಡವೆಂದರೂ ಕೆಟ್ಟವರ ಸಹವಾಸವೇ ಸಿಗುವುದು. ನಂಬಿಕೆಯನ್ನು ಕಳೆದುಕೊಳ್ಳಬಹುದು. ನಿಮಗೆ ಸಂಬಂಧಿಸದ ವಿಚಾರದಲದಲಿ ಹೆಚ್ಚು ಮಾತನಾಡುವಿರಿ.

ಸಿಂಹ 

ವಿದ್ಯಾರ್ಥಿಗಳು ತಮ್ಮ ವಿಶೇಷ ವಿಚಾರದ ಅಧ್ಯಯನದತ್ತ ಗಮನ ಹರಿಸುವಿರಿ. ಬೇಡವೆಂದರೂ ಸಹಾಯವನ್ನು ಕೇಳಿ ನಿಮ್ಮ ಬಳಿಬರಬಹುದು. ನೀವು ಇಂದು ನಿಮ್ಮ ಶಕ್ತಿಯನ್ನು ಒಳ್ಳೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಸರ್ಕಾರಿ ಕೆಲಸದಲ್ಲಿ ಬಡ್ತಿಯಿಂದಾಗಿ ಸ್ಥಳದಿಂದ ಸ್ಥಳಕ್ಕೆ ಹೋಗಬೇಕಾಗಬಹುದು. ಖರ್ಚಿನ ಮೇಲೆ‌‌ ನಿಯಂತ್ರಣ ಸಾಧಿಸಬೇಕೆಂದಿದ್ದರೂ ಮತ್ತೆಲ್ಲೋ ಹರಿದು ಹೋಗುವುದು. ಅನವಶ್ಯಕ ಮಾತುಗಳನ್ನು ನಿಲ್ಲಿಸಿ. ವೈವಾಹಿಕ ಜೀವನದ ಸುಖವು ಸಪ್ಪೆ ಎನಿಸಬಹುದು. ಭೂಮಿಯ ವ್ಯವಹಾರಕ್ಕೆ ತಿಳಿವಳಿಕೆಯ ಕೊರತೆಯಿಂದ ಯಾರ ಜೊತೆಗಾದರೂ ಸೇರಿ.

ಕನ್ಯಾ 

ಕಾನೂನು ಸಮಸ್ಯೆಗಳು ಬಗೆಹರಿಯಲಿವೆ. ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕುಟುಂಬದ ವಾತಾವರಣದಿಂದ ನೀವು ಉತ್ತೇಜನಗೊಳ್ಳುವಿರಿ. ಇತರರಿಗೆ ಸಹಾಯ ಮಾಡುವ ಮನಸ್ಥಿತಿ ಹೆಚ್ಚಾಗುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿ ಇಂದು ಹೆಚ್ಚು ಕಾಣಿಸಿಕೊಳ್ಳುವಿರಿ. ವ್ಯಾಪರದಲ್ಲಿ ಗ್ರಾಹಕರ ಜೊತೆ ಕಲಹವಾಗುವ ಸಾಧ್ಯತೆ ಇದೆ. ಅತಿಯಾದ ಪ್ರೀತಿಯಿಂದ ನಿಮಗೇ ತೊಂದರೆಯಾಗುವುದು. ಹಣದ ಸಂಪಾದನೆಗೆ ವಿವಿಧ ಮಾರ್ಗಗಳು ಇದ್ದರೂ ಅದಾವುದೂ ನಿಮಗೆ ಸರಿ ಕಾಣಿಸದು.

ತುಲಾ 

ಇನ್ನೊಬ್ಬರಿಗೆ ಮಾಡುವ ತೊಂದರೆ ನಿಮಗೆ ಬರಲಿದೆ. ಹೊಸ ಕೆಲಸಕ್ಕೆ ಯಾರಿಗೂ ಗೊತ್ತಾಗದಂತೆ ಸೇರುವಿರಿ. ವ್ಯಾಪಾರ ಪಾಲುದಾರರ ಜೊತೆ ವಿವಾದ ಬರುವುದು. ಕಲಾವಿದರು ಉತ್ತಮ ಅವಕಾಶಗಳನ್ನು ಪಡೆಯಬಹುದು. ಮಕ್ಕಳ ಕಡೆಯಿಂದ ನಿರಾಶಾದಾಯಕ ಸಲಹೆಗಳನ್ನು ಕೇಳುವಿರಿ. ಸಂಬಂಧವಿಲ್ಲದ ವಿಚಾರದಲ್ಲಿ‌ ನೀವು ಹಣವನ್ನು ಕಳೆದುಕೊಳ್ಳುವಿರಿ. ದುರಭ್ಯಾಸವು ಅತಿಯಾಗಿ ಮನೆಯಲ್ಲಿ, ಬಂಧುಗಳಿಂದ ನಿಮಗೆ ನಿಂದನೆಯಾಗಲಿದೆ.

ವೃಶ್ಚಿಕ 

ನಿಮ್ಮ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ನೀವು ತೊಡಗಿಸಿಕೊಳ್ಳುತ್ತೀರಿ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸುವಿರಿ. ಮಕ್ಕಳ ಮಾತಿಗೆ ಒಪ್ಪಿದರೂ ಕಷ್ಟ ಬಿಟ್ಟರೂ ಕಷ್ಟ. ವಾಹನದ ಕಾರಣಕ್ಕೆ ಮನೆಯಲ್ಲಿ ಕಲಹವಾಗಲಿದೆ. ಹಳೆಯ ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು. ಲೆಕ್ಕಪತ್ರದ ವಿಚಾರದಲ್ಲಿ ಪಾರದರ್ಶಕತೆ ಇರಲಿ. ಯಾರನ್ನೋ ಸಂಶಯಿಸುತ್ತ ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ.‌

ಧನುಸ್ಸು

ಮಕ್ಕಳ ಶಿಕ್ಷಣದ ವಿಷಯಗಳು ಅನುಕೂಲಕರವಾಗಿರುತ್ತದೆ. ಉಸಿರಾಟದ ಸಮಸ್ಯೆ ಗುಣಮುಖವಾಗುತ್ತದೆ. ಸಮುದಾಯದಲ್ಲಿ ಮನ್ನಣೆ ದೊರೆಯುತ್ತದೆ. ಪ್ರಯಾಣದಿಂದ ಲಾಭವಾಗುತ್ತದೆ. ಕುಟುಂಬದ ಹಿರಿಯರಿಂದ ಬೆಂಬಲ ಸಿಗುತ್ತದೆ. ವಿವಾಹಕ್ಕಾಗಿ ಮಾಡುವ ಶುಭ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ. ಮನೆಯ ಔಷಧಿಯಿಂದ ಅದನ್ನು ಸರಿ ಮಾಡಿಕೊಳ್ಳಿ.

ಮಕರ 

ಹೊಸ ವಸ್ತುಗಳನ್ನು ಖರೀದಿಸಲಾಗುತ್ತದೆ. ಪ್ರೀತಿಪಾತ್ರರ ಪ್ರೋತ್ಸಾಹದಿಂದ ಕೆಲಸಗಳು ನೆರವೇರುತ್ತವೆ. ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಹೊಸ ಯೋಜನೆಯನ್ನು ಪಡೆಯಲು ಅವಕಾಶಗಳು ಬರಲಿವೆ. ವೃತ್ತಿ ಕ್ಷೇತ್ರದಲ್ಲಿ ನೀವು ಉತ್ತಮ ಸ್ಥಾನವನ್ನು ಪಡೆಯಬಹುದು. ಆಪ್ತರಿಂದ ನಿಮಗೆ ಇಷ್ಟವಾದ ವಸ್ತುವು ಪ್ರಾಪ್ತವಾಗುವುದು. ಆಕಸ್ಮಿಕವಾಗಿ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಸಾಲ‌ಪಡೆದವರು ನಿಮ್ಮನ್ನು ಪೀಡಿಸಬಹುದು. ಪಾಲುದಾರಿಕೆಯಲ್ಲಿ ಇಂದು ಸಣ್ಣ ವಿಚಾರಕಗಕೇ ಕಲಹವಾಗುವುದು. ಇಂದು ಅಗತ್ಯವಿರುವಷ್ಟು ಮಾತ್ರವೇ ಮಾತನಾಡಿ.

ಕುಂಭ 

ಮಕ್ಕಳ ವಿಷಯದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಮನೆಯನ್ನು ನವೀಕರಿಸಲು ಸಹ ನೀವು ಹೆಚ್ಚು ಗಮನಹರಿಸುತ್ತೀರಿ. ಕುಟುಂಬದ ಯಾವುದೇ ಸದಸ್ಯರಿಗೆ ನೀಡಿದ ಭರವಸೆಯನ್ನು ನೀವು ಪೂರೈಸಬೇಕಾಗುತ್ತದೆ. ಇಲ್ಲದಿದ್ದರೆ ಅವರು ನಿಮ್ಮ ಜೊತೆ ಅಸಮಾಧಾನಕ್ಕೆ ಕಾರಣ. ಆಕಸ್ಮಿಕ ಧನಲಾಭದಿಂದ ಸಂತಸ. ನಿಮ್ಮ ಪ್ರೀತಿಗೆ ಬೆಲೆ ಸಿಗದೇಹೋದರೂ ಖುಷಿಯಿಂದಲೇ ಇರುವಿರಿ. ಸಂಗಾತಿಯು ನಿಮಗೆ ಒಂದೇ ವಿಚಾರಗಳನ್ನು ಮತ್ತೆ ಮತ್ತೆ ಹೇಳಿ ಬೇಸರ ತರಿಸುವರು. ಮೈ ಚಳಿಯನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ.

ಮೀನ 

ನೀವು ಇಂದಿನ ಗುರಿಯನ್ನು ಸುಲಭವಾಗಿ ಸಾಧಿಸುವಿರಿ. ನಿಮ್ಮ ವ್ಯಾಪಾರ ಚಟುವಟಿಕೆಯು ಎಂದಿಗಿಂತ ಚುರುಕಾಗಿರುವುದು. ಕಾನೂನಿನ ತಿಳಿವಳಿಕೆ ಇರದೇ ವ್ಯವಹಾರದಲ್ಲಿ ನಿಮ್ಮ ಗತಿಗೆ ಮೆಚ್ಚುಗೆ ಇರಲಿದೆ. ಸರಕು ವಹಿವಾಟಿನ ವಿಷಯಗಳಲ್ಲಿ ನೀವು ಅನಾದರ ತೋರಿಸುವುದು ಬೇಡ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಆರೋಗ್ಯವು ಉತ್ತಮವಾಗಿಸಿಕೊಂಡು ಮೊದಲಿನ‌ ಸ್ಥಿತಿಗೆ ಮರಳುವಿರಿ. ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸಿ. ಆಸ್ತಿಯನ್ನು ಮಾರಾಟ‌ಮಾಡುವ ಆಲೋಚನೆ ಇರಲಿದೆ.

 

 

TAGGED:how is your planetary position today?Today's Horoscope 01-04-2026Wednesday
Share This Article
Facebook Twitter Copy Link Print
Previous Article ಪೋಷಕರ ಜೇಬಿಗೆ ಕತ್ತರಿ: ಖಾಸಗಿ ಶಾಲೆಗಳ ಶುಲ್ಕ ಭಾರಿ ಏರಿಕೆ
Next Article ಅವಳಿ ಸಹೋದರರಿಂದ ಗರ್ಭಿಣಿ, ತಂದೆ ಯಾರೆಂದು ತಿಳಿಯಲಾಗದ ಮಹಿಳೆಗೆ ಕೈಕೊಟ್ಟ ಡಿಎನ್ಎ ಟೆಸ್ಟ್

Popular Posts

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

You Might Also Like

ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?