newsics.com
https://youtube.com/shorts/wcgOU8WO_jc?si=ko9vW9TLLev8Rg2l
ಜನಪ್ರಿಯ ಯುಟ್ಯೂಬರ್‌ಗಳಾದ ಸಕೀಬ್ ಸೈಫಿ ಮತ್ತು ಕನ್ನಿಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲವ್ ಜಿಹಾದ್ ಆರೋಪ ಹಾಗೂ ವಿರೋಧಗಳ ನಡುವೆಯೂ ಈ ಜೋಡಿ ಹಿಂದೂ ಮತ್ತು ಇಸ್ಲಾಂ ಎರಡೂ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದಾರೆ.
ಜನಪ್ರಿಯ ಯುಟ್ಯೂಬರ್, ಕಂಟೆಂಟ್ ಕ್ರಿಯೇಟರ್ ಆಗಿರುವ ಸಕೀಬ್ ಸೈಫಿ ಮತ್ತು ಕನ್ನಿಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಇವರಿಬ್ಬರ ಪ್ರೀತಿ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಕಾಮಿಡಿ ವಿಡಿಯೋಗಳ ಮೂಲಕ ಸಕೀಬ್ ಮತ್ತು ಕನ್ನಿಕಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಇಬ್ಬರ ಧರ್ಮ ಬೇರೆಯಾಗಿರೋದರಿಂದ ಸಾಕಿಬ್ ಮತ್ತು ಕನ್ನಿಕಾ ಎರಡು ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಮೊದಲು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಜೋಡಿ, ನಂತರ ಇಸ್ಲಾಂನಂತೆ ನಿಖಾ ನೆರವೇರಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಮದುವೆಯ ಫೋಟೋ ಮತ್ತು ವಿಡಿಯೋಗಳು ಹರಿದಾಡುತ್ತಿವೆ. ಈ ಜೋಡಿಯ ಫೋಟೋಗಳನ್ನು ಶೇರ್ ಮಾಡಿಕೊಳ್ತಿರೋ ಜನರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ.
ಮದುವೆಗೆ ತೀವ್ರ ವಿರೋಧ ವ್ಯಕ್ತವಾಗಿದ್ರೂ ಸಕೀಬ್ ಮತ್ತು ಕನ್ನಿಕಾ ಮಾತ್ರ ಯಾವುದನ್ನು ಲೆಕ್ಕಿಸದೇ ಕುಟುಂಬಸ್ಥರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಿಂದೂ ಸಂಪ್ರದಾಯದಂತೆ ಎಲ್ಲಾ ಮದುವೆಯಲ್ಲಿ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಲಾಗಿದೆ. ತದನಂತರ ಇಸ್ಲಾಂ ಸಂಪ್ರದಾಯದಂತೆಯೂ ಪ್ರತಿಯೊಂದು ಶಾಸ್ತ್ರಗಳು ನಡೆದಿವೆ. ಈ ಎಲ್ಲಾ ಫೋಟೋ ಮತ್ತು ವಿಡಿಯೋಗಳನ್ನು ಸಕೀಬ್ ಮತ್ತು ಕನ್ನಿಕಾ ಶೇರ್ ಮಾಡಿಕೊಂಡಿದ್ದಾರೆ.
ಹಿಂದೂ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಕನ್ನಿಕಾ ಕೆಂಪು ಬಣ್ಣದ ಸುಂದರವಾದ ಆಕರ್ಷಕ ಲೆಹಂಗಾ ಮಾದರಿಯ ಡ್ರೆಸ್ ಧರಿಸಿದ್ರೆ, ಸಕೀಬ್ ಸಿಲ್ವರ್ ಕಲರ್ ಶೇರ್ವಾನಿ ಧರಿಸಿ ಮಿಂಚಿದ್ದಾರೆ. ಉತ್ತರ ಭಾರತದ ಸಂಪ್ರದಾಯದಂತೆ ಸಾಕೀಬ್, ತಿಲಕಧಾರಿಯಾಗಿ ಕೈಯಲ್ಲಿ ಖಡ್ಗ ಹಿಡಿದುಕೊಂಡಿದ್ದಾರೆ. ಇಸ್ಲಾಂ ಸಂಪ್ರದಾಯದ ಮದುವೆಯಲ್ಲಿ ಇಬ್ಬರು ಮಿಲ್ಕಿ ಕ್ರೀಮ್ ಕಲರ್ ಉಡುಗೆಯಲ್ಲಿ ಮಿಂಚಿದ್ದಾರೆ.
Rashmika Mandanna ಬೆಂಗಳೂರಲ್ಲಿ ರಶ್ಮಿಕಾ ಮಂದಣ್ಣ… ಏರ್‌ಪೋರ್ಟ್‌ನಲ್ಲಿ ಶ್ರೀವಲ್ಲಿಗೆ ಸಿಕ್ತಂತೆ ಕ್ಯೂಟ್ ಹಾರ್ಟ್!