newsics.com
https://youtube.com/shorts/wcgOU8WO_jc?si=ko9vW9TLLev8Rg2l
ಇಂದಿನ ದಿನಗಳಲ್ಲಿ ಹೃದಯಾಘಾತ ಆಗಿ ಪ್ರಾಣ ಬಿಡುತ್ತಿರುವವರ ಸಂಖ್ಯೆ ದಿನಾ ಹೋದ ಹಾಗೆ ಹೆಚ್ಚಾಗುತ್ತಿರುವುದು, ನಿಜಕ್ಕೂ ಆತಂಕ ಮೂಡಿಸುತ್ತಿದೆ.ಈಗಾಗಲೇ ಇದಕ್ಕೆ ಸಂಬಂಧ ಪಟ್ಟ ಎಷ್ಟೋ ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿವೆ.
ಜೀವನಶೈಲಿ, ಆಹಾರದಲ್ಲಿ ಅಗತ್ಯ ಬದಲಾವಣೆ ರೂಢಿಸಿಕೊಳ್ಳುವ ಜತೆಗೆ ಆಗಾಗ್ಗೆ ಹೃದಯದ ಆರೋಗ್ಯದ ಪರೀಕ್ಷೆಗೂ ಒಳಪಡುತ್ತಿದ್ದಾರೆ. ಪರೀಕ್ಷೆಗೆ ಒಳಪಟ್ಟಾಗ ‘ಹೃದಯಾಘಾತಕ್ಕೆ ಕಾರಣವಾಗಬಲ್ಲ ಯಾವುದೇ ಗಂಭೀರ ಲಕ್ಷಣಗಳು ಇಲ್ಲ ‘ ಎಂದು ವರದಿ ಬರುತ್ತದೆ.
ಆದರೆ, ಪರೀಕ್ಷೆಗಳು ಸುರಕ್ಷಿತ ಎಂದು ಗುರುತಿಸಿದ್ದ ಶೇ.80ರಷ್ಟು ಭಾರತೀಯರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ ಎಂಬ ಆಘಾತಕಾರಿ ವರದಿ ಬಯಲಾಗಿದೆ.
ದೆಹಲಿಯ ಜಿಬಿ ಪಂತ್ ಆಸ್ಪತ್ರೆ ಸಂಶೋಧಕರು 5,000ಕ್ಕೂ ಹೆಚ್ಚು ಭಾರತೀಯ ರೋಗಿಗಳ ಮೇಲೆ ನಡೆಸಿದ ವಿಶ್ಲೇಷಣೆಯಲ್ಲಿ ದಿಗಿಲುಗೊಳಿಸುವ ಈ ಸತ್ಯ ಹೊರಬಿದ್ದಿದೆ. ಹೃದಯದ ಅಪಾಯ ಅಳೆಯುವ ಈ ಸಾಧನಗಳು ಹೆಚ್ಚಾಗಿ ಪಾಶ್ಚಿಮಾತ್ಯ ದೇಶಗಳ ಮಾದರಿಗಳನ್ನು ಅನುಸರಿಸಿದ್ದು, ಭಾರತೀಯರಲ್ಲಿ ಮಾತ್ರವೇ ಕಂಡುಬರಬಹುದಾದ ವಿಶಿಷ್ಟ ಅಪಾಯದ ಮಾದರಿಗಳನ್ನು ಗುರುತಿಸುವಲ್ಲಿ ವಿಫಲವಾಗುತ್ತಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಪಾಶ್ಚಿಮಾತ್ಯ ಸಾಧನಗಳು ರಕ್ತನಾಳದಲ್ಲಿನ ಕೊಲೆಸ್ಟ್ರಾಲ್ ಮತ್ತು ವಯಸ್ಸಿನ ಆಧಾರದಲ್ಲಿ ಅಪಾಯ ತಿಳಿಸುತ್ತವೆ. ಆದರೆ, ಭಾರತೀಯರ ದೇಹದ ವಿಶಿಷ್ಟ ಲಕ್ಷಣಗಳಿಗೆ ಅನುಗುಣವಾಗಿ ಪ್ರತ್ಯೇಕ ಸಾಧನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಈ ಸಂಶೋಧನೆ ತಿಳಿಸಿದೆ.