Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬೆಳಗಾವಿಯ ರೈತನ ಮೀನು ಸಾಕಾಣಿಕೆಗೆ ಪ್ರಧಾನಿ ನರೇಂದ್ರ ಮೋದಿ ಫಿದಾ
ದೇಶಕರ್ನಾಟಕಪ್ರಮುಖ

ಬೆಳಗಾವಿಯ ರೈತನ ಮೀನು ಸಾಕಾಣಿಕೆಗೆ ಪ್ರಧಾನಿ ನರೇಂದ್ರ ಮೋದಿ ಫಿದಾ

Share
1 Min Read
SHARE

newsics.com

ಬೆಳಗಾವಿಯ ಯುವ ರೈತನೊಬ್ಬನ ಅದ್ಭುತ ಸಾಧನೆಗೆ ಈಗ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಬೆರಗಾಗಿದ್ದಾರೆ. ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಈ ಕನ್ನಡಿಗನ ಹೆಸರು ದೇಶಾದ್ಯಂತ ಮೊಳಗಿದೆ.

ಬಿ.ಎ. ಮುಗಿಸಿದ್ದ ರಾಜುಗೆ ದೇಶ ಕಾಯಲು ಆರ್ಮಿ ಸೇರಬೇಕು ಎಂಬ ದೊಡ್ಡ ಕನಸಿತ್ತು. ಆದರೆ ಅಲ್ಲಿ ಅವಕಾಶ ಸಿಗಲಿಲ್ಲ. ಬಳಿಕ ಹೈನುಗಾರಿಕೆ ಮಾಡುವ ಯೋಚನೆ ಬಂತಾದರೂ ಅದರಲ್ಲಿ ಲಾಭದ ಖಾತ್ರಿ ಇರಲಿಲ್ಲ. ಆಗ ಹೊಳೆದದ್ದೇ ಈ ಮೀನು ಕೃಷಿ! ಸುಮ್ಮನೆ ಕಣಕ್ಕಿಳಿಯದ ರಾಜು, ಬರೋಬ್ಬರಿ 1 ವರ್ಷಗಳ ಕಾಲ ತುಮಕೂರು, ಮಂಡ್ಯ, ಆಂಧ್ರಪ್ರದೇಶ ಸುತ್ತಿ ಅತ್ಯಾಧುನಿಕ ‘ಬಯೋಪ್ಲಾಕ್’  ಮೀನು ಕೃಷಿಯ ಸಂಪೂರ್ಣ ತರಬೇತಿ ಪಡೆದುಕೊಂಡರು

ಇದೀಗ ಒಂದು ಎಕರೆಯಲ್ಲಿ ಕೃಷಿ ಹೊಂಡದಲ್ಲಿ ಬಯೋಪ್ಲಾಕ್ ತಂತ್ರಜ್ಞಾನವನ್ನು ಬಳಸಿ ಕುಚ್ಚು(ಮರಲ್) ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಮೀನುಗಾರಿಕೆಗೆ 30 ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಆರಂಭಿಸಿರುವ ಶಿವಲಿಂಗಪ್ಪ, ಕಳೆದ ಮೂರು ವರ್ಷದಿಂದ ಮೀನು ಸಾಗಾಣಿಕೆ ಮಾಡುತ್ತಿದ್ದಾರೆ.

ಒಂದು ಎಕರೆ ಜಮೀನಿನಲ್ಲಿ ನಾಲ್ಕು ಕೃಷಿ ಹೊಂಡ‌ ನಿರ್ಮಿಸಿ 15 ಸಾವಿರ ಮೀನುಗಳನ್ನ ಸಾಗಾಣಿಕೆ ಮಾಡಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಿಂದ ಮೀನು‌ ಮರಿಗಳನ್ನ ತರುತ್ತಾರೆ. ಏಳರಿಂದ ಎಂಟು‌ ತಿಂಗಳವರೆಗೆ ಒಂದು ಬ್ಯಾಚ್ ರೆಡಿಯಾಗುತ್ತೆ. ಮೀನು ಬೇಕಾದವರು ಇವರ ಕೃಷಿ ಹೊಂಡಕ್ಕೆ ಬಂದು ತೆಗೆದುಕೊಂಡು ಹೋಗುತ್ತಾರೆ. ಪ್ರತಿ 15 ದಿನಕ್ಕೊಮ್ಮೆ ಕೃಷಿ ಹೊಂಡದ ನೀರು ಬದಲಾವಣೆ ಮಾಡುತ್ತಾರೆ.

ರಾಜು ಅವರ ಈ ಹೊಸ ಐಡಿಯಾ ಈಗ ಬಂಪರ್ ಲಾಭ ತಂದುಕೊಟ್ಟಿದೆ. ಮೀನು ಸಾಕಾಣಿಕೆ ಶುರು ಮಾಡಿದ ಕೇವಲ 8 ತಿಂಗಳಲ್ಲಿ ಮೊದಲ ಬ್ಯಾಚ್ ಮಾರಾಟಕ್ಕೆ ಸಿದ್ಧವಾಗಿ ಬರೋಬ್ಬರಿ 25 ಲಕ್ಷ ರೂ. ಆದಾಯ ತಂದುಕೊಟ್ಟಿದೆ.ರಾಜು ಅವರ ಈ ಸ್ಫೂರ್ತಿದಾಯಕ ಯಶೋಗಾಥೆ ದೆಹಲಿಯವರೆಗೂ ತಲುಪಿದ್ದು, ಇಂದಿನ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

https://www.newsics.com/2026/03/30/actor-prakash-rajs-mother-passed-away/

TAGGED:Prime Minister Narendra Modi congratulates Belgaum farmer for fish farming
Share This Article
Facebook Twitter Copy Link Print
Previous Article ನಟ ಪ್ರಕಾಶ್ ರಾಜ್ ತಾಯಿ ವಿಧಿವಶ
Next Article ಆರೋಗ್ಯವಂತರೆಂಬ ವರದಿ ಪಡೆದ ಶೇ.80 ಭಾರತೀಯರಿಗೇ ಹೃದಯಾಘಾತ!

Popular Posts

Health Care ಊಟದ ನಂತರ ಸೋಂಪು ತಿಂದ್ರೆ ದೇಹದಲ್ಲಾಗುತ್ತೆ ಈ ಚಮತ್ಕಾರಿ ಬದಲಾವಣೆಗಳು

2 Min Read

Cancer Drugs Hike ಕೀಮೋಥೆರಪಿ ಔಷಧಿಗಳ ಬೆಲೆ ಹೆಚ್ಚಳಕ್ಕೆ ಕೇಂದ್ರ ಒಪ್ಪಿಗೆ

1 Min Read

ನಿಂತಲ್ಲೇ ನಿಂತಿದ್ದರೆ ವೃದ್ಧನ ಜೀವವುಳಿಯುತ್ತಿತ್ತು : ಆದರೆ ಆಗಿದ್ದೇ ಬೇರೆ

1 Min Read

ಮುಗಿಯದ ಖಾತೆ ಕ್ಯಾತೆ: ಹೈಕಮಾಂಡ್‌ಗೆ ತಲೆನೋವು

2 Min Read

You Might Also Like

ಕರ್ನಾಟಕಪ್ರಮುಖ

ಆಝಾನ್ ಕೊಡುತ್ತಿದ್ದ ವೇಳೆ ಹೃದಯಾಘಾತದಿಂದಾಗಿ ಧರ್ಮಗುರು ನಿಧನ

1 Min Read
ಕರ್ನಾಟಕದೇಶಪ್ರಮುಖ

Hardik Pandya ಬೆಂಗಳೂರಿನಲ್ಲಿ ಹಾರ್ದಿಕ್, ಗೆಳತಿ ಪರದಾಟ : ಡಯಾಗ್ನೋಸ್ಟಿಕ್ಸ್ ಕೇಂದ್ರಕ್ಕೆ ಬಂದಿದ್ದೇಕೆ?

1 Min Read
ಕರ್ನಾಟಕದೇಶಪ್ರಮುಖ

ಮಾವಿನಹಣ್ಣು ತಿಂದು ಸಹೋದರಿಯರು ಸಾವು : ಮೂವರು ಅಸ್ವಸ್ಥ

1 Min Read
ಕರ್ನಾಟಕದೇಶಪ್ರಮುಖ

ಕೊಟ್ಟಿಯೂರು ವಿವಾದ: ಕನ್ನಡಿಗರು ವೈರಲ್ ಆದ ದೇವಾಲಯಗಳಿಗೆ ಭೇಟಿ ನೀಡುವ ಶೋಕಿ ಬಿಡಬೇಕು- ಕನ್ನಡಿಗರಿಗೆ ಮಲಯಾಳಿಗಳ ಪಾಠ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?