newsics.com/ನ್ಯೂಸಿಕ್ಸ್
ಕೇರಳದ ಪ್ರಸಿದ್ಧ ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ವೈಶಾಖ ಮಹೋತ್ಸವದ ವೇಳೆ ಕರ್ನಾಟಕದ ಭಕ್ತರ ಮೇಲೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ತೀವ್ರ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಇನ್ನು ಅತ್ತ ಕನ್ನಡಿಗರ ಈ ಆರೋಪಗಳಿಗೆ ಕೇರಳದ ಹಲವು ಜನರು ವಿಡಿಯೊಗಳನ್ನು ಮಾಡಿ ಉತ್ತರ ನೀಡಿದ್ದು, ಇಲ್ಲಿ ಯಾರೂ ಭಾಷೆಯನ್ನು ನೋಡಿ ನಡೆದುಕೊಳ್ಳುತ್ತಿಲ್ಲ, ಮೊದಲು ಒಂದೇ ಸಾರಿ ಹಲವಾರು ಮಂದಿ ಆಗಮಿಸುವುದನ್ನು ಬಿಡಿ, ಇದು ಯಾತ್ರಾಸ್ಥಳವಲ್ಲ, ಸ್ಥಳೀಯರು ಆರಾಧಿಸಲು ಇರುವ ಸ್ಥಳ, ಇದರ ಇತಿಹಾಸ ತಿಳಿಯದೇ ಮಾತನಾಡಬೇಡಿ ಎಂದಿದ್ದಾರೆ.
ಇಷ್ಟೇ ಅಲ್ಲದೇ ಇಲ್ಲಿಗೆ ಬರುವ ಕನ್ನಡಿಗರೇ ಇಲ್ಲಿ ಇಷ್ಟರ ಮಟ್ಟಿಗೆ ಜನ ಸೇರಲು ಕಾರಣ ನೀವೇ, ನಿಮ್ಮ ರಾಜ್ಯದಿಂದಲೇ ಹೆಚ್ಚಿನ ಜನ ಹರಿದುಬಂದು ಈ ರೀತಿಯ ಸಮಸ್ಯೆ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು ಕನ್ನಡಿಗರು ದೇವಾಲಯದ ವಿರುದ್ಧ ದೂರುತ್ತಿರುವ ವಿಡಿಯೊವನ್ನು ಶೇರ್ ಮಾಡಿ ತಮ್ಮ ಮನೆ ದೇವರ ದೇವಾಲಯಗಳಿಗೆ ಭೇಟಿ ನೀಡದ ಕನ್ನಡಿಗರು ಆನ್‌ಲೈನ್‌ನಲ್ಲಿ ವೈರಲ್ ಆದ ದೇವಾಲಯಗಳಿಗೆ ಭೇಟಿ ನೀಡುವ ಶೋಕಿ ಮಾಡುವುದನ್ನು ಬಿಡಬೇಕು ಎಂದು ಬರೆದುಕೊಂಡಿದ್ದಾರೆ.
ಮತ್ತೋರ್ವ ವ್ಯಕ್ತಿ ಕನ್ನಡಿಗರು ದೂರುವ ಮುನ್ನ ಕೇರಳದ ನಿಯಮವನ್ನು ಅನುಸರಿಸುವುದನ್ನು ಕಲಿಯಿರಿ. ಶಿಸ್ತಿನಿಂದ ಸರತಿ ಸಾಲಿನಲ್ಲಿ ನಿಲ್ಲದೇ ತಳ್ಳಾಟ ಮಾಡುತ್ತೀರ, ರಸ್ತೆಗಳಲ್ಲಿ ಅನಗತ್ಯವಾಗಿ ಓವರ್ ಟೇಕ್ ಮಾಡುತ್ತೀರ ಇದನ್ನೆಲ್ಲ ಬಿಟ್ಟು ಸರಿಯಾಗಿ ನಡೆದುಕೊಳ್ಳಿ ಎಂದು ಪಾಠ ಮಾಡಿದ್ದಾರೆ.
ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ