newsics.com
ಇಸ್ರೇಲ್, ಇರಾನ್ ನಡುವಿನ ಯುದ್ಧ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಸೋಮವಾರ (ಮಾ.23) ಇರಾನ್ ನ ಎರಡು ಡೋನ್ ಗಳನ್ನು ಪೂರ್ವ ಪ್ರದೇಶದಲ್ಲಿ ಹೊಡೆದುರುಳಿಸಿರುವುದಾಗಿ ಸೌದಿ ಅರೇಬಿಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
ರಿಯಾದ್ ಅನ್ನು ಗುರಿಯಾಗಿರಿಸಿಕೊಂಡು ಇರಾನ್ ನಡೆಸಿದ ಕ್ಷಿಪಣಿ ಆಳಿಯನ್ನು ಏರ್ ಡಿಫೆನ್ಸ್ ವಿಫಲಗೊಳಿಸಿದ್ದು, ಎರಡನೇ ಕ್ಷಿಪಣಿಯನ್ನು ಜನವಸತಿ ಇಲ್ಲದ ಪ್ರದೇಶದಲ್ಲಿ ಧ್ವಂಸಗೊಳಿಸಿರುವುದಾಗಿ ಅಲ್ ಝಜೀರಾ ವರದಿ ಮಾಡಿದೆ.
ದೇಶದ ಪೂರ್ವ ಭಾಗದಲ್ಲಿ ಇರಾನ್ ನ ಮೂರು ಡ್ರೋನ್ ಗಳನ್ನು ಧ್ವಂಸಗೊಳಿಸಿರುವುದಾಗಿ ಸೌದಿ ಅರೇಬಿಯಾ ಹೇಳಿದೆ. ಮತ್ತೊಂದೆಡೆ ಅಬುಧಾಬಿಯಲ್ಲಿ ಇರಾನ್ ನ ಕ್ಷಿಪಣಿಯನ್ನು ಏರ್ ಡಿಫೆನ್ಸ್ ಹೊಡೆದುರುಳಿಸಿದ್ದು, ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊರ್ಮುಂಜ್ ನಿರ್ಬಂಧ ತೆರವಿಗೆ ಇರಾನ್ ಗೆ 48 ಗಂಟೆಗಳ ಡೆಡ್ ಲೈನ್ ನೀಡಿದ್ದು, ಒಂದು ವೇಳೆ ನಿರ್ಬಂಧ ತೆರವುಗೊಳಿಸದಿದ್ದರೆ ಇಂಧನ ಮೂಲಸೌಕರ್ಯ ಧ್ವಂಸಗೊಳಿಸುವುದಾಗಿ ಅಮೆರಿಕ ಕಟು ಎಚ್ಚರಿಕೆಯನ್ನು ನೀಡಿದೆ. ಇದಕ್ಕೆ ತಿರುಗೇಟು ನೀಡಿರುವ ಇರಾನ್, ಹೇಯ್ ಟ್ರಂಪ್…ನಮ್ಮನ್ನು ಎಚ್ಚರಿಸಿದ್ದಕ್ಕೆ ಧನ್ಯವಾದಗಳು. ನಮ್ಮ ಮೇಲೆ ದಾಳಿ ಮಾಡಿದ್ರೆ ಕೊಲ್ಲಿಯ ವಿದ್ಯುತ್, ನೀರು ಶುದ್ದೀಕರಣ ಘಟಕವನ್ನು ನಾಶಮಾಡುವುದಾಗಿ ಸವಾಲು ಹಾಕಿದೆ.