Subscribe ನ್ಯೂಸಿಕ್ಸ್ ಕನ್ನಡ
newsics.com
ಹುಬ್ಬಳ್ಳಿಯಲ್ಲಿ ನಡೆದ ಕ್ರಾರ್ಯಕ್ರಮದಲ್ಲಿ ಬಾಲಕನೊಬ್ಬ ತನ್ನ ಪೋಷಕರಿಂದ ತಪ್ಪಿಸಿಕೊಂಡಿದ್ದನು. ಆಗ ಸೋನ್ ನಿಗಮ್ ಬಾಲಕನಿಗೆ ಪೋಷಕರನ್ನು ಹುಡುಕಲು ಸಹಾಯ ಮಾಡಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಈ ವಿಡಿಯೊವನ್ನು ಸೋನು ನಿಗಮ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಶ್ರೀ ಸಾಯಿ ಎಂಬ ಯುವಕ ಕಾರ್ಯಕ್ರಮಕ್ಕೆ ಬರುತ್ತಿದ್ದ ವೇಳೆ ತನ್ನ ಕುಟುಂಬದಿಂದ ಬೇರ್ಪಟ್ಟಿದ್ದ. ಇದನ್ನು ಗಮನಿಸಿದ ಸೋನು ನಿಗಮ್ ಬಾಲಕನನ್ನು ಸಮಾಧಾನ ಮಾಡುತ್ತ ವೇದಿಕೆಯ ಮುಂಭಾಗಕ್ಕೆ ಕರೆದುಕೊಂಡು ಬಂದರು. ನಂತರ ಬಾಲಕನಿಗಾಗಿ ಒಂದು ಹಾಡನ್ನೂ ಹಾಡಿದ್ದಾರೆ. ಜತೆಗೆ ಬಾಲಕನೊಂದಿಗೆ ಲಘು ನೃತ್ಯವನ್ನು ಮಾಡಿದ್ದಾರೆ.ಶ್ರೀ ಸಾಯಿ ಆ ಜಾವೋ, ಮಮ್ಮಿ ಪಾಪಾ ಇಸ್ಕೋ ಲೇ ಜಾವೋ… ಇಸ್ಕೆ ಮಮ್ಮಿ ಪಾಪಾ ಖೋ ಗಯೇ, ಜಲ್ಲಿ ಆಕೇ ಇಸ್ಕೋ ಲೇ ಜಾವೋ’ ಎಂದು ಸೋನು ನಿಗಮ್ ಹಾಡಿದ್ದಾರೆ.’ಹುಬ್ಬಳ್ಳಿಯಲ್ಲಿ 30,000 ಜನರ ಗುಂಪಿನಲ್ಲಿ ಶ್ರೀ ಸಾಯಿ ಪೋಷಕರಿಂದ ತಪ್ಪಿಸಿಕೊಂಡು ಭಯಗೊಂಡಿದ್ದ. ನನ್ನನ್ನು ಕಂಡ ನಂತರ ಅವನಿಗೆ ಭಯ ಹೋಯಿತು. ಮತ್ತೆ ಅವನು ಕಳೆದುಹೋಗಿಲ್ಲ ಎಂದು ಭಾವಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.ನಂತರ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿದ್ದ ತಂಡವು ಮಗುವಿನ ಚಿಕ್ಕಪ್ಪನನ್ನು ಹುಡುಕಿ ಬಾಲಕನನ್ನು ಅವರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ. ಫೆಬ್ರುವರಿ 14ರಂದು ಲಖನೌನಲ್ಲಿ ಮುಂದಿನ ಕಾರ್ಯಕ್ರಮ ನಡೆಯಲಿದೆ.
https://www.instagram.com/reel/DUiIKNWjEQP/?igsh=aTdqb2Z0b3dvZ2Nx
ಚಂದ್ರಮೌಳೇಶ್ವರ ದನಗಳ ಜಾತ್ರೆಯಲ್ಲಿ ₹17 ಲಕ್ಷಕ್ಕೆ ಹಳ್ಳಿಕಾರ್ ಎತ್ತು ಮಾರಾಟ