Subscribe ನ್ಯೂಸಿಕ್ಸ್ ಕನ್ನಡ
newsics.com
ಬಿಗ್ ಬಾಸ್ ಖ್ಯಾತಿಯ ವಡಾ ಪಾವ್ ಗರ್ಲ್ ಚಂದ್ರಿಕಾ ದೀಕ್ಷಿತ್, ತನ್ನ ಪತಿ ಯುಗಮ್ ಗೆರಾ ವಿರುದ್ಧ ಮೋಸದ ಆರೋಪ ಮಾಡಿದ ಬೆನ್ನಲ್ಲೇ, ತಾವೇ ನಿಗೂಢ ವ್ಯಕ್ತಿಯೊಂದಿಗೆ ಮದುವೆಯಾದಂತೆ ಕಾಣುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹಿಂದಿ ಬಿಗ್ಬಾಸ್ ಒಟಿಟಿ-3ಯಲ್ಲಿ ಹಲವರ ಹೃದಯ ಗೆದ್ದ ವಡಾ ಪಾವ್ ಗರ್ಲ್, ತನ್ನ ಪತಿ ಯುಗಮ್ ಗೆರಾ ತನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿರುವ ವೀಡಿಯೊಗಳು ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡ ನಂತರ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಆದರೆ ಈಗ ಅವರೇ ಸ್ವತಃ ನಿಗೂಢ ವ್ಯಕ್ತಿಯೊಂದಿಗೆ ಮದುವೆಯಾದಂತೆ ಕಾಣುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ಫೋಟೋಗಳು ವೈರಲ್ ಆಗಿವೆ.
ಚಂದ್ರಿಕಾ ದೀಕ್ಷಿತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆ ಸಮಾರಂಭದಂತೆ ಕಾಣುವ ಚಿತ್ರಗಳನ್ನು ಹಂಚಿಕೊಂಡು ಕೊನೆಗೂ ಎಂದು ಬರೆದಿದ್ದಾರೆ. ಹಿಂದಿನ ವೀಡಿಯೊಗಳಲ್ಲಿ, ಅವರು ತಮ್ಮ ಪತಿ ಯುಗಮ್ ಗೆರಾ ಅವರು ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ಆದರೆ ಈಗ ಇವರೇ ನಿಗೂಢ ವ್ಯಕ್ತಿಯೊಂದಿಗೆ ವೀಡಿಯೊಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದ್ದಾರೆ. ಹೀಗಾಗಿ ಇದೊಂದು ಪಬ್ಲಿಸಿಟಿ ಗಿಮಿಕ್ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಕಳೆದ ಬಾಲಕನ ಪೋಷಕರಿಗೊಪ್ಪಿಸಿದ ಸೋನು ನಿಗಮ್; ವೈರಲ್ ವಿಡಿಯೋ ನೋಡಿ