Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಟಾಲಿವುಡ್, ಬಾಲಿವುಡ್ ಎರಡರಲ್ಲೂ ಗುರುತಿಸಿಕೊಂಡಿರುವ ಹಿರಿಯ ನಟಿ ಟಬು. 54 ವರ್ಷವಾದರೂ ಗ್ಲಾಮರ್, ಟ್ಯಾಲೆಂಟ್ ಕಡಿಮೆಯಾಗಿಲ್ಲ. ಮದುವೆಯಾಗದೆ ಬ್ಯಾಚುಲರ್ ಜೀವನ ನಡೆಸುತ್ತಿದ್ದಾರೆ. ಈ ಹಿಂದೆ ನಾಗಾರ್ಜುನ ಜೊತೆ ಅಫೇರ್ ಇದೆ ಎಂಬ ವದಂತಿಗಳು ಹಬ್ಬಿದ್ದವು.
54ನೇ ವಯಸ್ಸಲ್ಲೂ ಯುವ ನಟಿಯರಿಗೆ ಪೈಪೋಟಿ ನೀಡುತ್ತಿದ್ದಾರೆ. ಇತ್ತೀಚೆಗೆ ತನಗಿಂತ 24 ವರ್ಷ ಚಿಕ್ಕ ನಟ ಇಶಾನ್ ಖಟ್ಟರ್ ಜೊತೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿ ಅಚ್ಚರಿ ಮೂಡಿಸಿದ್ದರು. ‘ದಿ ಸೂಟಬಲ್ ಬಾಯ್’ ವೆಬ್ ಸರಣಿಯ ಈ ದೃಶ್ಯಗಳು ಚರ್ಚೆಗೆ ಕಾರಣವಾಗಿದ್ದವು.
ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವ ಟಬು, ಟಾಲಿವುಡ್‌ನಿಂದ ದೂರ ಉಳಿದಿದ್ದಾರೆ. 2020ರಲ್ಲಿ ಬಂದ ‘ಅಲಾ ವೈಕುಂಠಪುರಮುಲೋ’ ನಂತರ ಅವರು ತೆಲುಗು ಸಿನಿಮಾ ಮಾಡಿಲ್ಲ. ಆ ಚಿತ್ರದ ನಂತರ ಮತ್ತೆ ತೆಲುಗಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಅಲಾ ವೈಕುಂಠಪುರಮುಲೋ’ ನಂತರ ಟಬು ತೆಲುಗು ಸಿನಿಮಾ ಮಾಡಿಲ್ಲ. ಬಾಲಿವುಡ್‌ನಲ್ಲಿ ಬ್ಯುಸಿ ಇರುವುದೇ ಇದಕ್ಕೆ ಕಾರಣ. ಅಲ್ಲಿ ಅವರಿಗೆ ಸೀರಿಯಸ್, ಬೋಲ್ಡ್ ಪಾತ್ರಗಳು ಸಿಗುತ್ತಿವೆ. ಕಥೆ ಇಷ್ಟವಾದರೆ ಮಾತ್ರ ತೆಲುಗು ಸಿನಿಮಾ ಒಪ್ಪಿಕೊಳ್ಳುತ್ತಾರೆ ಎನ್ನಲಾಗಿದೆ.