Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಆರೋಗ್ಯ ಸುಧಾರಿಸಲು ಸಾಧ್ಯವಿದೆ. ಕ್ಯಾನ್ಸರ್, ಡಯಾಬಿಟಿಸ್ ಸೇರಿದಂತೆ ಇನ್ನಿತರ ಮಾರಕ ರೋಗಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಬೆಳಗ್ಗೆ ಎದ್ದ ತಕ್ಷಣ ಬ್ಲ್ಯಾಕ್ ಕಾಫಿ ಸೇವಿಸುವುದರಿಂದ ಮಿದುಳು ಚುರುಕಾಗುತ್ತದೆ. ನಿಮ್ಮ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಮಿದುಳಿನ ನರಗಳನ್ನು ಕ್ರಿಯಾಶೀಲವಾಗಿರಿಸುವುದು ಮಾತ್ರವಲ್ಲದೆ, ಮರೆವಿನ ಕಾಯಿಲೆಗಳನ್ನು ನಿಮ್ಮ ಹತ್ತಿರಕ್ಕೂ ಸುಳಿಯಲು ಬಿಡದು ಈ ಬ್ಲ್ಯಾಕ್ ಕಾಫಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ.
ಅಷ್ಟೇ ಯಾಕೆ ನಿಮ್ಮ ಲಿವರ್‌ಗೂ ಒಳ್ಳೆಯದು. ಮನುಷ್ಯನ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಂತ ಅಗತ್ಯವಾದ ಅಂಗದಲ್ಲಿ ಪಿತ್ತಕೋಶ ಪ್ರಮುಖವಾದುದು. ಬ್ಲ್ಯಾಕ್ ಕಾಫಿ ಸೇವನೆಯಿಂದ ಲಿವರ್ ಕ್ಯಾನ್ಸರ್‌ಗೂ ಒಳ್ಳೆಯದೇ. ದಿನಕ್ಕೆ ನಾಲ್ಕು ಕಪ್ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಶೇಕಡಾ 80ರಷ್ಟು ಲಿವರ್ ಕಾಯಿಲೆಯನ್ನು ತಡೆಯಬಹುದು ಎನ್ನಲಾಗಿದೆ.
ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಹೆಚ್ಚು ಮೂತ್ರ ಮಾಡಬೇಕಾಗುತ್ತದೆ. ಅದರಲ್ಲೂ ಬ್ಲ್ಯಾಕ್ ಕಾಫಿಗೆ ಸಕ್ಕರೆ ಹಾಕದೇ ಸೇವಿಸಿದರೆ, ಹೊಟ್ಟೆಯಲ್ಲಿ ಜೀರ್ಣಕ್ರಿಯೆಗೆ ಅಡ್ಡಿಪಡಿಸುವ ಬ್ಯಾಕ್ಟೀರಿಯಾ ಹಾಗೂ ರೋಗಾಣುಗಳನ್ನು ನಾಶಪಡಿಸುತ್ತದೆ. ಮಧುಮೇಹದಿಂದ ನಿಮ್ಮನ್ನು ಕಾಪಾಡಲು ಬ್ಲ್ಯಾಕ್ ಕಾಫಿ ಅತ್ಯುತ್ತಮ ಮದ್ದಾಗಿದೆ. ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಡಯಾಬಿಟಿಸ್‌ನಿಂದ ನಿಮ್ಮನ್ನು ದೂರವಿಡಲು ಬ್ಲ್ಯಾಕ್ ಕಾಫಿ ಬೆಸ್ಟ್.
ಅತೀ ಮುಖ್ಯವಾಗಿ ಈ ಬ್ಲ್ಯಾಕ್ ಕಾಫಿ ಸೇವನೆಯಿಂದ ಕ್ಯಾನ್ಸರ್‌ನಿಂದಲೂ ದೂರವಿರಬಹುದು. ಕ್ಯಾನ್ಸರ್ ಅಧಿಕವಾಗಿ ಬಾಧಿಸುತ್ತಿರುವ ರೋಗಗಳಲ್ಲಿ ಒಂದು. ಸ್ತನ ಕ್ಯಾನ್ಸರ್, ಲಿವರ್, ದೊಡ್ಡ ಕರುಳು ಹಾಗೂ ಗುದನಾಳದ ಕ್ಯಾನ್ಸರ್‌ನಿಂದ ದೂರವಿರಲು ಬ್ಲ್ಯಾಕ್ ಕಾಫಿ ಸಹಾಯಮಾಡುತ್ತದೆ. ಮಾತ್ರವಲ್ಲದೇ ದೇಹದಲ್ಲಿ ಬೆಳೆಯುವ ಗಡ್ಡೆಗಳನ್ನು ನಿಯಂತ್ರಿಸಲು ಬ್ಲ್ಯಾಕ್ ಕಾಫಿ ಬೆಸ್ಟ್.