Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ನಟ ಸುದೀಪ್ ಏಕಾಏಕಿ ಈ ಸಿನಿಮಾ ಕೈಗೆತ್ತಿಕೊಳ್ಳಲು ಕಾರಣವೇನು?
ಕರ್ನಾಟಕಪ್ರಮುಖಮನರಂಜನೆ

ನಟ ಸುದೀಪ್ ಏಕಾಏಕಿ ಈ ಸಿನಿಮಾ ಕೈಗೆತ್ತಿಕೊಳ್ಳಲು ಕಾರಣವೇನು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

‘ಮ್ಯಾಕ್ಸ್’ ಯಶಸ್ಸಿನ ಬಳಿಕ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ‘ಮಾರ್ಕ್’ ಸಿನಿಮಾ ಮಾಡಿದ್ದಾರೆ. ಈ ಕಾಂಬಿನೇಷನ್ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಇಂದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ.

ಈ ಬಗ್ಗೆ ಮಾತನಾಡಿದ ಸುದೀಪ್, ಇದೊಂದು ಸವಾಲಿನ ಪಯಣವಾಗಿತ್ತು. ಪರೀಕ್ಷೆಯಂತೆ ಒಂದು ನಿಮಿಷವೂ ವ್ಯರ್ಥ ಮಾಡದೆ ಹೆಜ್ಜೆ ಇಟ್ಟಿದ್ದೆವು. ಸಿನಿಮಾದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದೇ ಒತ್ತಡವಾಗಿತ್ತು. 120 ದಿನಗಳಲ್ಲಿ 107 ದಿನ ಈ ಸಿನಿಮಾಗಾಗಿ ಕೆಲಸ ಮಾಡಿದ್ದೆವು. ಇಷ್ಟು ಒತ್ತಡದಲ್ಲಿ ಕೆಲಸ ಮಾಡುವಾಗ ದೈಹಿಕವಾಗಿ, ಮಾನಸಿಕವಾಗಿ ಕುಗ್ಗುವುದು ಸಾಮಾನ್ಯ. ಚೆನ್ನೈನಲ್ಲಿ ಒಂದು ಹಂತದ ಚಿತ್ರೀಕರಣದ ಬಳಿಕ ತೂತುಕ್ಕುಡಿಯಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಸಿದ್ದೆವು.

ಆಗ ಶೇಕಡ 30ರಷ್ಟು ಶೂಟಿಂಗ್‌ ಆಗಿತ್ತು. ಇದಾದ ಬಳಿಕ ವೇಗ ಕಡಿಮೆ ಆಗಿದ್ದು ಗಮನಕ್ಕೆ ಬಂತು. ಆಗ ಸಭೆ ನಡೆಸಿ ಉದ್ದೇಶವನ್ನು ನೆನಪಿಸಿದೆ. ಇದಾದ ಬಳಿಕ ಹಗಲು ರಾತ್ರಿ ಶೂಟಿಂಗ್‌ ನಡೆಯಿತು.

ಇದು ಒಬ್ಬ ಸುದೀಪ್‌ನಿಂದ ಸಾಧ್ಯವಾಗಿದ್ದಲ್ಲ. ಇಷ್ಟೇ ಸಮಯದಲ್ಲಿ ಸಿನಿಮಾ ಮುಗಿಸಬೇಕು ಎನ್ನುವ ಒತ್ತಡ ಯಾರಿಂದಲೂ ಇರಲಿಲ್ಲ. ಅದು ನಮಗೆ ನಾವೇ ಹಾಕಿಕೊಂಡ ಗಡುವು ಆಗಿತ್ತು. ಇದಕ್ಕೆ ನಿರ್ಮಾಣ ಸಂಸ್ಥೆಯೂ ಜೊತೆಯಾಯಿತು. ಸೆನ್ಸಾರ್‌ ಆದ ಬಳಿಕ ಸಣ್ಣಪುಟ್ಟ ಕಟ್‌ಗಳಿಗೆ ಹೇಳಿರುತ್ತಾರೆ. ಅದನ್ನು ಸರಿಪಡಿಸಬೇಕಾದರೆ ಒಂದು ಹರಿವು ಕಡಿತವಾಗುತ್ತದೆ. ಬ್ಯಾಗ್ರೌಂಡ್‌ ಸ್ಕೋರ್‌ ಕೂಡಾ ಬದಲಾಯಿಸಬೇಕಾಗುತ್ತದೆ. ಈ ಎಲ್ಲಾ ಕೆಲಸಗಳನ್ನು ಕಾನ್ಫರೆನ್ಸ್‌ ಕರೆಗಳಲ್ಲೇ ಮಾಡುತ್ತಿರಬೇಕಾದರೆ ಒಂದು ಮಲ್ಟಿನ್ಯಾಷನಲ್‌ ಕಂಪನಿಯಲ್ಲಿ ಕೆಲಸ ಮಾಡಿದಂಥ ಅನುಭವವಾಗಿತ್ತು.

‘ಮ್ಯಾಕ್ಸ್‌’ ಬಿಡುಗಡೆಗೂ ಮುನ್ನ ವಿಜಯ್‌ ಕಾರ್ತಿಕೇಯ ಅವರಿಗೆ ಕನ್ನಡದ ಬಗ್ಗೆ, ಕನ್ನಡದ ಪ್ರೇಕ್ಷಕರ ಬಗ್ಗೆ ಗೊತ್ತಿರಲಿಲ್ಲ. ಆದರೆ ‘ಮ್ಯಾಕ್ಸ್‌’ ಬಿಡುಗಡೆ ಬಳಿಕ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿಜಯ್‌ ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ನೋಡಿದ್ದಾರೆ. ಇದರಿಂದ ಹಲವು ಪಾಠ ಕಲಿತಿದ್ದಾರೆ. ಇಷ್ಟೆಲ್ಲಾ ತಿಳಿದುಕೊಂಡು ತಮಿಳುನಾಡಿಗೆ ಹೋಗಿ ಮರಳಿ ಕನ್ನಡಕ್ಕೇ ಬಂದರು. ‘ಮ್ಯಾಕ್ಸ್‌’ಗಿಂತ ಚೆನ್ನಾಗಿ ಹೋಂವರ್ಕ್‌ ಮಾಡಿಕೊಂಡೇ ‘ಮಾರ್ಕ್‌’ ತೆಗೆದುಕೊಂಡು ಬಂದಿದ್ದರು. ನಟ, ನಿರ್ದೇಶಕನಾಗಿ ಅವರೊಂದಿಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಕೆಲವು ಸಲಹೆ ನೀಡಿದ್ದೇನಷ್ಟೇ.

ಎಲ್ಲಾ ಸಿನಿಮಾಗಳನ್ನು ಇಷ್ಟು ವೇಗದಲ್ಲಿ ಮಾಡಲು ಸಾಧ್ಯವಿಲ್ಲ. ಕೆಲವು ಸಿನಿಮಾಗಳನ್ನು ಮಾಡಬಹುದು. ಈ ವೇಗದಲ್ಲಿ ಸಿನಿಮಾ ಮಾಡಿದರೆ ಸುಮಾರು ₹7-8 ಕೋಟಿ ಬಡ್ಡಿ ಉಳಿಯುತ್ತದೆ. ಇದುವೇ ಮೊದಲ ಲಾಭವಲ್ಲವೇ? ಆರು ತಿಂಗಳಲ್ಲೇ ನಿರ್ಮಾಪಕರು ಹಾಕಿದ ಹಣ ಕೈಸೇರುತ್ತದೆ. ಅದಕ್ಕಿಂತ ಹೆಚ್ಚಾಗಿ ಒಂದು ಸಿನಿಮಾ ಪೂರ್ಣಗೊಳಿಸಿ, ಹೊಸ ಹೆಜ್ಜೆ ಇಡಲು ಅನುಕೂಲ.
ಇದಾಗದೇ ಹೋದರೆ ಒಂದು ಪ್ರಾಜೆಕ್ಟ್‌ನಲ್ಲೇ ಹಲವು ವರ್ಷ ಸಿಲುಕಿಕೊಳ್ಳುತ್ತೇವೆ. ಹಾಗೆಂದು, ‘ಬಿಲ್ಲ ರಂಗ ಭಾಷಾ’ವನ್ನು ಆರು ತಿಂಗಳಲ್ಲೇ ಪೂರ್ಣಗೊಳಿಸುವ ಪ್ರಯತ್ನವನ್ನೂ ಮಾಡಲು ಸಾಧ್ಯವಿಲ್ಲ. ಇದರಲ್ಲಿನ ಒಂದೊಂದು ಪಾತ್ರದ ಮೇಕಪ್‌ಗೇ ಒಂದೆರಡು ಗಂಟೆ ಬೇಕು. ಶೇಕಡ 80ರಷ್ಟು ಸಿನಿಮಾಗಳನ್ನು ‘ಮಾರ್ಕ್‌’ ವೇಗದಲ್ಲೇ ಮಾಡಬಹುದು.

ಬ್ಲಾಕ್‌ ಕಾಫಿ ಕುಡಿಯುವುದರಿಂದ ಈ ರೋಗ ಬರಲ್ವಾಂತೆ

TAGGED:What is the reason why actor Sudeep suddenly took up this film?
Share This Article
Facebook Twitter Copy Link Print
Previous Article Health care ಬ್ಲ್ಯಾಕ್‌ ಕಾಫಿ ಕುಡಿಯೋದ್ರಿಂದ ಈ ರೋಗಗಳೇ ಬರಲ್ವಂತೆ!
Next Article ಹೆಚ್ಚಾಗುತ್ತಿರುವ ಫೋಭಿಯ ಆರಂಭಿಕ ಘಟ್ಟದಲ್ಲಿ ಚಿಕಿತ್ಸೆ ಏಕೆ ಅಗತ್ಯ?

Popular Posts

Best Water Bottles for Drinking ಕುಡಿಯುವ ನೀರಿಗೆ ಯಾವ ಬಾಟಲ್ ಬೆಸ್ಟ್? ಆರೋಗ್ಯಕ್ಕೆ ಸರಿಯಾದ ಆಯ್ಕೆ ಹೀಗಿರಲಿ!

1 Min Read

ASTRO ಇಂದು ವೈಧೃತಿ ಯೋಗ, ವಿಷ್ಕುಂಭ ಯೋಗ, ಶನಿ ಹಿಮ್ಮುಖ ಸಂಚಾರ ಆರಂಭ: ಈ ರಾಶಿಗಳ ಜನರಿಗೆ ಭಾರೀ ಲಾಭ!

4 Min Read

Health- Personal care ಉತ್ತಮ ಲೈಂಗಿಕ ಜೀವನಕ್ಕಾಗಿ ಈ ಆಹಾರಗಳಿಂದ ದೂರವಿರಿ

2 Min Read

Astrology ಜುಲೈ 27ರಿಂದ ಈ 5 ರಾಶಿಯವರಿಗೆ ಎಚ್ಚರಿಕೆ ವಹಿಸುವ ಸಮಯ, ಜ್ಯೋತಿಷ್ಯ ಫಲಗಳು ಇಲ್ಲಿವೆ

2 Min Read

You Might Also Like

ಪ್ರಮುಖದೇಶಮನರಂಜನೆ

Toxic New Poster ಟಾಕ್ಸಿಕ್ ಹೊಸ ಪೋಸ್ಟರ್ ರಿಲೀಸ್; ಸಿಗರೇಟ್ ಹಿಡಿದು ರಕ್ತಸಿಕ್ತ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್

1 Min Read
ದೇಶಪ್ರಮುಖಮನರಂಜನೆ

Tollywood ಪೆದ್ದಿ ಶೂಟಿಂಗ್ ವೇಳೆ ಆಘಾತ; ಭುಜದ ನೋವಿನಿಂದ ಬಳಲುತ್ತಿರುವ ರಾಮ್ ಚರಣ್ ಶೀಘ್ರದಲ್ಲೇ ಆಸ್ಪತ್ರೆಗೆ ದಾಖಲು

1 Min Read
ಪ್ರಮುಖಕರ್ನಾಟಕ

Special Intensive Revision ಮತದಾರರ ಪಟ್ಟಿ ಪರಿಷ್ಕರಣೆ ಎಡವಟ್ಟು; ಬೆಂಗಳೂರಿಗರಿಗೆ ಬಿಗ್ ಶಾಕ್

2 Min Read
ಪ್ರಮುಖಕರ್ನಾಟಕ

Fire Mishap ಭೀಕರ ಅಗ್ನಿ ಅವಘಡ; ಪಾರ್ಕಿಂಗ್‌ನಲ್ಲಿದ್ದ ನಾಲ್ಕು ಖಾಸಗಿ ಬಸ್‌ಗಳು ಸಂಪೂರ್ಣ ಭಸ್ಮ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?