newsics.com | ನ್ಯೂಸಿಕ್ಸ್
ಇಂದು ಜುಲೈ 27, ಸೋಮವಾರ, ವೈಧೃತಿ ಯೋಗ, ವಿಷ್ಕುಂಭ ಯೋಗದ ಜತೆ ಇನ್ನೂ ಹಲವು ಶುಭ ಸಂಯೋಜನೆಗಳು ರೂಪುಗೊಳ್ಳುತ್ತಿವೆ. ಇವು ಈ ದಿನದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿವೆ. 5 ರಾಶಿಗಳು ಈ ಶುಭ ಯೋಗದ ಪ್ರಯೋಜನ ಪಡೆಯುತ್ತವೆ. ಇಂದು ಸೋಮವಾರ, ಆದ್ದರಿಂದ ಈ ದಿನವನ್ನು ಶಿವನಿಗೆ ಸಮರ್ಪಿಸಲಾಗಿದೆ. ಜತೆಗೆ, ಈ ದಿನ ಶ್ರದ್ಧಾಭಕ್ತಿಯಿಂದ ಶಿವನನ್ನು ಪೂಜಿಸಲಾಗುತ್ತದೆ. ಹಾಗೆ ಈ ದಿನ ಕರ್ಮಫಲದಾತನಾದ ಶನಿಯು ತನ್ನ ಚಲನೆಯನ್ನು ಬದಲಾಯಿಸುವ ಮೂಲಕ ತನ್ನ ಹಿಮ್ಮುಖ ಸಂಚಾರವನ್ನು ಪ್ರಾರಂಭಿಸಲಿದ್ದಾನೆ.
ಗ್ರಹಗಳ ಸ್ಥಿತಿಯ ಪ್ರಕಾರ, ಈ ದಿನ ಹಲವು ಶುಭ ಯೋಗಗಳು ನಿರ್ಮಾಣಗೊಳ್ಳುವುವು. ಆದ್ದರಿಂದ ಇಂದು ಶಿವನ ಕೃಪೆಯು ಯಾವ ರಾಶಿಗಳ ಜನರಿಗೆ ಸಿಗಲಿದೆ?
ವೃಷಭ
ಈ ರಾಶಿಗೆ ಸೇರಿದ ಜನರಿಗೆ ಇಂದು ಅದೃಷ್ಟ ಕೈ ಹಿಡಿಯುವುದು. ಶನಿಯು ತನ್ನ ಹಿಮ್ಮುಖ ಸಂಚಾರವನ್ನು ಆರಂಭಿಸುವುದರೊಂದಿಗೆ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ವೃಷಭ ರಾಶಿಗೆ ಸೇರಿದ ಜನರು ಸಾಕಷ್ಟು ಹೊಸ ಹೊಸ ಅವಕಾಶಗಳನ್ನು ಪಡೆಯಲಿದ್ದಾರೆ. ಹಾಗೆ ಕೆಲಸವನ್ನು ಮಾಡುವ ಈ ರಾಶಿಗೆ ಸೇರಿದ ಜನರಿಗೆ ಜವಾಬ್ದಾರಿಗಳು ಹೆಚ್ಚಾಗುವುದು. ಜತೆಗೆ ಬಹಳ ಸಮಯದಿಂದ ಅಪೂರ್ಣಗೊಂಡಂತಹ ವೃಷಭ ರಾಶಿಗೆ ಸೇರಿದ ಜನರ ಕೆಲಸಗಳೆಲ್ಲವೂ ಯಶಸ್ವಿಯಾಗಿ ಪೂರ್ಣಗೊಳ್ಳುವುದರೊಂದಿಗೆ ನೀವು ಕಳೆದುಹೋದ ಹಣವನ್ನು ವಾಪಸ್ ಪಡೆಯುವ ಸಂಭವ ಕೂಡ ಹೆಚ್ಚಾಗಿರುವುದು. ವೃಷಭ ರಾಶಿಗೆ ಸೇರಿದ ಜನರು ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲಿದ್ದಾರೆ. ವೃಷಭ ರಾಶಿಗೆ ಸೇರಿದ ಜನರಿಗೆ ಇಂದು ಭಾರೀ ಲಾಭವಾಗುವ ಸಂಭವವಿದೆ. ಹಾಗೆ ಕೆಲಸ ಮಾಡುವ ಜನರು ತಮ್ಮ ಪ್ರಯತ್ನದಿಂದಾಗಿ ಅದ್ಭುತ ಯಶಸ್ಸನ್ನು ಈ ಸಂದರ್ಭದಲ್ಲಿ ಗಳಿಸುವರು. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿರುವ ವೃಷಭ ರಾಶಿಗೆ ಸೇರಿದ ಜನರಿಗೆ ಈ ದಿನವು ಸಾಕಷ್ಟು ಅನುಕೂಲಕರವಾಗಿರುವುದು.
ಮಿಥುನ
ಈ ರಾಶಿಗೆ ಸೇರಿದ ಜನರಿಗೆ ಇಂದು ಸಕಾರಾತ್ಮಕ ದಿನವಾಗಿರುವುದು. ಹಾಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪ್ರತಿ ಹೆಜ್ಜೆಯಲ್ಲೂ ನೀವು ಗಳಿಸುವುದರಿಂದಾಗಿ ನಿಮ್ಮ ಅಪೂರ್ಣ ಕೆಲಸಗಳೆಲ್ಲವೂ ಯಶಸ್ವಿಯಾಗಿ ಪೂರ್ಣಗೊಳ್ಳುವುವು. ಜತೆಗೆ ಸೋಮವಾರದ ದಿನ ಶಿವನ ಆಶೀರ್ವಾದದಿಂದಾಗಿ ವಿದೇಶ, ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತಹ ಮಿಥುನ ರಾಶಿಗೆ ಸೇರಿದ ಜನರಿಗೆ ಶುಭ ಸುದ್ದಿ ಲಭಿಸುವ ಯೋಗ ದೊರಕುವುದು. ಮಿಥುನ ರಾಶಿಗೆ ಸೇರಿದ ಜನರು ಹೂಡಿಕೆಗೆ ಸಂಬಂಧಿಸಿದ ವಿಚಾರಗಳಲ್ಲಿ ಅಪಾರ ಲಾಭವನ್ನು ಗಳಿಸುವ ಸಂಭವವಿದೆ. ಹಾಗೆ ನಿಮ್ಮ ಸುಖ, ಸಮೃದ್ಧಿಯಲ್ಲಿ ಭಾರೀ ಹೆಚ್ಚಳವಾಗುವುದು. ಜತೆಗೆ ಜೀವನದಲ್ಲಿ ಧನ, ಸಂಪತ್ತು ಹೆಚ್ಚಾಗಲಿದೆ. ಹಾಗೆ ನೀವು ನಿಮ್ಮ ಕಠಿಣ ಪರಿಶ್ರಮಕ್ಕೆ ಪೂರ್ಣ ಫಲವನ್ನು ಪಡೆಯುವಿರಿ. ಜತೆಗೆ ಯಾವುದಾದರೂ ಉತ್ತಮ ಉದ್ಯೋಗ ದೊರಕುವ ಸಾಧ್ಯತೆ ಇರುವುದು. ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಅಗತ್ಯ.
ಸಿಂಹ
ಸಿಂಹ ರಾಶಿಗೆ ಸೇರಿದ ಜನರಿಗೆ ಇಂದು ಶುಭ ದಿನವಾಗಿರುವುದು. ಶುಭ ಯೋಗಗಳ ನಿರ್ಮಾಣದಿಂದಾಗಿ ಸಿಂಹ ರಾಶಿಗೆ ಸೇರಿದ ಜನರ ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತಲೂ ಬಲಗೊಳ್ಳಲಿದೆ. ಹೊಸ ಕೆಲಸ ಅಥವಾ ಆದಾಯಕ್ಕಾಗಿ ಅದ್ಭುತ ಅವಕಾಶಗಳನ್ನು ಈ ಸಂದರ್ಭದಲ್ಲಿ ನೀವು ಪಡೆಯುವ ಯೋಗ ನಿರ್ಮಾಣಗೊಳ್ಳುವುದು. ಜತೆಗೆ ಮನೆಯ ಎಲ್ಲಾ ಸದಸ್ಯರ ಸಂಪೂರ್ಣ ಬೆಂಬಲವನ್ನು ಗಳಿಸುವಿರಿ ಮತ್ತು ಸಾಮಾಜಿಕ ಜೀವನದಲ್ಲಿ ನಿಮ್ಮ ಗೌರವ, ಖ್ಯಾತಿ ಬಹಳಷ್ಟು ವೃದ್ಧಿಯಾಗಲಿದೆ. ಸೋಮವಾರದ ದಿನ ಮಕ್ಕಳಿಗೆ ಸಂಬಂಧಿಸಿದಂತೆ ಶುಭ ಸುದ್ದಿಯನ್ನು ಗಳಿಸುವ ಸಂಭವವಿದೆ. ಹಾಗೆ ನೀವು ಅವರೊಂದಿಗೆ ಸಂತೋಷಮಯವಾದ ಕ್ಷಣಗಳನ್ನು ಕಳೆಯುವಿರಿ. ಜತೆಗೆ ಸೋಮವಾರ ನಿಮಗೆ ಅಪಾರ ಯಶಸ್ಸು ದೊರಕುವ ಸಾಧ್ಯತೆ ಹೆಚ್ಚಾಗಿರಲಿದೆ. ನೀವು ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವಾಗ ಹೆಚ್ಚು ಭಾವುಕರಾಗದೆ ಆತ್ಮವಿಶ್ವಾಸದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಉತ್ತಮ.
ತುಲಾ
ಇಂದು ಸೋಮವಾರದ ದಿನ ಶಿವನ ಕೃಪೆಯೊಂದಿಗೆ ಶನಿಯ ಹಿಮ್ಮುಖ ಸಂಚಾರದಿಂದಾಗಿ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನೀವು ಅಪಾರ ಸ್ಥಿರತೆಯನ್ನು ಹೊಂದುವಿರಿ. ಹಾಗೆ ವ್ಯಾಪಾರ, ವ್ಯವಹಾರವನ್ನು ಮಾಡುವ ತುಲಾ ರಾಶಿಗೆ ಸೇರಿದ ಜನರಿಗೆ ಸಾಕಷ್ಟು ಹೊಸ ಹೊಸ ಅವಕಾಶಗಳು ಪ್ರಾಪ್ತಿಯಾಗುವುವು. ಪ್ರೇಮ ಸಂಬಂಧ ಮತ್ತು ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ತುಲಾ ರಾಶಿಗೆ ಸೇರಿದ ಜನರು ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ಹೊಂದಬಹುದಾಗಿದೆ. ಜತೆಗೆ ತುಲಾ ರಾಶಿಗೆ ಸೇರಿದ ಜನರು ತಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿಯನ್ನು ಗಳಿಸುವರು. ಇದರೊಂದಿಗೆ ವೃತ್ತಿ ಜೀವನದಲ್ಲಿ ಅಪಾರ ಪ್ರಗತಿ ಲಭಿಸುವ ಯೋಗ ನಿರ್ಮಾಣಗೊಳ್ಳುವುದು. ಇದರೊಂದಿಗೆ ಇಂದು ನಿಮ್ಮ ಸಂಬಂಧಗಳು ಮತ್ತಷ್ಟು ಸುಧಾರಿಸುವುದು. ಜತೆಗೆ ಶುಭ ಯೋಗಗಳ ಪ್ರಭಾವದಿಂದಾಗಿ ಸಹೋದರ, ಸಹೋದರಿಯರೊಂದಿಗಿನ ಜಗಳ, ಮನಸ್ತಾಪಗಳೆಲ್ಲವೂ ದೂರವಾಗಿ ಸಂತೋಷದಿಂದಿರುವಿರಿ.
ಮಕರ
ಇಂದು ಮಕರ ರಾಶಿಗೆ ಸೇರಿದ ಜನರಿಗೆ ಪ್ರಯೋಜನಕಾರಿಯಾದ ದಿನವಾಗಿರುವುದು. ಹಾಗೆ ಇಂದು ಶನಿಯು ತನ್ನ ಚಲನೆಯನ್ನು ಬದಲಾಯಿಸುವ ಮೂಲಕ ನಿಮ್ಮ ಎಲ್ಲಾ ರೀತಿಯ ಪ್ರಯತ್ನಗಳಿಗೆ ನೀವು ಅದ್ಭುತ ಲಾಭವನ್ನು ಗಳಿಸುವಿರಿ. ಕೆಲಸ ಮತ್ತು ವ್ಯಾಪಾರವನ್ನು ಮಾಡುವ ಮಕರ ರಾಶಿಗೆ ಸೇರಿದ ಜನರು ತಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಗಳಿಸುವರು. ಜತೆಗೆ ಮಕರ ರಾಶಿಗೆ ಸೇರಿದ ಜನರ ಆರ್ಥಿಕ ಸ್ಥಿತಿಯು ಬಹಳಷ್ಟು ಸುಧಾರಿಸುವುದು. ಇದರೊಂದಿಗೆ ನಿಮ್ಮ ಕಷ್ಟಗಳೆಲ್ಲ ದೂರವಾಗಲಿದೆ. ಹಾಗೆ ಆತ್ಮವಿಶ್ವಾಸದಲ್ಲಿ ಭಾರೀ ಹೆಚ್ಚಳವನ್ನು ಹೊಂದುವಿರಿ. ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಅನುಕೂಲಕರ ದಿನವಾಗಿರುವುದು. ಜತೆಗೆ ಹೊಸ ಜನರೊಂದಿಗೆ ಉತ್ತಮ ಸಾಮರಸ್ಯ ಹೊಂದುವುದರಿಂದ ನಿಮಗೆ ಅಪಾರ ಲಾಭ ದೊರಕುವ ಸಂಭವ ಇರುವುದು.
Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!