Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಾರ್ಕ್ ಚಿತ್ರದ ಮಸ್ತ್ ಮಲೈಕಾ ಹಾಡು ಎಲ್ಲೆಡೆ ಸಖತ್ ವೈರಲ್ ಆಗಿದೆ. ಕಿಚ್ಚ ಸುದೀಪ್ ಮತ್ತು ನಿಶ್ವಿಕಾ ನಾಯ್ಡು ಈ ಹಾಡಿಗೆ ಮಸ್ತ್ ಆಗಿಯೆ ಡ್ಯಾನ್ಸ್ ಮಾಡಿದ್ದಾರೆ. ಆದರೆ, ಇದೇ ಹಾಡಿಗೆ ನಟಿ ಸಾನ್ಯ ಅಯ್ಯರ್ ಡ್ಯಾನ್ಸ್ ಮಾಡುತ್ತಿದ್ದಾರೆ.
ಹೌದು, ಹುಬ್ಬಳ್ಳಿಯಲ್ಲಿ ನಡೆಯುತ್ತಿರೋ ಮಾರ್ಕ್ ಚಿತ್ರದ ಕಾರ್ಯಕ್ರಮದಲ್ಲಿಯೇ ಸಾನ್ಯ ಅಯ್ಯರ್ ಈ ಹಾಡಿಗೆ ಪರ್ಫಾರ್ಮ್ ಮಾಡುತ್ತಿದ್ದಾರೆ. ಈ ಹಾಡಿಗಾಗಿಯೇ ತಾಲೀಮು ಕೂಡ ಮಾಡಿದ್ದಾರೆ. ವಿಡಿಯೋ ಮೂಲಕವೇ ಇದರ ಝಲಕ್ ರಿವೀಲ್ ಆಗಿದೆ.
ಮಾರ್ಕ್ ಚಿತ್ರದ ಕಾರ್ಯಕ್ರಮ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯುತ್ತಿದೆ. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಈ ಕಾರ್ಯಕ್ರಮ ನಡೆಯುತ್ತಿದೆ.
ಈ ಒಂದು ಕಾರ್ಯಕ್ರಮದಲ್ಲಿಯೇ ಸಾನ್ಯ ಅಯ್ಯರ್ ಮಸ್ತ್ ಮಲೈಕಾ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಅದಕ್ಕಾಗಿ ರಿಹರ್ಸಲ್ ಕೂಡ ಮಾಡಿದ್ದಾರೆ. ಆ ವಿಡಿಯೋ ಇದೀಗ ಶೇರ್ ಆಗಿದೆ.
ಸಾನ್ವಿ ಸುದೀಪ್-ನಕಾಶ್ ಅಜೀಜ್ ಗಾಯನ
ಅಜನೀಶ್ ಲೋಕನಾಥ್ ಸಂಗೀತದ ಈ ಹಾಡನ್ನ ನಕಾಶ್ ಅಜೀಜ್ ಹಾಡಿದ್ದಾರೆ. ಇವರ ಜೋಡಿ ಆಗಿ ಸುದೀಪ್ ಮಗಳು ಸಾನ್ವಿ ಸುದೀಪ್ ಹಾಡಿದ್ದಾರೆ.
ಮಾರ್ಕ್ ಚಿತ್ರ ಡಿಸೆಂಬರ್-25 ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಚಾರವೂ ಜೋರಾಗಿದೆ. ಸಿನಿಮಾದ ಟೀಸರ್, ಟ್ರೈಲರ್ ಮತ್ತು ಹಾಡುಗಳು ಗಮನ ಸೆಳೆದಿವೆ.