newsics.com
ನಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ಬೆಳಗ್ಗಿನ ತಿಂಡಿ ತಿನ್ನೋದನ್ನು ಮಿಸ್ ಮಾಡಲೇಬಾರದು. ಒಂದು ವೇಳೆ ಬೆಳಗ್ಗಿನ ತಿಂಡಿ ಸೇವನೆ ಮಾಡದೇ ಇದ್ದಲ್ಲಿ ದಿನವಿಡೀ ಒಂದು ತಿನ್ನುವ ಆಹಾರದಲ್ಲಿ ಏರುಪೇರು ಉಂಟಾಗುತ್ತದೆ.
ಚುರುಕಾಗಿ ಇರುವಿರಿ..!
ನಾವು ದಿನ ಬೆಳಗ್ಗೆ ನೀರು ಕುಡಿದು ಕಲವು ಸಮಯದ ಬಳಿಕ ತಿಂಡಿ ತಿಂದು ಆಫೀಸಿಗೆ ಹೊರಡುವ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತೇವೆ. ಅದೇ ರೀತಿ ಕೆಲವೊಮ್ಮೆ ಬಿಝಿ ಅಂತ ತಿಂಡಿ ತಿನ್ನದೇ ಆಫೀಸಿಗೆ ಸೀದಾ ಹೋಗಿ ಬಿಡುತ್ತೇವೆ. ಇದರಿಂದ ಬೆಳಗ್ಗಿನ ತಿಂಡಿ ಮಿಸ್ ಆಗುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಮತ್ತೆ ಮರುದಿನವೂ ಅದೇ ರೀತಿಯಾದ ಭಾವನೆ ನಮ್ಮಲ್ಲಿ ಶುರುವಾಗುತ್ತದೆ. ಹೇಗಿದ್ರೂ ಆಫೀಸ್ ಗೆ ಹೋದ ನಂತರ ತಿಂದರಾಯಿತು ಅಂತ ನಾವು ಅಂದುಕೊಂಡು ಮತ್ತೆ ತಿಂಡಿ ತಿನ್ನೋಕು ನಮ್ಮಲ್ಲಿ ಟೈಮ್ ಕೂಡ ಇರಲ್ಲ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದರಿಂದ ದಿನವಿಡೀ ಡಲ್ ಆಗಿ ಇರುವಂತೆ ಆಗುವುದು. ಚುರುಕಿನಿಂದ ಇರೋಕೆ ಆಗದ ಪರಿಸ್ಥಿತಿ ಉಂಟಾಗುತ್ತದೆ.
ಹೃದಯ ಸಂಬಂಧಿ ಕಾಯೆಲೆ ಹೆಚ್ಚಳ..!
ಬೆಳಗ್ಗಿನ ತಿಂಡಿ ತಿನ್ನೋದನ್ನು ಮಿಸ್ ಮಾಡುತ್ತೀರಿ ಅಂದ್ರೆ, ಹೃದಯದ ಸಂಬಂಧಿ ಕಾಯಿಲೆಗೆ ಆಹ್ವಾನ ನೀಡಿದಂತಾಗುತ್ತದೆ. ವಿಶೇಷವಾಗಿ ಭಾರತದಲ್ಲಿ ಯುವಜನರಲ್ಲಿ, ಇನ್ನೂ ಹೆಚ್ಚಾಗಿ ಕಂಡುಬರುತ್ತಿರುವುದು ಕಳವಳಕಾರಿ ವಿಷಯವಾಗಿದೆ.ಇದು ಹೃದಯದ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.ಬೆಳಗಿನ ಜಾವ ಮತ್ತು ತಡವಾಗಿ ಕೆಲಸ ಬಿಡುವು ಪಡೆಯುವುದರಿಂದ, ಅನೇಕ ಯುವಕರು ತಿಳಿಯದೆಯೇ ಈ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಬೆಳಗಿನ ಜಾವದ ಧಾವಂತದಲ್ಲಿ ಉಪಾಹಾರವನ್ನು ಬಿಟ್ಟುಬಿಡುವುದು ಸುಲಭ ಮತ್ತು ಅನುಕೂಲಕರ ನಿರ್ಧಾರದಂತೆ ತೋರುತ್ತದೆ, ಆದರೆ ಅದು ನಿಮ್ಮ ಹೃದಯಕ್ಕೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ.
ರಕ್ತ ಸಂಚಾರ ಕುಂಠಿತ..!
ಬೆಳಗ್ಗಿನ ಉಪಹಾರ ಸೇವಿಸೋದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. ರಕ್ತ ದೇಹಕ್ಕೆ ಬೇಕೇ ಬೇಕು.ರಕ್ತ ಉತ್ಪಾದನೆ ಆಗಬೇಕಾದರೆ ಆಹಾರ ದೇಹಕ್ಕೆ ಸೇವಿಸಲೇ ಬೇಕು. ಬೆಳಗ್ಗೆ ಉಪಾಹಾರದಲ್ಲಿ ಪೋಷಕಾಂಶಗಳು ಇರುವ ಆಹಾರ ಸೇವಿಸಿ, ದೇಹವು ಬೇಗನೆ ಜೀರ್ಣಿಸಿಕೊಳ್ಳುವ ಆಹಾರ ಸೇವಿಸಬೇಕು. ಕಬ್ಬಿಣಾಂಶವು ಅಧಿಕವಾಗಿ ಇರುವ ಉಪಾಹಾರ ಸೇವಿಸಿದರೆ ಒಳ್ಳೆಯದು.ವಿಟಮಿನ್ ಎ, ಸಿ, ಇ, ತಾಮ್ರ ಮತ್ತು ಸತುವಿನಂತಹ ಆಯಂಟಿಆಕ್ಸಿಡೆಂಟ್ ಗಳು ರಕ್ತನಾಳದ ಆರೋಗ್ಯ ಕಾಪಾಡುವುದು ಮತ್ತು ಇದು ಉರಿಯೂತ ಕಡಿಮೆ ಮಾಡುತ್ತದೆ.
ದೇಹದಲ್ಲಿ ಶಕ್ತಿ ಇಳಿಕೆ..!
ನಮ್ಮ ದೇಹಕ್ಕೆ ಪೋಷಕಾಂಶಯುಕ್ತ ಆಹಾರ ಸೇವಿಸುವುದು ಬಹಳ ಮುಖ್ಯ. ಅದರಲ್ಲೂ ನೀವೆಲ್ಲಾದರೂ ಬೆಳಗ್ಗಿನ ಹೊತ್ತಿನ ಆಹಾರ ಸೇವನೆ ಮಾಡದೇ ಇದ್ದು, ಆ ಪ್ರವೃತ್ತಿಯನ್ನೇ ಮುಂದುವರೆಸಿಕೊಂಡು ಬಂದಿರಿ ಎಂದರೆ ದೇಹಕ್ಕೆ ಹಸಿವು ಆಗದೇ ಇರಬಹುದು. ಇದರಿಂದ ದೇಹದ ಶಕ್ತಿ ಕುಂಠಿತವಾಗುತ್ತಾ ಹೋಗುತ್ತದೆ. ಪ್ರೋಟೀನ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ಸ್ ನ್ನು ಬೆಳಗ್ಗಿನ ಉಪಾಹಾರದಲ್ಲಿ ಸೇರ್ಪಡೆ ಮಾಡಿಕೊಂಡರೆ ಆಗ ದೇಹದಲ್ಲಿ ಶಕ್ತಿಯ ಮಟ್ಟ ಕಾಪಾಡಲು ಇದು ಸಹಕಾರಿ. ಇದು ದೇಹದ ಉತ್ಪಾದಕತೆ ವೃದ್ಧಿ ಮಾಡುವುದು ಮತ್ತು ಹೆಚ್ಚು ಕೇಂದ್ರೀಕೃತವಾಗಿರುವಂತೆ ಮಾಡುತ್ತದೆ.