Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?
ಕರ್ನಾಟಕಪ್ರಮುಖ

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

Share
2 Min Read
SHARE

newsics.com/ನ್ಯೂಸಿಕ್ಸ್

ಆತನಿಗೆ ಹತ್ತು ವರ್ಷದ ಹಿಂದೆ ಮದುವೆಯಾಗಿತ್ತು,ಆದ್ರೂ ಕೂಡ ಬೇರೊಂದು ಹುಡುಗಿಯ ಹಿಂದೆ ಬಿದ್ದಿದ್ದ. ಬಳಿಕ ಆಕೆಯನ್ನು ಗುಟ್ಟಾಗಿ ಮದುವೆಯಾಗಿದ್ದ ಆದ್ರೀಗ ಅದೇ ಯುವತಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆತನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ.

ಬೆಂಗಳೂರಿನ ಬ್ಯಾಡರಹಳ್ಳಿಯ ತಿಗಳರಪಾಳ್ಯ ತುಳಸಿನಗರದಲ್ಲಿ ಭವಾನಿ (22) ಪ್ರೇಮಿಯಿಂದ ಕೊಲೆಯಾಗಿದ್ದಾಳೆ. ಆರೋಪಿ ಚಂದ್ರಶೇಖರ್​ ಅಲಿಯಾಸ್​​ ಚಂದನ್​, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿ ಚಂದ್ರಶೇಖರ್, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಭವಾನಿ ಮನೆಯವ್ರು ಫೋನ್ ಮಾಡಿದಾಗ ರಿಸೀವ್ ಮಾಡದ್ದನ್ನು ಕಂಡು ಅನುಮಾನ ಬಂದ ಹಿನ್ನೆಲೆ ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದು, ರೂಂ ಬಳಿ ಮನೆ ಮಾಲೀಕರು ಹೋಗಿ ನೋಡಿದಾಗ ಮನೆಯೊಳಗೆ ಚಂದ್ರಶೇಖರ್ ನರಳಾಡುತ್ತಿರೋದು ಕಂಡು ಬಂದಿದೆ.

ಈ ನಡುವೆ ನಿನ್ನೆ ಇನ್​ಸ್ಟಾಗ್ರಾಂನಲ್ಲಿ ಭವಾನಿ ಅಕೌಂಟ್​ನಿಂದ ಚಂದನ್ ಜೊತೆ ಇರುವ ಫೋಟೋ ಅಪ್​ಲೋಡ್ ಆಗಿತ್ತು, ಅದನ್ನ ಗಮನಿಸಿದ್ದ ಭವಾನಿ ಸಂಬಂಧಿಕರು ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ರು, ಬಳಿಕ ಆ ಫೋಟೋವನ್ನು ಭವಾನಿ ಪೋಷಕರಿಗೆ ಕಳುಹಿಸಿದ್ದರು. ಫೋಟೋ ನೋಡಿದ ಕೂಡಲೇ ತಂದೆ ಶ್ರೀನಿವಾಸ್ ಮಗಳಿಗೆ ಕರೆ ಮಾಡಿದ್ದಾರೆ. ಆದ್ರೆ ಕಾಲ್ ರಿಸೀವ್ ಮಾಡದಿದ್ದಾಗ ಮನೆ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮನೆ ಮಾಲೀಕರು ಹೋಗಿ ನೋಡಿದಾಗ ಭವಾನಿ ಶವವಾಗಿ ಮಲಗಿದ್ರೆ, ಚಂದ್ರಶೇಖರ್ ವಿಷ ಕುಡಿದು ಒದ್ದಾಡುತ್ತಿದ್ದ.

ಹತ್ತು ವರ್ಷಗಳ ಹಿಂದೆ ಮದುವೆ ಆಗಿದ್ದ ಚಂದನ್​ಗೆ ಆರು ವರ್ಷದ ಮಗು ಇದೆ ಎಂದು ತಿಳಿದು ಬಂದಿದೆ. ಅದಾಗಿಯೂ ಭವಾನಿ ಜೊತೆ ಒಂದು ವರ್ಷದ ಹಿಂದೆ ಗುಟ್ಟಾಗಿ ಮದುವೆಯಾಗಿದ್ದನು. ಈ ನಡುವೆ ಭವಾನಿ ಮದುವೆಗೆ ಪೋಷಕರು ಸಿದ್ಧತೆ ನಡೆಸಿದ್ದರು. ಮುಂದಿನ ವಾರ ಎಂಗೇಜ್ಮೆಂಟ್​ಗೂ ತಯಾರಿ ನಡೆಸಿದ್ರು. ಈ ವಿಚಾರವನ್ನು ಭವಾನಿ ಚಂದನ್​ಗೆ ತಿಳಿಸಿದ್ದಾಳೆ.

ಎಂಗೇಜ್ಮೆಂಟ್​ ವಿಚಾರವಾಗಿ ರೂಂನಲ್ಲಿ ಚಂದನ್ ಹಾಗೂ ಭವಾನಿ ಇಬ್ಬರ ಮಧ್ಯೆ ಮಾತುಕತೆ ನಡೆದಿದೆ. ನಮ್ಮ ಮನೇಲಿ ಗೊತ್ತಾದ್ರೆ ಜಗಳ ಆಗುತ್ತೆ, ತಂದೆ ಒಪ್ಪಲ್ಲ ಅಂತಾ ಭವಾನಿ ಹೇಳಿದ್ದಾಳೆ. ಇದಕ್ಕೆ ಚಂದನ್​, ಸರಿ ಮದುವೆ ಆಗ್ಬೇಡ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳೋಣ ಅಂತಾ ಹೇಳಿದ್ದಾನಂತೆ, ನಂತರ ಇಬ್ಬರೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರು ಎಂದು ತಿಳಿದು ಬಂದಿದೆ. ಆದ್ರೆ, ವಿಷ ಸೇವಿಸಿದ್ದ ಭವಾನಿ ವಾಂತಿ ಮಾಡಿಕೊಂಡಿದ್ದಾಳೆ. ಈ ವೇಳೆ ಚಂದನ್​ ಆಕೆಯನ್ನ ಕತ್ತು ಹಿಸುಕಿ ಸಾಯಿಸಿ ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಮುಂದಾಗಿದ್ದಾನೆ.

ಇದೇ ವೇಳೆ ಚಂದನ್​, ಭವಾನಿ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಒಂದು ವರ್ಷದ ಆನಿವರ್ಸರಿ ಅಂತಾ ಇಬ್ಬರು ಮದುವೆಯಾಗಿದ್ದ ಫೋಟೋವನ್ನು ಅಪ್ಲೋಡ್​ ಮಾಡಿದ್ದಾನೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

TAGGED:married... but still the lover who dumped the young woman! What was the reason?Secretly married
Share This Article
Facebook Twitter Copy Link Print
Previous Article Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

Popular Posts

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read

You Might Also Like

ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read
ದೇಶಪ್ರಮುಖಮನರಂಜನೆ

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?