newsics.com/ನ್ಯೂಸಿಕ್ಸ್
ಬೆಂಗಳೂರು: ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಗೆ ಯೋಜನೆ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು! ಗ್ಯಾರಂಟಿ ಯೋಜನೆಗಳ ಲಾಭ ಅನರ್ಹರಿಗೂ ತಲುಪುತ್ತಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇಂತಹ ನಿರ್ಧಾರ ಕೈಗೊಂಡಿದೆ.
ಅನರ್ಹರಿಗೆ ಹೊಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ತಡೆಯಲು ಈ ಕ್ರಮಕ್ಕೆ ಮುಂದಾಗಿದ್ದು, ಫಲಾನುಭವಿಗಳು ಮತ್ತೊಮ್ಮೆ ಎಲ್ಲಾ ವಿವರ-ಫೋಟೋ ಜೊತೆಗೆ ಅರ್ಜಿ ಸಲ್ಲಿಕೆ ಕಡ್ಡಾಯವಾಗಿದೆ. ಹಾಗಾದ್ರೆ, ಮತ್ತೊಮ್ಮೆ ಅರ್ಜಿಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು? ದಾಖಲೆಗಳೊಂದಿಗೆ ಎಲ್ಲಿ ಅರ್ಜಿ ಸಲ್ಲಿಸಬಹುದು?
ಗೃಹಲಕ್ಷ್ಮಿ ಫಲಾನುಭವಿಗಳು ಸೇವಾ ಕೇಂದ್ರಗಳಿಗೆ ಹೋಗಿ ತಮ್ಮ ಹೆಬ್ಬೆಟ್ಟು ಅಥವಾ ಕಣ್ಣುಗಳು ಅಥವಾ ಫೇಸ್ ಸ್ಕ್ಯಾನ್ ಮಾಡಿಸಿಬೇಕು. ನೀವು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ್ರೆ RD ನಂಬರ್ ಕಡ್ಡಾಯ, ಜಾತಿ ಸರ್ಟಿಫಿಕೇಟ್ನಲ್ಲಿರೋ RD ನಂಬರ್ ನೀಡಿ ಸಂಪೂರ್ಣ ಫಾರ್ಮ್ ತುಂಬಿದ ನಂತರವೇ ಗೃಹಲಕ್ಷ್ಮಿ ಹಣ ಬರಲಿದೆ.
ಏನೆಲ್ಲ ಪ್ರಶ್ನೆಗಳು ಇರಲಿವೆ? ಯಾವೆಲ್ಲಾ ದಾಖಲೆ ಕೊಡಬೇಕು?
1. ಮನೆ ಯಜಮಾನಿ ಯಾರು? ಆಧಾರ್ ಸಂಖ್ಯೆ ಏನು?
2. ಮನೆಯ ಯಜಮಾನಿ ಬ್ಯಾಂಕ್ ಖಾತೆ ವಿವರ
3. ಈ ಹಿಂದೆ ಮನೆಯಲ್ಲಿ ಎಷ್ಟು ಸದಸ್ಯರಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತಿತ್ತು
4. ಯಾವ ಜಾತಿ ?
5. ಮನೆಯ ಯಜಮಾನಿ ಪತಿಯ ಹೆಸರು ? ಆಧಾರ್ ಸಂಖ್ಯೆ ?
6. ಆಧಾರ್ ಕಾರ್ಡ್ ದಾಖಲಾತಿ ಸಲ್ಲಿಕೆ ಮಾಡಬೇಕು
7. ನೀವು ಐಟಿ ಮತ್ತು ಜಿಎಸ್ ಟಿ ಪಾವತಿದಾರರ ?
8. ನಿಮ್ಮ ಬಳಿ APL ಕಾರ್ಡ್ ಅಥವಾ BPL ಕಾರ್ಡ್ ಇದೆಯಾ ?
ಗ್ಯಾರಂಟಿ ಯೋಜನೆಗಳ ಹೊಸ ಅರ್ಜಿ ಸಲ್ಲಿಕೆಗೆ ಸರ್ಕಾರ ಶೀಘ್ರದಲ್ಲೇ ಆದೇಶ ಹೊರಡಿಸಲಿದ್ದು, ಬೆಂಗಳೂರು ಒನ್ , ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಆಫ್ ಲೈನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಆಧಾರ್ ಜೊತೆ ಐಡಿ ಕೂಡ ಕಡ್ಡಾಯ
ಗೃಹಲಕ್ಷ್ಮಿ ಯೋಜನೆಯಲ್ಲಿ ಮೇಜರ್ ಸರ್ಜರಿಗೆ ಸರ್ಕಾರ ಮುಂದಾಗಿದೆ. ಈಗಾಗಲೇ ರಾಜ್ಯದಲ್ಲಿದ್ದಾರೆ 1.30 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಇನ್ಮುಂದೆ ಗೃಹಲಕ್ಷ್ಮಿ ಹಣಕ್ಕೆ ಬಯೋಮೆಟ್ರಿಕ್ ಕಡ್ಡಾಯವಾಗಿದೆ. ಬೆಂಗಳೂರು ಒನ್, ಗ್ರಾಮಒನ್, ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಗಳಲ್ಲಿ ಬಯೋಮೆಟ್ರಿಕ್ ಪ್ರತಿಕ್ರಿಯೆ ನಡೆಯಲಿದೆ. ಬಯೋಮೆಟ್ರಿಕ್ ಗೆ ಆಧಾರ್ ಕಡ್ಡಾಯ ಜೊತೆಗೆ ಮಹಿಳಾ ಇಲಾಖೆ ನೀಡಿರುವ ID ಕೂಡ ಕಡ್ಡಾಯವಾಗಿದೆ.