newsics.com/ನ್ಯೂಸಿಕ್ಸ್
ಇತರರಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಬಳಸಲು ನೀಡುವುದು ಅಥವಾ ಹಣ ವರ್ಗಾವಣೆಗೆ ಖಾತೆ ಹಂಚಿಕೊಳ್ಳುವುದು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಇಂತಹ ಖಾತೆಗಳನ್ನು ಸೈಬರ್ ವಂಚಕರು ಅಕ್ರಮ ಹಣದ ವ್ಯವಹಾರಗಳಿಗೆ ಬಳಸುವ ಸಾಧ್ಯತೆ ಇದ್ದು, ಖಾತೆದಾರರ ಮೇಲೆಯೇ ಕಾನೂನು ಕ್ರಮ, ದಂಡ ಹಾಗೂ ಜೈಲು ಶಿಕ್ಷೆಯೂ ವಿಧಿಸಬಹುದು ಎಂದು RBI ಎಚ್ಚರಿಕೆ ನೀಡಿದೆ.
ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರು ಹಣದ ಆಮಿಷವೊಡ್ಡಿ ಇತರರ ಬ್ಯಾಂಕ್ ಖಾತೆಗಳನ್ನು ಪಡೆದುಕೊಂಡು, ಅವುಗಳ ಮೂಲಕ ವಂಚನೆ ಮತ್ತು ಅಕ್ರಮ ಹಣಕಾಸು ವಹಿವಾಟುಗಳನ್ನು ನಡೆಸುತ್ತಿದ್ದಾರೆ. ಸುಲಭವಾಗಿ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಕೆಲವರು ತಮ್ಮ ಬ್ಯಾಂಕ್ ಖಾತೆಗಳನ್ನು ಇಂತಹ ದುಷ್ಕರ್ಮಿಗಳಿಗೆ ಒಪ್ಪಿಸುತ್ತಿದ್ದಾರೆ. ಇಂತಹ ಪ್ರಕರಣಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ l ಕಠಿಣ ಎಚ್ಚರಿಕೆ ನೀಡಿದೆ.
ನಿಮ್ಮ ಬ್ಯಾಂಕ್ ಖಾತೆಯನ್ನು ಬಳಸಲು ಬೇರೆಯವರಿಗೆ ಅನುಮತಿ ನೀಡುವುದು ಬ್ಯಾಂಕಿಂಗ್ ನಿಯಮಗಳ ಪ್ರಕಾರ ಅಪರಾಧವಾಗಿದೆ. ಆ ಖಾತೆ ನಿಮ್ಮ ಹೆಸರಿನಲ್ಲಿರುವುದರಿಂದ, ಅದರ ಮೂಲಕ ನಡೆಯುವ ಎಲ್ಲಾ ಕಾನೂನುಬಾಹಿರ ಚಟುವಟಿಕೆಗಳಿಗೆ ನೀವೇ ನೇರ ಹೊಣೆಗಾರರಾಗಿರುತ್ತೀರಿ.
ಇತರರ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಅಕ್ರಮವಾಗಿ ಹಣ ವರ್ಗಾವಣೆ ಮಾಡುವುದನ್ನು ‘ಮ್ಯೂಲ್ ಅಕೌಂಟ್’ ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ವಂಚನೆಗಳು ಹೆಚ್ಚಾಗುತ್ತಿವೆ. ಬೆಟ್ಟಿಂಗ್ ಆ್ಯಪ್‌ಗಳು, ಕ್ಯಾಸಿನೊಗಳು ಮತ್ತು ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸುವವರು ತಮ್ಮ ಕಪ್ಪು ಹಣವನ್ನು ವರ್ಗಾಯಿಸಲು ಅಮಾಯಕರ ಖಾತೆಗಳನ್ನು ಬಳಸಿಕೊಳ್ಳುತ್ತಿದ್ದಾರೆ.
RBI ನೀಡಿರುವ ಪ್ರಮುಖ ಸೂಚನೆಗಳು:
ಹಣದ ಆಮಿಷಕ್ಕೆ ಬಲಿಯಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡಬೇಡಿ.
ನಿಮ್ಮ ಬ್ಯಾಂಕ್ ವಿವರಗಳು, OTP ಮತ್ತು ಪಾಸ್‌ವರ್ಡ್‌ಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ.
ನಿಮ್ಮ ಖಾತೆಯನ್ನು ಬಳಸಲು ಇತರರಿಗೆ ಅನುಮತಿ ನೀಡಿದರೆ, ನೀವು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಮತ್ತು ಜೈಲಿಗೆ ಹೋಗುವ ಅಪಾಯವಿರುತ್ತದೆ.
“ನಿಮ್ಮ ಖಾತೆಯನ್ನು ಸುರಕ್ಷಿತವಾಗಿಟ್ಟುಕೊಳ್ಳಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಸುಲಭವಾಗಿ ಬರುವ ಹಣಕ್ಕಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಡಿ.
ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!