newsics.com
ಅಫ್ಘಾನಿಸ್ತಾನ: ಮಾರಕ ಭೂಕಂಪನದ ನಂತರ ಅಫ್ಘಾನಿಸ್ತಾನದಲ್ಲಿ ಮತ್ತೆ 5.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈವರೆಗೆ 1400 ಜನರು ಮೃತಪಟ್ಟಿದ್ದಾರೆ.
ಉತ್ತರ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 1,400 ಜನರು ಮೃತಪಟ್ಟು, ವ್ಯಾಪಕ ಹಾನಿ ಸಂಭವಿಸಿದ ಒಂದು ದಿನದ ನಂತರ ಅಂದರೆ ಮಂಗಳವಾರ ಬೆಳಗ್ಗೆ ಈ ಭೂಕಂಪಗಳು ಸಂಭವಿಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಭಾನುವಾರ ತಡರಾತ್ರಿ ಹಲವಾರು ಪ್ರಾಂತ್ಯಗಳಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಗ್ರಾಮಗಳು ನೆಲಸಮವಾಗಿವೆ. ಮಣ್ಣಿನ ಇಟ್ಟಿಗೆಗಳು ಮತ್ತು ಮರದಿಂದ ನಿರ್ಮಿಸಲಾದ ಮನೆಗಳ ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ತಾಲಿಬಾನ್ ಸರ್ಕಾರದ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಮಂಗಳವಾರ ಎಕ್ಸ್‌ನಲ್ಲಿ ತೀವ್ರ ಹಾನಿಗೊಳಗಾದ ಕುನಾರ್ ಪ್ರಾಂತ್ಯದಲ್ಲಿ ಮಾತ್ರ 1,411 ಜನರು ಸಾವನ್ನಪ್ಪಿದ್ದಾರೆ ಮತ್ತು 3,124 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದರು.
ಯುಎಸ್‌ಜಿಎಸ್ ಪ್ರಕಾರ, ಭಾನುವಾರ ರಾತ್ರಿ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಜಲಾಲಾಬಾದ್‌ನಿಂದ ಸುಮಾರು 27 ಕಿಲೋಮೀಟರ್ (17 ಮೈಲು) ದೂರದಲ್ಲಿದ್ದು, ಭೂಮಿಯ ಮೇಲ್ಮೈನಿಂದ ಕೇವಲ ಎಂಟು ಕಿಲೋಮೀಟರ್ ಕೆಳಗೆ ಅಪ್ಪಳಿಸಿದೆ.