newsics.com
ತುಮಕೂರು: ಗೋಲ್ಡ್ ಮ್ಯಾನ್ ಖ್ಯಾತಿಯ ಸನ್ನಿ ನಾನಾಸಾಹೇಬ್ ತುಮಕೂರಿನಲ್ಲಿ ಕಾಣಿಸಿಕೊಂಡಿದ್ದಾರೆ.
ಪುಣೆ ಮೂಲದ ಸನ್ನಿ ನಾನಾಸಾಹೇಬ್ ಎನ್ನುವ ‘ಚಿನ್ನದ ಮನುಷ್ಯ’ ಮೈಮೇಲೆ ಬರೋಬ್ಬರಿ ಎಂಟೂವರೆ ಕೆಜಿ ಚಿನ್ನ ಧರಿಸಿಕೊಂಡು ಗಣೇಶನ ಆಶೀರ್ವಾದ ಪಡೆಯಲು ತುಮಕೂರಿಗೆ ಬಂದಿದ್ದಾರೆ.
ಹಿಂದಿಯ ಬಿಗ್ ಬಾಸ್ ಸೀಸನ್ 16ರ ಸ್ಪರ್ಧಿ ಹಾಗೂ ಸಿನಿಮಾ ನಿರ್ಮಾಪಕನಾದ ಗೋಲ್ಡ್ ಮ್ಯಾನ್ ಅಲಿಯಾಸ್ ಸನ್ನಿ, ಕೈನಲ್ಲಿ ಚಿನ್ನ, ಕೊರಳಿನಲ್ಲಿ ರಾಶಿ ರಾಶಿ ಚಿನ್ನದ ಸರ ಹಾಕಿಕೊಂಡಿದ್ದ ಸನ್ನಿ ತುಮಕೂರು ನಗರದ ಉದ್ಯಮಿ ವಿಶ್ವಾಸ್ ಗಣೇಶ ಕಾರ್ಯಕ್ರಮದಲ್ಲಿ ಭಾಗಿಯಾದರು.
ಗೋಲ್ಡ್ ಮ್ಯಾನ್ ನೋಡುತ್ತಿದ್ದಂತೆಯೇ ಜನರು ಒಂದು ಕ್ಷಣ ದಂಗಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ.