newsics.com
ಕನ್ನಡದ ಜನಪ್ರಿಯ ರಿಯಾಲಿಟಿಬಿಗ್ ಬಾಸ್ ಸೀಸನ್-12 ಸೆಪ್ಟೆಂಬರ್ ತಿಂಗಳಲ್ಲೇ ಆರಂಭವಾಗ್ತಿದ್ದು, ಸೆಪ್ಟೆಂಬರ್ 28 ರಂದು ಅದ್ದೂರಿ ಚಾಲನೆ ಸಿಗಲಿದೆ. ನಟ ಸುದೀಪ್ ಅವರು 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬಿಗ್ ಬಾಸ್ ಪ್ರೊಮೋ ಬಿಡುಗಡೆ ಆಗಿದೆ.
ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಸ್ವಾಗತ ಎನ್ನುತ್ತ ಸುದೀಪ್ ಪ್ರೋಮೋದಲ್ಲಿ ಎಂಟ್ರಿ ನೀಡಿದ್ದಾರೆ. ಸುದೀಪ್ ಹೊಸ ಹೇರ್ ಸ್ಟೈಲ್ನಲ್ಲಿ ಸಖತ್ ಆಗಿ ಕಾಣ್ತಿದ್ದಾರೆ. ಇನ್ನು, ಪ್ರೋಮೋದಲ್ಲಿ ಕರ್ನಾಟಕ, ರಾಜ್ಯಗಳ ಸಾಂಸ್ಕೃತಿಕ ಆಚರಣೆಯ ದೃಶ್ಯ ಇದೆ. ಬಿಗ್ ಬಾಸ್ ಶೋ ನೋಡುತ್ತಾ ಗಾಸಿಪ್ ಮಾಡುವ ಜನ ಸಮೂಹದ ಜೊತೆಗೆ ಸುದೀಪ್ ಧ್ವನಿ ಕೇಳಿಸಿದೆ.
‘ನನ್ನ ಪ್ರೀತಿಯ ಸಮಸ್ತ ಕನ್ನಡ ಕುಟುಂಬಕ್ಕೆ ಸ್ವಾಗತ’ ಎಂದು ಎಂಟ್ರಿ ನೀಡಿದ್ದಾರೆ. ಆಗ ‘ಹೊಸ ಸೆಟ್ ರೆಡಿ.. ಹೊಸ ಕಂಟೆಸ್ಟೆಂಟ್ ರೆಡಿ, ಏಳು ಕೋಟಿ ಕನ್ನಡಿಗರು ಕೂಡ ರೆಡಿ.. ಸರ್ ನೀವು..? ಎಂದು ಹಿನ್ನೆಲೆ ಧ್ವನಿ ಕೇಳಿಸಿದೆ. ಅದಕ್ಕೆ ‘ನಾನು ರೆಡಿ’ ಎಂದು ಸುದೀಪ್ ಥಮ್ಸ್ಅಪ್ ಮಾಡಿದ್ದಾರೆ.