newsics.com
ಭಾರತೀಯ ಜನಸಂಖ್ಯೆಯಲ್ಲಿ ಬಹುತೇಕರು ಒತ್ತಡ ಹಾಗೂ ಆತಂಕಕ್ಕೆ ಬಲಿಯಾಗುತ್ತಿದ್ದಾರೆ.
ಅಧ್ಯಯನವೊಂದರ ಪ್ರಕಾರ ಶೇಕಡಾ 77ರಷ್ಟು ಭಾರತೀಯರು ನಿಯಮಿತವಾಗಿ ಒತ್ತಡದ ಲಕ್ಷಣವನ್ನು ಅನುಭವಿಸುತ್ತಿದ್ದಾರೆ. ದೈನಂದಿನ ಜೀವನದ ಮೇಲೆ ಒತ್ತಡ ಗಣನೀಯವಾಗಿ ಪರಿಣಾಮ ಬೀರುತ್ತಿದೆ. ಇದರ ಅಪಾಯ ಯುವ ಜನತೆಯಲ್ಲಿ ಅದರಲ್ಲೂ ವಿಶೇಷವಾಗಿ ಜನರೇಷನ್ Z ನಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ನಿಮ್ಮನ್ನು ರಕ್ಷಿಸಲು ಪರಿಣಾಮಕಾರಿ ಪರಿಹಾರವನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ಒತ್ತಡದ ಕಾರ್ಟಿಸೋಲ್‌ಗೆ ತುಳಸಿ ಅತ್ಯುತ್ತಮ ಮದ್ದು ಎಂದು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ.
ತುಳಸಿ ಬಳಕೆಯಿಂದ ಕಾರ್ಟಿಸೋಲ್ (cortisol)ನ್ನು ಶೇಕಡಾ 36ರಷ್ಟು ಕಡಿಮೆ ಮಾಡಬಹುದು ಎಂದು ಸಂಶೋಧನೆ ಹೇಳಿದೆ.
ಹಿಂದೂ ಧರ್ಮದಲ್ಲಿ ಪವಿತ್ರ ಎಂದು ಪೂಜಿಸಲ್ಪಡುವ ತುಳಸಿ ರಸ ಸೇವನೆ ಮಾಡುವುದರಿಂದ ಕಾರ್ಟಿಸೋಲ್ ಶೇಕಡಾ 36ರಷ್ಟು ಕಡಿಮೆ ಆಗುತ್ತದೆ. ಇದರಿಂದ ಒತ್ತಡ ಮತ್ತು ಆತಂಕ ಕಡಿಮೆ ಆಗುತ್ತದೆ. ತುಳಸಿ ನೈಸರ್ಗಿಕ ಔಷಧವಾಗಿದೆ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ತುಳಸಿಯನ್ನು ಸೇವಿಸಿದರೆ ಕಾರ್ಟಿಸೋಲ್ ಹಾರ್ಮೋನ್ ಮಟ್ಟವನ್ನು ನಿಯಂತ್ರಿಸುವುದು ಸುಲಭ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇದರಿಂದ ಒತ್ತಡದ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳ ಮೇಲೆ 8 ವಾರಗಳ ಕಾಲ ಈ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ, ತುಳಸಿ ರಸ, ಕಾರ್ಟಿಸೋಲ್ ಮಟ್ಟವನ್ನು ಶೇಕಡಾ 36ರಷ್ಟು ಕಡಿಮೆ ಮಾಡುತ್ತದೆ ಎಂಬುದು ಪತ್ತೆಯಾಗಿದೆ.
ತುಳಸಿ ರಸ ಸೇವಿಸುವುದರಿಂದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ. ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ತುಳಸಿ ಎಲೆಗಳನ್ನು ಸೇವಿಸುವುದು, ಚಹಾ ತಯಾರಿಸುವುದು ಅಥವಾ ಬೇರೆ ಆಹಾರಕ್ಕೆ ತುಳಸಿ ಬೆರೆಸಿ ಸೇವನೆ ಮಾಡುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಅನೇಕ ತುಳಸಿ ಪೂರಕಗಳು ಲಭ್ಯವಿವೆ. ಅದರ ನಿಗದಿತ ಡೋಸೇಜ್ ಸೇವನೆಯೂ ಪ್ರಯೋಜನಕಾರಿ.
ಪ್ರತಿದಿನ ತುಳಸಿ ಎಲೆಗಳನ್ನು ಹಾಗೆಯೇ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸಾಂಕ್ರಾಮಿಕ ರೋಗಗಳ ಅಪಾಯ ಕಡಿಮೆ ಆಗುತ್ತದೆ.
ಏನಿದು ಕಾರ್ಟಿಸೋಲ್?:
ಕಾರ್ಟಿಸೋಲ್ ಒಂದು ಹಾರ್ಮೋನ್. ಅದರ ಮಟ್ಟ ಸಾಮಾನ್ಯಕ್ಕಿಂತ ಹೆಚ್ಚಾದಾಗ, ದೇಹದ ತೂಕ ಹೆಚ್ಚಾಗುತ್ತದೆ. ಆಯಾಸ ಕಾಡುತ್ತದೆ. ಮನಸ್ಥಿತಿಯಲ್ಲಿ ಬದಲಾವಣೆ ಆಗುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳು ಕಾಡಲು ಶುರುವಾಗುತ್ತವೆ.
ದೇಹ ಒತ್ತಡದಲ್ಲಿದ್ದಾಗ ಮೂತ್ರಜನಕಾಂಗದ ಗ್ರಂಥಿಯು ರಕ್ತದಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಕಾರ್ಟಿಸೋಲ್‌ನ್ನು ಒಂದೇ ಕಾರಣಕ್ಕೆ ಒತ್ತಡದ ಹಾರ್ಮೋನ್ ಎನ್ನುತ್ತಾರೆ. ನಿರಂತರವಾಗಿ ಕಾರ್ಟಿಸೋಲ್ ಬಿಡುಗಡೆ ಆಗುತ್ತಿದ್ದರೆ ಅದು ಆರೋಗ್ಯಕ್ಕೆ ಹಾನಿಕರ.
Morning Tips: ಬೆಳಗ್ಗೆ ಬೇಗ ಏಳೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?