newsics.com
ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ನಾಯಿಪ್ರೇಮಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆ.
ಸಿವಿಲ್ ಲೈನ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ ಬುಧವಾರ ಬೆಳಗ್ಗೆ ನಡೆದ ಜನಸ್ಪಂದನ ಕಾರ್ಯಕ್ರಮದ ಸಂದರ್ಭದಲ್ಲಿ ಅವರ ಮೇಲೆ ಕಪಾಳಮೋಕ್ಷ ನಡೆಸಲಾಗಿದೆ.
ಮುಖ್ಯಮಂತ್ರಿಗಳ ಮೇಲೆ ಹಲ್ಲೆ ಮಾಡಿದವನನ್ನು ಗುಜರಾತ್‌ನ ರಾಜ್‌ಕೋಟ್ ನಿವಾಸಿ 35 ವರ್ಷದ ರಾಜೇಶ್ ಭೈಜಿ ಎಂದು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ದಾಖಲೆಗಳನ್ನು ಸಲ್ಲಿಸುವ ನೆಪದಲ್ಲಿ ಮುಖ್ಯಮಂತ್ರಿಯವರ ಬಳಿ ಬಂದಿದ್ದಾಗ ಅವರಿಗೆ ಕಪಾಳಮೋಕ್ಷ ನಡೆಸಿದ್ದಾನೆ ಎಂದು ಭಾರತೀಯ ಜನತಾ ಪಕ್ಷದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಿ ಕೆಲವು ದಾಖಲೆಗಳನ್ನು ಸಲ್ಲಿಸಿದ ನಂತರ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಯನ್ನು ತಕ್ಷಣವೇ ಪೊಲೀಸರು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡರು. ದೆಹಲಿ ಪೊಲೀಸ್ ಆಯುಕ್ತರು, ಉತ್ತರ ಡಿಸಿಪಿ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಸಿಎಂ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬುಧವಾರ ಬೆಳಗ್ಗೆ ‘ಜನ್ ಸುನ್‌ವೈ’ ಜನಸ್ಪಂದನ ಕಾರ್ಯಕ್ರಮದ ಸಮಯದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ. ದೆಹಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ದಾಳಿಕೋರನ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ದೆಹಲಿ ಪೊಲೀಸರು ಗುಜರಾತ್ ಪೊಲೀಸರೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. ಸಿಎಂ ಸುತ್ತ ಭದ್ರತಾ ಸಿಬ್ಬಂದಿ ಇದ್ದರೂ ಈ ಘಟನೆ ನಡೆದಿರುವುದು ಅಚ್ಚರಿಯೆನಿಸಿದೆ.
ಈ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜೇಶ್ ಬೈಜಿ ತಾಯಿ, ನನ್ನ ಮಗ ನಾಯಿಪ್ರೇಮಿಯಾಗಿದ್ದು, ಬೀದಿನಾಯಿ ವಿಚಾರದಲ್ಲಿ ದೆಹಲಿ ಸಿಎಂ ಕೈಗೊಂಡ ಕ್ರಮಗಳ ಬಗ್ಗೆ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ.
Love is blind ಗೊತ್ತಿಲ್ಲದೆ ಮಗನನ್ನೇ ಲವ್ ಮಾಡಿ ಮದುವೆಯಾದ ತಾಯಿ, ಮಕ್ಕಳಾದ ಬಳಿಕ ಸತ್ಯ ಬಹಿರಂಗ!
Gold Rate Today Bangalore: ಗುಡ್ ನ್ಯೂಸ್ ; 9,180 ರೂಗೆ ಕುಸಿದ ಚಿನ್ನದ ಬೆಲೆ; ಇಂದಿನ ದರಪಟ್ಟಿ ಇಲ್ಲಿದೆ
Inspirational ಕಾರು ಖರೀದಿಗೆ ದುಡ್ಡಿಲ್ಲ, ಆಟೋ ಓಡಿಸುವುದರಲ್ಲೇ ಖುಷಿ… ಸ್ಫೂರ್ತಿಯ ಮಾತಾಡಿದ ಸಫುರಾ… ವಿಡಿಯೋ ನೋಡಿ