Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Friendship Day : ಇಂದು ಸ್ನೇಹಿತರ ದಿನ..ಯಾಕಾಗಿ ಈ ದಿನವನ್ನು ಸೆಲಬ್ರೇಟ್​ ಮಾಡಲಾಗುತ್ತೆ?
ಲೈಫ್‌ಸ್ಟೈಲ್

Friendship Day : ಇಂದು ಸ್ನೇಹಿತರ ದಿನ..ಯಾಕಾಗಿ ಈ ದಿನವನ್ನು ಸೆಲಬ್ರೇಟ್​ ಮಾಡಲಾಗುತ್ತೆ?

Share
2 Min Read
SHARE

ಸ್ನೇಹ ಅನ್ನೋದು ಬದುಕಿನಲ್ಲಿ ಏರ್ಪಡುವ ಅತ್ಯಂತ ಅಮೂಲ್ಯವಾದ ಬಂಧವಾಗಿದೆ. ಎಲ್ಲೋ ಹುಟ್ಟಿ ಬೆಳೆದವರು ಆಪ್ತ ಸ್ನೇಹಿತರಾಗುತ್ತಾರೆ. ಕೆಲವೊಮ್ಮೆ ರಕ್ತ ಸಂಬಂಧವನ್ನೂ ಮೀರಿದ ಬಾಂಧವ್ಯ ಇದಾಗುತ್ತದೆ.

ಎಲ್ಲ ಸಂತೋಷ, ದುಃಖ, ಕಷ್ಟಗಳಿಗೆ ಹೆಗಲಾಗುವ ಸ್ನೇಹವನ್ನು ಸಂಭ್ರಮಿಸುವ ದಿನವೇ ಸ್ನೇಹಿತರ ದಿನ. ಈ ಸ್ನೇಹವು ಯಾವುದೇ ಜಾತಿ, ಧರ್ಮ, ಬಣ್ಣ, ವಯಸ್ಸು ಜನಾಂಗೀಯತೆಯನ್ನು ನೋಡಿ ಹುಟ್ಟುವಂಥದ್ದಲ್ಲ. ನಮ್ಮೆಲ್ಲ ಕಷ್ಟಗಳಿಗೆ ಹೆಗಲಾಗುವ, ಗೆದ್ದಾಗ ಹುರಿದುಂಬಿಸುವ, ಸೋತಾಗ ಸಾಂತ್ವನ ಹೇಳುವ ನಮ್ಮ ಗೆಲುವನ್ನು ತಮ್ಮದೇ ಗೆಲುವೆಂಬಂತೆ ಸಂಭ್ರಮಿಸುವ ಸ್ನೇಹಿತರು ಬದುಕಿಗೊಂದು ಹೊಸ ಹುರುಪು ನೀಡುತ್ತಾರೆ. ಅದರಲ್ಲೂ ಈ ಭಾರೀ ಆಗಸ್ಟ್ 3 ರ ಭಾನುವಾರ ಸ್ನೇಹಿತರ ದಿನ ಬಂದುಬಿಟ್ಟಿದೆ. ಈ ದಿನದ ಈ ವಿಶೇಷತೆಗೆ, ಆಹ್ಲಾದಕತೆಗೆ ಬಹುಶಃ ಪರಿಧಿಯೇ ಇಲ್ಲ ಎಂದೆನ್ನಬಹುದು.

 

ಸ್ನೇಹ ದಿನದ ಪರಿಕಲ್ಪನೆಯು ಮೊದಲು 1930 ರಲ್ಲಿ ಹುಟ್ಟಿಕೊಂಡಿತು, ಅಮೇರಿಕನ್ ಶುಭಾಶಯ ಪತ್ರ ಕಂಪನಿ ಹಾಲ್‌ಮಾರ್ಕ್‌ನ ಸಂಸ್ಥಾಪಕ ಜಾಯ್ಸ್ ಹಾಲ್, ಸ್ನೇಹದ ಗೌರವಾರ್ಥವಾಗಿ ವಿಶೇಷ ದಿನವನ್ನು ಹೊಂದಿರಬೇಕು ಎಂದು ಸೂಚಿಸಿದರು. ಜನರು ತಮ್ಮ ಸ್ನೇಹಿತರಿಗೆ ಕಾರ್ಡ್‌ಗಳು ಮತ್ತು ಉಡುಗೊರೆಗಳನ್ನು ನೀಡುವ ಮೂಲಕ ಈ ದಿನವನ್ನು ಆಚರಿಸಬೇಕು ಎಂಬುದು ಅವರ ಉದ್ದೇಶವಾಗಿತ್ತು. ಆ ಸಮಯದಲ್ಲಿ, ಆಗಸ್ಟ್‌ನ ಮೊದಲ ಭಾನುವಾರದಂದು ಈ ದಿನವನ್ನು ಆಚರಿಸಬೇಕೆಂದು ಹೇಳಲಾಗಿತ್ತು. ಈ ಕಲ್ಪನೆಯು ಸ್ವಲ್ಪ ಸಮಯಕ್ಕೆ ಸೀಮಿತವಾಗಿದ್ದರೂ, ಹಲವು ವರ್ಷಗಳ ನಂತರ ಮತ್ತೊಂದು ಪ್ರಮುಖ ನಿರ್ಧಾರವು ಸ್ನೇಹ ದಿನವನ್ನು ಜಾಗತಿಕ ಗುರುತನ್ನಾಗಿ ಮಾಡಿತು.

ವಿಶ್ವಸಂಸ್ಥೆಯು ಈ ಆಚರಣೆಯನ್ನು ಗುರುತಿಸಲು ಅಧಿಕೃತ ದಿನಾಂಕವನ್ನು ಘೋಷಿಸಿದ್ದು 2011 ರಲ್ಲಿ. ಜುಲೈ 30 ಅನ್ನು ಅಂತರರಾಷ್ಟ್ರೀಯ ಸ್ನೇಹಿತರ ದಿನವೆಂದು ವಿಶ್ವಸಂಸ್ಥೆಯು ಘೋಷಿಸಿದೆ.

 

ಈ ದಿನದಂದು ಜನರು ತಮ್ಮ ಸ್ನೇಹಿತರಿಗೆ ಮೆಸೇಜ್ ಕಳುಹಿಸುವ ಮೂಲಕ ಕಾರ್ಡ್‌ಗಳು, ಗಿಫ್ಟ್‌ಗಳು ನೀಡುತ್ತಾರೆ. ಇನ್ನು ಕೆಲವರು “Friendship Band” ಕಟ್ಟುತ್ತಾರೆ. ಶಾಲೆ-ಕಾಲೇಜುಗಳಲ್ಲಿ ಸ್ನೇಹದ ದಿನ ತುಂಬಾ ವಿಶೇಷವಾಗಿರುತ್ತದೆ. ಈಗ ಡಿಜಿಟಲ್ ಯುಗದಲ್ಲಿ ಸ್ನೇಹದ ದಿನಕ್ಕೆ ಸಂಬಂಧಿಸಿದ ಮೀಮ್ಸ್, ಫೋಟೋಗಳು, ರೀಲ್ಸ್, ಸ್ಟೇಟಸ್ ಅಪ್ಲೋಡ್ ಮಾಡುವ ಸಂಪ್ರದಾಯ ಕೂಡ ಜೋರಾಗಿದೆ. ಅಷ್ಟಲ್ಲದೇ ಈ ದಿನದಂದು ಹಳೆಯ ಸ್ನೇಹಿತರು ಮತ್ತೆ ಸಂಪರ್ಕಕ್ಕೆ ಬರುವುದು, ಬದಲಾದ ಸಂಬಂಧಗಳು ಪುನಃ ಗಟ್ಟಿಯಾಗುವ ಸಂದರ್ಭಗಳು ಇತ್ಯಾದಿಗಳೂ ನಡೆಯುತ್ತವೆ.

ಸ್ನೇಹವು ಕೇವಲ ಸಹಪಾಠಿ ಅಥವಾ ಜೊತೆಯಲ್ಲಿರುವ ವ್ಯಕ್ತಿಯೊಂದಿಗೆ ಮಾತ್ರವಲ್ಲ, ಅದು ನಿಜವಾದ ನಂಬಿಕೆ, ಅರ್ಥಪೂರ್ಣ ಸಂಬಂಧ, ಪರಸ್ಪರ ಗೌರವ ಮತ್ತು ಪ್ರೀತಿ ಹೊಂದಿರುವ ಸಂಬಂಧವಾಗಿದೆ. ನಾವು ಜೀವನದಲ್ಲಿ ಎದುರಿಸುವ ಸಂತೋಷ, ದುಃಖ, ಒತ್ತಡ, ಯಶಸ್ಸು ಎಲ್ಲದಕ್ಕೂ ಸ್ನೇಹಿತರು ಪಾಲುದಾರರಾಗಿರುತ್ತಾರೆ. ಸ್ನೇಹದ ದಿನವು ಅಂತಹ ಅಮೂಲ್ಯ ಸಂಬಂಧಗಳಿಗೆ ಧನ್ಯವಾದ ಹೇಳುವ ಅವಕಾಶ ನೀಡುತ್ತದೆ. ಇಂದಿನ ಯುಗದಲ್ಲಿ ಹೆಚ್ಚು ಜನ ಸಾಮಾಜಿಕವಾಗಿ ಒಂಟಿಯಾಗಿರುವ ಸಂದರ್ಭದಲ್ಲಿ ನಿಜವಾದ ಸ್ನೇಹಿತರೊಂದಿಗೆ ಕಳೆಯುವ ಕ್ಷಣಗಳು ನಿಜವಾಗಿಯೂ ಮೌಲ್ಯಯುತ. ಈ ದಿನ ನಮ್ಮ ಸ್ನೇಹಿತರಿಗೆ ನಾವು ಅವರ ಮಹತ್ವವನ್ನು ತಿಳಿಸುವ ಅತ್ಯುತ್ತಮ ಸಂದರ್ಭವೆಂದು ಹೇಳಬಹುದು.

https://www.newsics.com/2025/08/03/man-takes-revenge-by-setting-fire-to-womans-house-for-refusing-to-marry-her/

 

TAGGED:#friends #friendshipday #celebration #August #forever
Share This Article
Facebook Twitter Copy Link Print
Previous Article ಮದುವೆಗೆ ನಿರಾಕರಿಸಿದಕ್ಕೆ ಮಹಿಳೆಯ ಮನೆಗೆ ಬೆಂಕಿ ಹಚ್ಚಿ ಸೇಡು ತೀರಿಸಿಕೊಂಡ ವ್ಯಕ್ತಿ
Next Article ದೇವರ ದೀಪದಿಂದ ಆಕಸ್ಮಿಕವಾಗಿ ಮನೆಗೆ ಬೆಂಕಿ -ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಸುಟ್ಟು ಭಸ್ಮ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?