newsics.com
ಎಲ್ಲರೂ ಕೂಡ ತಮಗೊಂದು ಸ್ವಂತ ಸೂರು ಇರಬೇಕು ಎಂದು ಬಯಸುತ್ತಾರೆ. ಆದರೆ ದೂರದ ಊರಿನಿಂದ ಕೆಲಸಕ್ಕೆಂದು ಬೆಂಗಳೂರಿಗೆ ಬರುವ ಜನರು ಉಳಿದುಕೊಳ್ಳಲು ಆಯ್ಕೆ ಮಾಡಿಕೊಳ್ಳುವುದೇ ಈ ಪಿಜಿ ಅಥವಾ ಬಾಡಿಗೆ ಮನೆಯನ್ನು. ಈ ದುಬಾರಿ ಬೆಂಗಳೂರಿನಲ್ಲಿ ತಿಂಗಳ ಬಾಡಿಗೆ ಕಟ್ಟೋದು ತುಂಬಾನೇ ಕಷ್ಟ. ಹೀಗಾಗಿ ಬಾಡಿಗೆ ಕಡಿಮೆಯಿರುವ ಮನೆಯನ್ನೇ ಹೆಚ್ಚಿನವರು ಹುಡುಕುತ್ತಾರೆ.ಆದರೆ ಕೆನಾಡದ ಪ್ರಜೆಗೆ ಬಾಡಿಗೆ ಮನೆ ವಿಚಾರದಲ್ಲಿ ಕಹಿ ಅನುಭವವಾಗಿದೆ.
ಕೆನಡಾದ ಡಿಜಿಟಲ್ ಕ್ರಿಯೇಟರ್ ಕ್ಯಾಲೆಬ್ ಫ್ರೈಸೆನ್ ಅವರು @caleb_friesen2 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ಬೆಂಗಳೂರಿನ ಮನೆಮಾಲೀಕರು ಅತ್ಯಂತ ದುರಾಸೆಯುಳ್ಳ ವ್ಯಕ್ತಿಗಳು ಎಂದಿದ್ದಾರೆ. ಇನ್ನು ಈ ಬೆಂಗಳೂರಿನ ಬೆನ್ನಿಗಾನ ಹಳ್ಳಿಯಲ್ಲಿರುವ ಒಂದು 4ಬಿಹೆಚ್ ಕೆ ಸಂಪೂರ್ಣ ಸುಸಜ್ಜಿತ ಮನೆಗೆ ಮಾಸಿಕ 2.3 ಲಕ್ಷ ಬಾಡಿಗೆ ಇದೆ. ಅದಕ್ಕೆ 23 ಲಕ್ಷ ಭದ್ರತಾ ಠೇವಣಿಯ ಅಗತ್ಯವಿದೆ. ಅಂದರೆ 12 ತಿಂಗಳ ಬಾಡಿಗೆಯಷ್ಟೇ ಭದ್ರತಾ ಮೊತ್ತ. ಆದರೆ ಈ ಬಗ್ಗೆ ವಿದೇಶಿಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಇಲ್ಲಿ ಜಾಗತಿಕ ನಗರಗಳ ಮಾನದಂಡಗಳ ಜೊತೆಗೆ ಹೋಲಿಕೆ ಮಾಡಿದ್ದು, ನ್ಯೂಯಾರ್ಕ್ ಹಾಗೂ ಟೊರೊಂಟೊ: ಸಾಮಾನ್ಯವಾಗಿ 1 ತಿಂಗಳ ಭದ್ರತಾ ಠೇವಣಿ, ಸಿಂಗಪೂರ್: ವರ್ಷಕ್ಕೆ 1 ತಿಂಗಳ ಗುತ್ತಿಗೆ, ಸ್ಯಾನ್ ಫ್ರಾನ್ಸಿಸ್ಕೋ: 2 ತಿಂಗಳ ಭದ್ರತಾ ಠೇವಣಿ, ದುಬೈ: ವಾರ್ಷಿಕ ಬಾಡಿಗೆಯ 5%-10% ಹಾಗೂ ಲಂಡನ್: ಸುಮಾರು 6 ವಾರಗಳ ಭದ್ರತಾ ಠೇವಣಿ ಎಂದು ಬರೆದುಕೊಂಡಿದ್ದಾರೆ.