newsics.com
ಕೆಲವರು ನಿರೀಕ್ಷೆಯೇ ಇಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಫೇಮಸ್ ಆಗಿಬಿಡುತ್ತಾರೆ.
ಅಸ್ಸಾಂನ ಪ್ರಸಿದ್ಧ ಮಾಡೆಲ್ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ ಅರ್ಚಿತಾ ಫುಕನ್ ಕೂಡ ರಾತ್ರಿ ಬೆಳಗಾಗುವುದರೊಳಗೆ ಒಂದೇ ಒಂದು ಫೋಟೋದಿಂದ ಎಲ್ಲರ ಗಮನ ಸೆಳೆದು ಹಾಲಿವುಡ್‌ನಿಂದಲೂ ಆಫರ್ ಗಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅರ್ಚಿತಾ ಪುಕನ್ ‘ಬೇಬಿ ಡಾಲ್ ಆರ್ಚಿ’ ಎಂದೇ ಜನಪ್ರಿಯ.
ರಾತ್ರೋರಾತ್ರಿ ನಿರೀಕ್ಷಿಸಿರದ ರೀತಿಯಲ್ಲಿ ಫೇಮಸ್ ಆಗಲು ಕಾರಣ, ಅವರ ಒಂದು ಫೋಟೋ. ಅದು ಅಮೆರಿಕದ ವಯಸ್ಕ ಚಲನಚಿತ್ರೋದ್ಯಮದ ಸೆಲೆಬ್ರಿಟಿ (Po*rn star) ಕೆಂಡ್ರಾ ಲಸ್ಟ್ ಎಂಬಾಕೆಯ ಜತೆಗಿನ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಈ ಫೋಟೋ ನೋಡಿ ಹಾಲಿವುಡ್ನಿಂದಲೂ ಆಫರ್ ಕೂಡ ಬಂದಿದೆ ಎನ್ನುವ ಸುದ್ದಿ ಇದೆ. ಈ ಫೋಟೋದಲ್ಲಿ, ಬೇಬಿ ಡಾಲ್ ಆರ್ಚಿ ಮತ್ತು ಲಸ್ಟ್ ಒಟ್ಟಿಗೆ ನಿಂತಿರುವುದು ಕಂಡುಬರುತ್ತದೆ. ಇದನ್ನು ನೋಡಿದವರು, ಬೇಬಿ ಡಾಲ್ ಆರ್ಚಿ ವಯಸ್ಕ ಉದ್ಯಮಕ್ಕೆ ಸೇರಿದರೇ ಎನ್ನುವ ವಿಚಾರ ಚರ್ಚೆಯಾಗುತ್ತಿದೆ. ಈಕೆ ಪೋಸ್ಟ್ ಮಾಡುವ ಒಂದೊಂದು ಫೋಟೋ ನೋಡುಗರಿಗೆ ಸುಸ್ತಾಗೋದು ಗ್ಯಾರಂಟಿ. ಮೈಮೇಲೆ ವಿರಳಾತಿವಿರಳ ಬಟ್ಟೆ ಹಾಕಿಕೊಂಡೇ ಈಕೆ ಪೋಸ್ ಕೊಡುವುದು ಮಾಮೂಲಿ.
ಅರ್ಚಿತಾ ಫುಕನ್ ಹಿಂದೆ ಒಂದು ನೋವಿನ ಕಥೆಯೂ ಇದೆ ಳ . ತಾವು ಒಂದು ಕಾಲದಲ್ಲಿ ವೇಶ್ಯಾವಾಟಿಕೆಯ ಕತ್ತಲ ಕೂಪಕ್ಕೆ ತಳ್ಳಲ್ಪಟ್ಟಿದ್ದೆ ಎಂದು ಬರೆದುಕೊಂಡಿದ್ದರು.
“ಭಾರತದ ವೇಶ್ಯಾವಾಟಿಕೆಯ ಕರಾಳ ಜಗತ್ತಿನಲ್ಲಿ ಸಿಲುಕಿ ಆರು ವರ್ಷ ನರಕ ಅನುಭವಿಸಿದೆ. ನನ್ನ ಸ್ವಾತಂತ್ರ್ಯಕ್ಕಾಗಿ ಸುಮಾರು 25 ಲಕ್ಷ ರೂಪಾಯಿ ತೆರಬೇಕಾಯಿತು. ಅಂತಿಮವಾಗಿ, ನಾನು ಆ ಬಂಧನದಿಂದ ಮುಕ್ತಳಾಗುವಲ್ಲಿ ಯಶಸ್ವಿಯಾದೆ” ಎಂದು ಅವರು 2023ರಲ್ಲಿ ಬರೆದುಕೊಂಡಿದ್ದರು.
ಇದೀಗ ಈ ಫೋಟೋದಿಂದ ರಾತ್ರೋರಾತ್ರಿ ಮತ್ತಷ್ಟು ಫೇಮಸ್ ಆಗಿರೋ ನಟಿಗೆ ಈಗ 8 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ.
“ಕೆಲವು ಮಾರ್ಗಗಳು ಖಾಸಗಿಯಾಗಿರುತ್ತವೆ. ಕೆಲವು ನಡೆಗಳು ಕಾರ್ಯತಂತ್ರದ್ದಾಗಿರುತ್ತವೆ” ಎಂದು ಅವರು ನಿಗೂಢವಾಗಿ ಬರೆದಿದ್ದಾರೆ. ಬರೆದಿದ್ದಾರೆ. “ಮೌನಕ್ಕೆ ಪದಗಳಿಗೆ ಇಲ್ಲದ ಶಕ್ತಿ ಇದೆ” ಎಂದೂ ಹೇಳುವ ಮೂಲಕ ಇನ್ನಷ್ಟು ಪುಷ್ಟಿ ನೀಡಿದ್ದಾರೆ.
ಅರ್ಚಿತಾ ಫೇಮಸ್ ಆಗಿದ್ದು, ಕೇಟ್ ಲಿನ್ ಅವರ ‘ಡೆಮ್ ಅನ್ ಗರ್’ ಹಾಡಿನ ಇನ್‌ಸ್ಟಾಗ್ರಾಮ್ ರೀಲ್ ಇಂಟರ್ನೆಟ್‌ನಲ್ಲಿ ವೈರಲ್ ಆದಾಗ. ಅವರ ರೀಲ್ ಸಾಕಷ್ಟು ಗಮನ ಸೆಳೆದಿತ್ತು.
adhar problem 12 ವರ್ಷದ ಈ ಬಾಲಕಿಗೆ ಆಧಾರ್ ಕಾರ್ಡೇ ಇಲ್ಲ! ಶಾಲೆಗೆ ಹೋಗಲು ನಿತ್ಯ 30 ರೂ. ಬಸ್ ಚಾರ್ಜ್, ಏನು ಕಾರಣ?
Ramayana ravana ರಾಮಾಯಣದಲ್ಲಿ ರಾವಣನಾಗಿ ಯಶ್ ಕಾಣಿಸಿಕೊಳ್ಳೋದೆಷ್ಟು ಸಮಯ? ಸಂಭಾವನೆ ಎಷ್ಟು? ಗಾಬರಿಯಾಗದಿರಿ…