newsics.com
ಚಿಕ್ಕಬಳ್ಳಾಪುರ: ಮದುವೆಯಾಗಲು ನಿರಾಕರಿಸಿದ ಯುವತಿಗೆ ಮಾವನೇ ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ಎರಚಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆ ಗ್ರಾಮದ ಯುವತಿ ವೈಶಾಲಿ(19) ಮದುವೆಯಾಗುವುದಕ್ಕೆ ನಿರಾಕರಿಸಿದ್ದಳು.
ಈ ಹಿನ್ನೆಲೆಯಲ್ಲಿ ಸೋದರ ಮಾವ ಆನಂದ್ ಕುಮಾರ್ ವೈಶಾಲಿ ಮೇಲೆ ಆ್ಯಸಿಡ್ ಎರಚಿದ್ದಾನೆಂದು ಆರೋಪಿಸಲಾಗಿದೆ.
ವೈಶಾಲಿ ಮೇಲೆ ಆ್ಯಸಿಡ್ ಎರಚಿದ್ದಲ್ಲದೆ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಆನಂದ್ ಕುಮಾರ್ ಯತ್ನಿಸಿದ್ದಾನೆ. ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿ ನಿವಾಸಿ ಆನಂದ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸೋದರ ಮಾವನ ಆ್ಯಸಿಡ್ ದಾಳಿಗೆ ಒಳಗಾದ ಯುವತಿ ವೈಶಾಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆತ್ಮಹತ್ಯೆಗೆ ಯತ್ನಿಸಿದ ಆನಂದ್ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾನೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
Indian nurse Nimisha Priya sentenced to death ಜುಲೈ 16ರಂದು ಭಾರತೀಯ ನರ್ಸ್ ನಿಮಿಷಾ ಪ್ರಿಯಾಗೆ ಮರಣದಂಡನೆ
Terror news ಉಗ್ರ ಕೃತ್ಯಕ್ಕೆ ಸಂಚು: ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ASI ಸೇರಿ ಮೂವರ ಬಂಧನ, NIA ಹೇಳಿದ್ದೇನು?
adhar problem 12 ವರ್ಷದ ಈ ಬಾಲಕಿಗೆ ಆಧಾರ್ ಕಾರ್ಡೇ ಇಲ್ಲ! ಶಾಲೆಗೆ ಹೋಗಲು ನಿತ್ಯ 30 ರೂ. ಬಸ್ ಚಾರ್ಜ್, ಏನು ಕಾರಣ?