newsics.com
ಇರಾನ್‌ನ ಆರು ಮಿಲಿಟರಿ ಏರ್‌ಪೋರ್ಟ್‌ಗಳ ಮೇಲೆ ಇಸ್ರೇಲ್ ದಾಳಿ ಮಾಡಿದ್ದು, 15 ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳು ನಾಶವಾಗಿವೆ ಎಂದು ವರದಿಯಾಗಿದೆ.
ಇಸ್ರೇಲ್ ರಕ್ಷಣಾ ಪಡೆಗಳು (IDS) ಇರಾನ್‌ನ ಆರು ಮಿಲಿಟರಿ ವಿಮಾನ ನಿಲ್ದಾಣಗಳನ್ನು ಹೊಡೆದುರುಳಿಸಿದ್ದಾಗಿ ಹಾಗೂ 15 ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಾಶಪಡಿಸಿದ್ದಾಗಿ ಹೇಳಿಕೊಂಡಿವೆ.
ಭಾನುವಾರ ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದ ನಂತರ ಇರಾನ್ ಪ್ರಮುಖ ಇಸ್ರೇಲಿ ನಗರಗಳಾದ ಟೆಲ್ ಅವೀವ್ ಮತ್ತು ಹೈಫಾವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.