newsics.com
ಬೆಂಗಳೂರು: ಹುಲಿ ದಾಳಿಗೆ ಮಹಿಳೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಕಾಲೋನಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ದೇಶಿಪುರ ಕಾಲೋನಿಯ ಪುಟ್ಟಮ್ಮ ಎಂಬಾಕೆ ಹುಲಿಗೆ ಬಲಿಯಾಗಿರುವ ಮಹಿಳೆ.
ಗುರುವಾರ ಮಧ್ಯಾಹ್ನ ಕಾಲೋನಿ ಸಮೀಪ ಕುರಿಗಳನ್ನು ಮೇಯಿಸುವಾಗ ಹುಲಿಯೊಂದು ಅವರ ಮೇಲೆರಗಿದ್ದು ಕುತ್ತಿಗೆ, ಎದೆಭಾಗ, ಹೊಟ್ಟೆ ಭಾಗದಲ್ಲಿ ಬಲವಾಗಿ ದಾಳಿ ನಡೆಸಿ ಕೊಂದುಹಾಕಿದೆ. ಬಳಿಕ, ಮಹಿಳೆಯನ್ನು ಅರಣ್ಯದೊಳಗೆ ಎಳೆದೊಯ್ದಿತ್ತು.
ಗ್ರಾಮಸ್ಥರು ಹುಡುಕಾಡಿದ್ದರಿಂದಾಗಿ ಪುಟ್ಟಮ್ಮನ ಶವ ದೊರೆತಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಹುಲಿ ದಾಳಿ ನಡೆದಿದೆ.
ಜಿಲ್ಲೆಯಲ್ಲಿ 9 ದಿನದಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ. ಕಳೆದ 10 ರಂದು ಚಾಮರಾಜನಗರ ತಾಲೂಕಿನ ಬೇಡಗುಳಿಯಲ್ಲಿ ಬಹಿರ್ದೆಸೆಗೆಂದು ತೆರಳಿದ್ದ ಮಹಿಳೆ ಮೇಲೆ ಹುಲಿ ದಾಳಿ ಮಾಡಿ ದೇಹದ ಅಲ್ಪಸ್ವಲ್ಪ ತಿಂದಿತ್ತು. ಬಳಿಕ, ಬಿಆರ್ಟಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೆಲವೇ ತಾಸುಗಳಲ್ಲಿ ಹುಲಿ ಸೆರೆ ಹಿಡಿದಿದ್ದರು.
S*x leave’ trend ಕಚೇರಿಗಳಲ್ಲಿ ಹೆಚ್ಚುತ್ತಿದೆ ‘ಲೈಂಗಿಕ ರಜೆ’ ಟ್ರೆಂಡ್! ಕಚೇರಿಗಳಲ್ಲೂ ಇರಬೇಕಂತೆ ‘ಖಾಸಗಿ ಸ್ಥಳ’!
Akhila Pajimannu: ಗಾಯಕಿ ಅಖಿಲಾ ಪಜಿಮಣ್ಣು ಸಂಸಾರದಲ್ಲಿ ಬಿರುಕು – ವಿಚ್ಛೇದನದ ಬಾಗಿಲು ತಟ್ಟಿದ ಸುಂದರಿಯ ಸಂಸಾರ
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದ ಈ ಜೋಡಿಗೆ ಏನಾಯ್ತು -ನಟಿ ಇಶಿತಾ ಏನಂದರು?
ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು – ತೃತೀಯ ಲಿಂಗಿ ಕ್ರೀಡಾ ಪಟುಗಳ ಪರ ಧ್ವನಿ ಎತ್ತಿದ ಅನಯಾ