newsics.com
ಕಿರುತೆರೆಯ ಜನಪ್ರಿಯ ನಟಿ ಇಶಿತಾ ವರ್ಷಾ ಅಗ್ನಿಸಾಕ್ಷಿಯಲ್ಲಿ ನಟಿಸಿದ್ದು ಮನರಂಜಿಸಿದ್ದರು. ನಂತರ ಡ್ಯಾನ್ಸರ್ ಮುರಗ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ನಟಿ. ರಾಜಾರಾಣಿ ಶೋ ಮೂಲಕ ಸಖತ್ ಫೇಮಸ್ ಆಗಿತ್ತು ಈ ಜೋಡಿ.
ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮೀಡಿಯಾ ಖಾತೆ ಮೂಲಕ ತಿಳಿದ್ತಿದ್ರು. ಜೊತೆಗಿನ ಡ್ಯಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡ್ತಿದ್ರು. ಆದ್ರೆ, ಕಳೆದ ವರ್ಷದಿಂದ ಒಟ್ಟಿಗೆ ಕಾಣಿಸಿಕೊಳ್ಳೋದನ್ನ ನಿಲ್ಲಿಸಿಬಿಟ್ರು. ಇದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತ್ತು. ಯಾಕೆ ನೀವಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲಾ? ದೂರ ಆಗಿದ್ದೀರಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಓಡಾಡ್ತಿದ್ದೀವು. ಯಾವ್ದೇ ಫೋಟೋ, ವಿಡಿಯೋ ಶೇರ್ ಮಾಡಿದ್ರು ಎಲ್ಲಿ ಮುರಗ? ಎಲ್ಲಿ ಇಶಿತಾ ಅಂತ ವೀಕ್ಷಕರು ಕೇಳುತ್ತಿದ್ದರು.
ಇದಕ್ಕೆ ಈಗ ಉತ್ತರ ಕೊಟ್ಟಿದ್ದಾರೆ ನಟಿ. ನಿನ್ನೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿರೋ ಇಶಿತಾ, ಉತ್ತರ ನೀಡಿದ್ದಾರೆ.ನಮ್ಮ ವೈಯಕ್ತಿಕ ಬದುಕನ್ನು ಸೋಷಿಯಲ್ ಮೀಡಿಯಾದಲ್ಲಿ ತೋರಿಸೋ ಅಗತ್ಯ ಇಲ್ಲ. ನಮ್ಮ ಪ್ರೈವೆಸಿಯನ್ನು ನೀವು ಗೌರವಿಸ್ತೀರ ಅನ್ಕೊಂಡಿದ್ದೀವಿ. ನಿಮಗೆ ಅವರ ಡ್ಯಾನ್ಸ್, ಮುರಗನ ಕೆಲಸದ ಬಗ್ಗೆ ಅಪ್ಡೇಟ್ ಬೇಕು ಅಂದ್ರೇ ಅವರ ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡಿ ಎಂದಿದ್ದಾರೆ ನಟಿ.
ಸದ್ಯ ಅಮೃತಧಾರೆಯಲ್ಲಿ ಅಭಿನಯಿಸುತ್ತಿದ್ದಾರೆ.ಇತ್ತಿಚೀಗೆ ವೈಷ್ಣವಿಗೌಡ ಅವರ ಮದುವೆಯಲ್ಲಿ ಇಶಿತಾ ಮುರುಗ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.