newsics.com
Relationship ಪ್ರೇಮಿಗಳು ಪರಸ್ಪರ ಉಡುಗೊರೆ ಕೊಟ್ಟುಕೊಳ್ಳುವುದು ಕಾಮನ್. ಬರ್ತ್‌ಡೇ, ಪ್ರೇಮಿಗಳ ದಿನದಂದು ಅಥವಾ ಸಂಗಾತಿಯನ್ನು ಸಂತೋಷಪಡಿಸಲು, ಸಂಗಾತಿಯ ಮುನಿಸನ್ನು ಕಮ್ಮಿ ಮಾಡಲು ಪ್ರೇಮಿಗಳು ಉಡುಗೊರೆಗಳನ್ನು ನೀಡುತ್ತಾರೆ.
ಆದರೆ ಗಿಫ್ಟ್‌ಗಳನ್ನು ಕೊಡುವಾಗ ಹತ್ತಾರು ಬಾರಿ ಯೋಚಿಸುವುದು ಉತ್ತಮ. ಕೆಲವೊಮ್ಮೆ ಈ ಗಿಫ್ಟ್‌ಗಳೇ ಅವಾಂತರ ಸೃಷ್ಟಿಸಿಬಿಡುತ್ತವೆ.
ಲವರ್‌ಗೆ ಕೆಲವು ಗಿಫ್ಟ್‌ಗಳನ್ನು ಕೊಡ್ಬಾರ್ದಂತೆ. ಶಾಸ್ತ್ರಗಳ ಪ್ರಕಾರ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಗಿಫ್ಟ್ ಕೊಡುವವರಿಗೆ ಹಾಗೂ ತೆಗೆದುಕೊಳ್ಳುವವರಿಗೆ ಸಮಸ್ಯೆ ಬರುವಂತೆ, ನೀವು ಈ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನಿಮ್ಮ ಪ್ರಿಯತಮೆಗೋ ಅಥವಾ ಪ್ರಿಯತಮನಿಗೋ ನೀಡಿದರೆ ಅದರಿಂದ ಸಂಬಂಧದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಬ್ರೇಕಪ್ ಕೂಡ ಆಗಬಹುದು.
ಮುಳ್ಳಿನ ಗಿಡಗಳು:
ಸಂಗಾತಿಗೆ ಗಿಡಗಳು ಇಷ್ಟ ಎಂದು ಕೆಲವರು ಬೇರೆ ಬೇರೆ ಗಿಡಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಹೀಗೆ ನೀವು ಗಿಡ ಗಿಫ್ಟ್ ಕೊಡುವುದಾದರೆ ಯಾವುದೇ ಕಾರಣಕ್ಕೂ ಕಳ್ಳಿ ಗಿಡ ಅಥವಾ ಮುಳ್ಳಿನ ಸಸ್ಯವನ್ನು ಗಿಫ್ಟ್ ಮಾಡ್ಬೇಡಿ.
ಶಾಸ್ತ್ರಗಳ ಪ್ರಕಾರ, ಈ ಉಡುಗೊರೆಗಳು ನಿಮ್ಮ ಸಂಬಂಧಕ್ಕೆ ಹಾನಿ ಮಾಡಬಹುದು. ಈ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತವೆ. ಸಂಗಾತಿಗಳ ನಡುವೆ ಉದ್ವಿಗ್ನತೆ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತವೆ. ಹಾಗಾಗಿ ನಿಮ್ಮ ಪ್ರೀತಿಗೆ ಯಾವುದೇ ತೊಂದರೆ ಬಾರದಿರಲು ಗುಲಾಬಿ ಅಥವಾ ಆರ್ಕಿಡ್‌ಗಳಂತಹ ಸಕಾರಾತ್ಮಕತೆ ಹೊರಸೂಸುವ ಸಸ್ಯಗಳನ್ನು ಉಡುಗೊರೆಯಾಗಿ ನೀಡಿ.
ಗಾಜಿನ ವಸ್ತುಗಳು:
ಸ್ವಲ್ಪ ಅಜಾಗರೂಕತೆ ವಹಿಸಿದರೂ ಗಾಜಿನ ವಸ್ತುಗಳು ಒಡೆದುಹೋಗುತ್ತವೆ. ಅದೇ ರೀತಿ ಗಾಜಿನ ವಸ್ತುಗಳನ್ನು ಉಡುಗೊರೆ ನೀಡಿದರೆ ಸಂಬಂಧವೂ ಒಡೆದು ಹೋಗುತ್ತದೆ ಎಂದು ನಂಬಲಾಗಿದೆ.
ಗಾಜಿನ ವಸ್ತುಗಳನ್ನು ಗಿಫ್ಟ್ ನೀಡುವುದರಿಂದ ಸಂಬಂಧದಲ್ಲಿ ಜಗಳ ಮತ್ತು ಉದ್ವಿಗ್ನತೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೆ ಇದು ಸಂಬಂಧದಲ್ಲಿ ಅಶಾಂತಿ ಮತ್ತು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಆದ್ದರಿಂದ ಗಾಜಿನ ವಸ್ತುಗಳನ್ನು ಉಡುಗೊರೆ ನೀಡಬೇಡಿ.
ಸುಗಂಧ ದ್ರವ್ಯ:
ಸುಗಂಧದ್ರವ್ಯವನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು ಎಂದು ಹೇಳುತ್ತಾರೆ. ಇದರಿಂದ ಜೀವನದಲ್ಲಿ ಹಣದ ಕೊರತೆ ಮತ್ತು ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸುಗಂಧ ದ್ರವ್ಯದ ವಾಸನೆ ಸ್ಪಲ್ಪ ಸಮಯದ ಬಳಿಕ ಮಾಯವಾಗುತ್ತದೆ. ಇದನ್ನು ಲವರ್‌ಗೆ ಉಡುಗೊರೆಯಾಗಿ ನೀಡಿದರೆ ನಿಮ್ಮ ಸಂಬಂಧ ಕೂಡಾ ಹಾಳಾಗಬಹುದು. ಅದಕ್ಕಾಗಿ ಇದನ್ನು ಉಡುಗೊರೆಯಾಗಿ ನೀಡಬೇಡಿ.
ಕಪ್ಪು ಬಣ್ಣದ ವಸ್ತುಗಳು:
ಬಟ್ಟೆ, ಮನೆ ಅಲಂಕಾರಿಕ ವಸ್ತುಗಳಂತಹ ಸೇರಿದಂತೆ ಯಾವುದೇ ಕಪ್ಪು ಬಣ್ಣದ ವಸ್ತುಗಳನ್ನು ಗಿಫ್ಟ್ ಆಗಿ ನೀಡಬೇಡಿ. ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ನಂಬಿಕೆಗಳ ಪ್ರಕಾರ ಕಪ್ಪು ಬಣ್ಣವನ್ನು ನಕಾರಾತ್ಮಕತೆ, ದುಃಖ ಮತ್ತು ಪ್ರತ್ಯೇಕತೆಯ ಸಂಕೇತವೆಂದು ಪರಿಗಣಿಸುತ್ತದೆ. ಕಪ್ಪು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು, ಇದು ಸಂಗಾತಿಗಳ ನಡುವೆ ತಪ್ಪು ತಿಳಿವಳಿಕೆ ಮತ್ತು ಜಗಳಗಳಿಗೆ ಕಾರಣವಾಗಬಹುದು.
ಚೂಪಾದ ವಸ್ತುಗಳು:
ರೇಜರ್‌ಗಳು, ಚಾಕುಗಳು ಮುಂತಾದ ಚೂಪಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ. ಇದು ಸಂಗಾತಿಗಳ ನಡುವಿನ ಬಂಧವನ್ನೇ ಒಡೆದು ಬ್ರೇಕಪ್‌ಗೆ ಕಾರಣವಾಗಬಹುದು. ಅಲ್ಲದೆ ಇಂತಹ ವಸ್ತುಗಳು ನಕಾರಾತ್ಮಕ ಶಕ್ತಿಗಳನ್ನು ಹೊರ ಸೂಸುವುದರಿಂದ ಇದರಿಂದ ಜಗಳಗಳು, ಮನಸ್ತಾಪಗಳೂ ಉಂಟಾಗಬಹುದು.
ಗಡಿಯಾರ:
ಸಮಯವು ಎಲ್ಲರಿಗೂ ಅಮೂಲ್ಯವಾದುದು. ಆದರೆ ಸಮಯವನ್ನು ಸೂಚಿಸುವ ಗಡಿಯಾರವನ್ನು ಉಡುಗೊರೆಯಾಗಿ ನೀಡಬಾರದು ಎಂದು ಹೇಳುತ್ತಾರೆ. ಏಕೆಂದರೆ ಇದು ಜೀವನದಲ್ಲಿ ಅಡೆತಡೆಗಳು, ವಿಳಂಬಗಳು ಮತ್ತು ತೊಂದರೆಗಳಿಗೆ ಕಾರಣವಾಗಬಹುದು.
ನಿಮ್ಮ ಸಂಗಾತಿಗೆ ಗಡಿಯಾರ ಅಥವಾ ವಾಚ್ ಉಡುಗೊರೆಯಾಗಿ ನೀಡುವುದರಿಂದ ಕೆಲವೊಂದು ಬಾರಿ ಸಮಯವೇ ನಿಂತಂತೆ ಸಂಬಂಧವೂ ಅಂತ್ಯ ಕಾಣಬಹುದು.
Relationship tips ಗಂಡ- ಹೆಂಡತಿ ಯಾವ್ಯಾವಾಗ ದೈಹಿಕ ಸಂಪರ್ಕ ಹೊಂದಬಾರದು? ಯಾಕೆ?
Belts ಪುರುಷರು ಹೆಚ್ಚಾಗಿ ಬೆಲ್ಟ್ ಧರಿಸಿದ್ರೆ ಈ ಆರೋಗ್ಯ ಸಮಸ್ಯೆ ಕಾಡುತ್ತದೆಯಂತೆ!
newsics.com