newsics.com
ನವದೆಹಲಿ: ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ. ಆಪರೇಷನ್ ಸಿಂದೂರ ಕಾರ್ಯಾಚರಣೆಯ ಯಶಸ್ಸಿನ ಬಳಿಕ ಪ್ರಧಾನಿಗಳು ಮೊದಲು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಆಪರೇಷನ್ ಸಿಂದೂರ್ ಕಾರ್ಯಾಚರಣೆ, ಪಾಕಿಸ್ತಾನಕ್ಕೆ ತಿರುಗೇಟು, ಕದನ ವಿರಾಮ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಪ್ರಧಾನಿಗಳು ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಸಹ ಅಜಿತ್ ದೋವಲ್ ಸೇರಿದಂತೆ ಸೇನಾ ಮುಖ್ಯಸ್ಥರೊಂದಿಗೆ ಪ್ರಧಾನಿಗಳು ಸಾಲು ಸಾಲು ಸಭೆಗಳನ್ನು ನಡೆಸಿದ್ದಾರೆ.
ಇಂದು ರಾತ್ರಿ 8 ಗಂಟೆಗೆ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಆಪರೇಷನ್ ಸಿಂಧೂರದ ನಂತರ ಇದೇ ಮೊದಲ ಬಾರಿಗೆ ಮೋದಿ ಮಾತನಾಡಲಿದ್ದು, ಈ ಕುರಿತು ಯರ್ನು ಹೇಳಲಿದ್ದಾರೆ..?! ಪಾಕಿಸ್ತಾನಕ್ಕೆ ಯಾವ ಸಂದೇಶ ರವಾನೆ ಮಾಡಲಿದ್ದಾರೆ..? ಕದನ ವಿರಾಮ ಜಾರಿಯಲ್ಲಿ ಇರುವುದರಿಂದ ಮುಂದೇನು..? ಆಪರೇಷನ್ ಸಿಂಧೂರ ಇಲ್ಲಿಗೆ ಸಮಾಪ್ತಿಯಾಯಿತಾ ಅಥವಾ ಮುಂದುವರೆಯಲಿದ್ಯಾ ಎಂಬಿತ್ಯಾದಿ ಪ್ರಶ್ನೆಗಳು ದೇಶದ ಜನರ ಮುಂದಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡುವ ನಿರೀಕ್ಷಿಯಿದೆ.
Relationship ಗಂಡನಾದವನು ಹೆಂಡತಿಯನ್ನು ಕೇಳದೆ ಈ ಕೆಲಸಗಳನ್ನು ಮಾಡಬಾರದು!: ಯಾಕೆ?