Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?
ಪ್ರಮುಖವಿದೇಶ

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

Share
2 Min Read
SHARE

newsics.com/ನ್ಯೂಸಿಕ್ಸ್

ಈಕೆ ಹೆಸರು ಅಮಂಡಾ ಟೀಗ್, ಆಕೆ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಪ್ರವೃತ್ತಿಯಲ್ಲಿ ಮಾಟಗಾತಿಯಂತೆ! ತನ್ನ ವೈವಾಹಿಕ ಜೀವನದ ಕುರಿತು ಆ ಮಹಿಳೆ ಬಹಿರಂಗವಾಗಿ ಮಾತನಾಡಿದ್ದಾಳೆ. ತಾನು 300 ವರ್ಷಗಳ ಹಿಂದೆ ಬದುಕಿದ್ದ ಸಮುದ್ರ ದರೋಡೆಕೋರ (ಪೈರೇಟ್) ಆತ್ಮವನ್ನು ವಿವಾಹವಾಗಿದ್ದೇನೆ ಎಂದು ಆಕೆ ಹೇಳುತ್ತಿದ್ದಾಳೆ. ಆ ಆತ್ಮ ಬಹಳ ರೊಮಾಂಟಿಕ್ ಆಗಿದೆ, ಪ್ರತಿ ರಾತ್ರಿ ತನ್ನ ಬಳಿಗೆ ಬಂದು ಪ್ರೀತಿಯಿಂದ ಸಮಯ ಕಳೆಯುತ್ತದೆ ಎಂದೂ ಆಕೆ ತಿಳಿಸಿದ್ದಾಳೆ.

ಅಮಾಂಡಾ ಟೀಗ್ ಎಂಬ ಈ ಮಹಿಳೆ ವೃತ್ತಿಯಲ್ಲಿ ಹಾಲಿವುಡ್ ಚಿತ್ರ ‘ಪೈರೇಟ್ಸ್ ಆಫ್ ದಿ ಕ್ಯಾರಿಬಿಯನ್’ನಲ್ಲಿ ಜಾಕ್ ಸ್ಪಾರೋ ಪಾತ್ರವನ್ನು ಅನುಕರಿಸುವ ಕಲಾವಿದೆ. ಆಕೆಯ ಹೇಳಿಕೆಯ ಪ್ರಕಾರ, 2012ರಲ್ಲಿ ತನಗೆ “ಜಾಕ್” ಎಂಬ ಹೈಟಿ ದೇಶದ ಪೈರೇಟ್ ಆತ್ಮದ ಅಸ್ತಿತ್ವದ ಅನುಭವವಾಗಿದೆ. ಆ ಆತ್ಮ ಸುಮಾರು 300 ವರ್ಷಗಳ ಹಿಂದೆ ಬದುಕಿದ್ದುದಾಗಿ ಆಕೆ ಹೇಳುತ್ತಾಳೆ. ಮೊದಲು ಇಬ್ಬರ ನಡುವೆ ಸ್ನೇಹ ಬೆಳೆಯಿತು, ನಂತರ ಅದು ಪ್ರೇಮಕ್ಕೆ ತಿರುಗಿತು ಮತ್ತು ಕೊನೆಗೆ ಆಧ್ಯಾತ್ಮಿಕ ವಿಧಾನದಲ್ಲಿ ವಿವಾಹವಾಯಿತು ಎಂದು ಅಮಾಂಡಾ ತಿಳಿಸಿದ್ದಾಳೆ.

ಅಮಾಂಡಾ ನೀಡಿದ ಸಂದರ್ಶನಗಳಲ್ಲಿ, ತನ್ನ ‘ಭೂತ ಗಂಡ’ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ, ತನ್ನನ್ನು ಎಲ್ಲಾ ಸಮಯದಲ್ಲೂ ಸಂತೋಷದಲ್ಲಿರಿಸುತ್ತಾನೆ ಎಂದು ಹೇಳಿದ್ದಾಳೆ. ಅವನೊಂದಿಗಿನ ಸಂಬಂಧ ಸಂಪೂರ್ಣವಾಗಿ ಸಂತೃಪ್ತಿಕರವಾಗಿದೆ ಎಂದೂ ಆಕೆ ತಿಳಿಸಿದ್ದಾಳೆ. ಅಮಾಂಡಾ ತನ್ನ ವಿವಾಹಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೋಗಳನ್ನು ಸಹ ಹಂಚಿಕೊಂಡಿದ್ದಾಳೆ.

ಆಕೆ ವಿವಾಹ ನಡೆದಿದ್ದು ಹೇಗೆ ಗೊತ್ತಾ?

ವಿಶೇಷ ತಾಂತ್ರಿಕ ಆಚರಣೆಗಳ ನಡುವೆ ಈ ವಿವಾಹ ನಡೆದಿದೆ ಎಂದು ಹೇಳಿದ್ದಾಳೆ. ವಿವಾಹ ಸಂದರ್ಭದಲ್ಲಿ ಬಿಳಿ ವಧುವಿನ ಉಡುಪು ಧರಿಸಿ ಎಲ್ಲಾ ಸಂಪ್ರದಾಯಿಕ ಕಾರ್ಯಕ್ರಮಗಳನ್ನು ನಡೆಸಿದ್ದಾಳೆ ಎಂದು ಆಕೆ ಹೇಳಿದ್ದಾಳೆ. ಅಮಾಂಡಾಳ ಕಥೆಯ ಪ್ರಕಾರ, ಜಾಕ್ ಆತ್ಮ ತನ್ನೊಂದಿಗೆ ಮಾತನಾಡುತ್ತಿತ್ತು, ತನಗೆ ಕಾಣಿಸುತ್ತಿತ್ತು ಎಂದು ಆಕೆ ನಂಬುತ್ತಾಳೆ. ಕಾಲಕ್ರಮೇಣ ಇಬ್ಬರ ನಡುವಿನ ಸಂಬಂಧ ಹೆಚ್ಚು ಬಲಗೊಂಡಿತು ಎಂದು ಹೇಳುತ್ತಾಳೆ. ನಂತರ ಒಬ್ಬ ತಾಂತ್ರಿಕ ನಿಪುಣರ ಸಹಾಯದಿಂದ ವಿವಾಹ ಕಾರ್ಯಕ್ರಮ ನಡೆಸಿದ್ದಾಳೆ.
ಬೇರೆಯಾಗಿ, ಮತ್ತೆ ಒಂದಾದ ಜೋಡಿ!

ವಿವಾಹದ ನಂತರ ತಮ್ಮ ವೈವಾಹಿಕ ಜೀವನ ಸಂತೋಷದಿಂದ ಸಾಗಿತು ಎಂದು ಆಕೆ ಹೇಳಿದ್ದಾಳೆ. ತನ್ನ ಭೂತ ಗಂಡ ಅಸೂಯೆ ಪಡುತ್ತಾನೆ, ಇತರ ಪುರುಷರೊಂದಿಗೆ ಹತ್ತಿರವಾಗಬಾರದು ಎಂದು ಹೇಳುತ್ತಿದ್ದ ಎಂದೂ ಆಕೆ ಹೇಳಿದ್ದಾರೆ. ಆದರೆ 2019ರಲ್ಲಿ ನೀಡಿದ ಮತ್ತೊಂದು ಸಂದರ್ಶನದಲ್ಲಿ, ಸಂಬಂಧದಲ್ಲಿ ಕೆಲವು ಸಮಸ್ಯೆಗಳು ಬಂದಿದ್ದರಿಂದ ತಾವು ಬೇರ್ಪಟ್ಟಿದ್ದೇವೆ, ನಂತರ ಮತ್ತೆ ಇಬ್ಬರೂ ಒಟ್ಟಿಗೆ ಸೇರಿದ್ದೇವೆ ಎಂದೂ ಬಹಿರಂಗಪಡಿಸಿದ್ದಾಳೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಆಭರಣ ಪ್ರಿಯರಿಗೆ ಬಿಗ್​ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ

 

TAGGED:Marriage with a 300-year-old soulmate!; How did the marriage take place?
Share This Article
Facebook Twitter Copy Link Print
Previous Article ಆಭರಣ ಪ್ರಿಯರಿಗೆ ಬಿಗ್​ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ
Next Article ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

Popular Posts

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read

You Might Also Like

ದೇಶಪ್ರಮುಖ

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read
ಪ್ರಮುಖಮನರಂಜನೆ

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read
ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಬಿಗ್​ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ

3 Min Read
ಕರ್ನಾಟಕಪ್ರಮುಖ

ಶಿವಂ ಅಸೋಸಿಯೇಟ್ ವಂಚನೆ ಕೇಸ್; ಶಿವಾನಂದ ನೀಲಣ್ಣವರ್ ಜೈಲಿಂದ ರಿಲೀಸ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?