newsics.com
ಲೈಂಗಿಕ ಜೀವನವು ಮದುವೆಯನ್ನು ಜೀವಂತವಾಗಿರಿಸುತ್ತದೆ. ಮದುವೆಯ ಏಕತಾನತೆಯ ಭಾಗವು ಪ್ರಾರಂಭವಾದಾಗ, ಲೈಂಗಿಕ ಸಂತೋಷ ಮತ್ತು ತೃಪ್ತಿಯ ಸಣ್ಣ ಕ್ಷಣಗಳು ಮಾತ್ರ ಇಬ್ಬರು ಸಂಗಾತಿಗಳಿಗೆ ಮುಂದುವರಿಯಲು ಭರವಸೆ ನೀಡುತ್ತವೆ.
ಲೈಂಗಿಕ ಕ್ರಿಯೆ ಕೇವಲ ದೇಹದ ಸುಖಕ್ಕಾಗಿ ಅಷ್ಟೆ ಅಲ್ಲ. ದಿನಂಪ್ರತಿ ಸೆಕ್ಸ್ ಮಾಡುವುದರಿಂದ ಆಗುವ ಉಪಯೋಗಗಳು ಅನೇಕ. ಸಂಶೋಧಕರ ಪ್ರಕಾರ ಪ್ರತಿದಿನ ಲೈಂಗಿಕ ಕ್ರಿಯೆ ಮಾಡುವುದರಿಂದ ಶಾರೀರಿಕವಾಗಿ ಆರೋಗ್ಯವಾಗಿರುವ ಜೊತೆ ಅನೇಕ ರೋಗಗಳು ನಿಮ್ಮ ಹತ್ತಿರವೂ ಸುಳಿಯೋದಿಲ್ಲ.
ಲೈಂಗಿಕ ಕ್ರಿಯೆ ಎಲ್ಲಾ ವಯಸ್ಕರಿಗೆ ಉತ್ತಮವಾದದ್ದು ಮಾತ್ರವಲ್ಲ, ನಿತ್ಯದ ಲೈಂಗಿಕ ಕ್ರಿಯೆ ಇನ್ನೂ ಉತ್ತಮ. ಇದರಿಂದ ಗಾಢನಿದ್ದೆ, ಒತ್ತಡದಿಂದ ಮುಕ್ತಿ ಹಾಗೂ ಕ್ಯಾಲೋರಿಗಳನ್ನು ದಹಿಸಿ ತೂಕದಲ್ಲಿ ಹೆಚ್ಚಳವಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಇತ್ತೀಚಿನ ಒಂದು ಅಧ್ಯಯನದಲ್ಲಿ ವಾರಕ್ಕೆರಡು ಬಾರಿ ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸುವ ಪುರುಷರಲ್ಲಿ ಹೃದಯಸ್ತಂಭದನ ಸಾಧ್ಯತೆ ತಿಂಗಳಿಗೊಂದಕ್ಕೂ ಕಡಿಮೆ ಬಾರಿ ಭಾಗವಹಿಸುವ ಪುರುಷರಿಗಿಂತ ಕಡಿಮೆ ಇರುತ್ತದೆ.
ಸೆಕ್ಸ್ ವ್ಯಾಯಾಮದ ಒಂದು ಒಳ್ಳೆ ವಿಧಾನ. ಅಷ್ಟೆ ಅಲ್ಲ ಅದೊಂದು ಶಾರೀರಿಕ ಕ್ರಿಯೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಶರೀರದಲ್ಲಿ ಆಗುವಂತಹಾ ಬದಲಾವಣೆಗಳು ವರ್ಕ್ಔಟ್ ಮಾಡುವಾಗಲೂ ಆಗುತ್ತದೆ.
ಕನಿಷ್ಟ ವಾರಕ್ಕೆರಡು ಬಾರಿ ನಡೆಸುವ ಲೈಂಗಿಕ ಕ್ರಿಯೆಯಿಂದ ಪುರುಷರಿಗೆ ಎದುರಾಗುವ ಹೃದಯಸ್ತಂಭನದ ಸಾಧ್ಯತೆ ತಿಂಗಳಿಗೊಮ್ಮೆ ಲೈಂಗಿಕ ಕ್ರಿಯೆ ನಡೆಸುವ ಪುರುಷರಿಗಿಂತಲೂ ಕಡಿಮೆ ಇರುತ್ತದೆ.
ಲೈಂಗಿಕ ಕ್ರಿಯೆ ನಡೆಸುವುದರಿಂದ ಸಹಜವಾಗಿ ನಿಮ್ಮ ದೇಹದಲ್ಲಿ ಎಂಡಾರ್ಫಿನ್ ಬಿಡುಗಡೆಯಾಗುತ್ತದೆ. ಆದರೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಮರುದಿನ ಉತ್ಪಾದಕತೆಗೆ ನಿಜವಾಗಿಯೂ ಸಹಾಯ ಮಾಡುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮನ್ನು ಮತ್ತು ಅವರ ವೈಯಕ್ತಿಕ ಸಂಬಂಧಗಳನ್ನು ನೋಡಿಕೊಳ್ಳಲು ಸಮಯ ಬೇಕಾಗುತ್ತದೆ.
ಒಂದು ವೇಳೆ ನಿಮಗೆ ಸತತವಾಗಿ ತಲೆನೋವು ಕಾಡುತ್ತಿದ್ದರೆ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳಿ. ಏಕೆಂದರೆ ಕಾಮೋತ್ಕಟತೆಯ ಸಮಯದಲ್ಲಿ ದೇಹದಲ್ಲಿ ಆಕ್ಸಿಟೋಸಿನ್ ಎಂಬ ರಸದೂತ ಸ್ರವಿಸುವ ಪ್ರಮಾಣ ಐದು ಪಟ್ಟು ಹೆಚ್ಚುತ್ತದೆ. ಇದು ಮನೋಭಾವವನ್ನು ಉತ್ತಮಗೊಳಿಸುತ್ತದೆ ಹಾಗೂ ನರಗಳನ್ನು ಸಡಿಲಿಸಿ ಹೆಚ್ಚಿನ ರಕ್ತಸಂಚಾರ ಹರಿಸುವ ಮೂಲಕ ತಲೆನೋವಿನ ಸಹಿತ ಹಲವಾರು ನೋವುಗಳನ್ನು ಕಡಿಮೆ ಮಾಡುತ್ತದೆ.
ಕಾಮಕೇಳಿಯ ಸಮಯದಲ್ಲಿ ಹೃದಯದ ಬಡಿತ ಹೆಚ್ಚುತ್ತದೆ ಹಾಗೂ ಮೆದುಳು ಮತ್ತು ಜನನಾಂಗಗಳಿಗೆ ತಲುಪುವ ರಕ್ತದ ಪ್ರಮಾಣವೂ ಹೆಚ್ಚುತ್ತದೆ. ಅಷ್ಟೇ ಅಲ್ಲ, ಹೊಸರಕ್ತ ದೇಹದ ಎಲ್ಲಾ ಜೀವಕೋಶಗಳಿಗೆ ತಲುಪುತ್ತದೆ.
ಚೀನಾದಲ್ಲಿದೆ ಸ್ಮಾರ್ಟ್ ಬೆಡ್: ನೋವುರಹಿತ ಚಿಕಿತ್ಸೆಗೆ ಅದ್ಭುತ ತಂತ್ರಜ್ಞಾನ – ಏನಿದರ ವೈಶಿಷ್ಟ್ಯ?