Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಭಾರತದ ವಿಮಾನಗಳಿಗೆ ಪಾಕ್ ವಾಯುಮಾರ್ಗ ಬಂದ್ : ಏನಿದರ ಪರಿಣಾಮ, ಹೇಗೆಲ್ಲ ಪೆಟ್ಟು ಬೀಳುತ್ತೆ?
ದೇಶವಿದೇಶ

ಭಾರತದ ವಿಮಾನಗಳಿಗೆ ಪಾಕ್ ವಾಯುಮಾರ್ಗ ಬಂದ್ : ಏನಿದರ ಪರಿಣಾಮ, ಹೇಗೆಲ್ಲ ಪೆಟ್ಟು ಬೀಳುತ್ತೆ?

Share
1 Min Read
SHARE

newsics.com

ಮೊದಲೇ ಹಳಸಿದ್ದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಇದೀಗ ಮತ್ತಷ್ಟು ಕದಡಿದೆ.
ಪಹಲ್ಗಾಮ್‌ ನರಮೇಧದ ಬಳಿಕ ಭಾರತವು ಪಾಕ್‌ ವಿರುದ್ಧ ಕೈಗೊಂಡಿರುವ ರಾಜತಾಂತ್ರಿಕ ಕ್ರಮಗಳಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದ ಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

ಪಾಕಿಸ್ತಾನವು ತಮ್ಮ ವಾಯುಮಾರ್ಗವನ್ನು ಬಂದ್ ಮಾಡಿದೆ. ಆ ಮೂಲಕ, ಭಾರತದಿಂದ ಹೊರಡುವ ಅಂತರಾಷ್ಟ್ರೀಯ ವಿಮಾನಗಳಿಗೆ ಇದರ ಬಿಸಿ ತಟ್ಟಲಿದೆ. ಇದು ಪ್ರಯಾಣದ ಅವಧಿಯನ್ನು ಜಾಸ್ತಿ ಮಾಡುವುದು ಒಂದು ಕಡೆಯಾದರೆ, ಟಿಕೆಟ್ ದರ ಏರಿಕೆಯ ಸಾಧ್ಯತೆಯೂ ಇದೆ.

ಭಾರತದಿಂದ ಹೋಗುವ ಹಲವು ಅಂತಾರಾಷ್ಟ್ರೀಯ ವಿಮಾನ ಮಾರ್ಗಗಳು ಪಾಕಿಸ್ತಾನದ ವಾಯು ಪ್ರದೇಶದ ಮೇಲೆ ಹೋಗುತ್ತವೆ. ಪಶ್ಚಿಮ ಏಷ್ಯಾ, ಐರೋಪೀಯ ದೇಶಗಳನ್ನು ತಲುಪಲು ಇದು ಹತ್ತಿರದ ಮಾರ್ಗವಾಗುತ್ತದೆ. ಇಲ್ಲದಿದ್ದರೆ ಪರ್ಯಾಯ ಮಾರ್ಗಗಳಲ್ಲಿ ಹೋಗಬೇಕು. ಇಂಥ ಕೆಲ ಮಾರ್ಗಗಳು ಬಳಸು ಮಾರ್ಗಗಳಾಗಿರುತ್ತವೆ. ಇವು ತುಸು ಬಳಸು ಮಾರ್ಗಗಳಾದ್ದರಿಂದ ಸಹಜವಾಗಿ ಇಂಧನ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ವಿಮಾನ ಪ್ರಮಾಣ ದರವನ್ನು ಏರಿಸುವುದು ಅನಿವಾರ್ಯವಾಗುತ್ತದೆ.

ಯಾವುದೇ ವಿಮಾನವು ಒಂದು ದೇಶದ ವಾಯುಪ್ರದೇಶದ ಮೇಲೆ ಹೋದರೆ, ಆ ದೇಶಕ್ಕೆ ಓವರ್ಫ್ಲೈಟ್ ಫೀ ಅಥವಾ ನ್ಯಾವಿಗೇಶನ್ ಚಾರ್ಜ್ ಅನ್ನು ನೀಡುತ್ತದೆ. ಆ ಪ್ರದೇಶದ ಫ್ಲೈಟ್ ಟ್ರಾಫಿಕ್ ನಿರ್ವಹಣೆಗೆ ಆಗುವ ವೆಚ್ಚವನ್ನು ಭರಿಸಲು ಈ ಶುಲ್ಕವನ್ನು ಪಡೆಯಲಾಗುತ್ತದೆ. ಕೋಟಿ ರೂಗಳಷ್ಟು ಶುಲ್ಕವನ್ನು ಈ ವಿಮಾನಗಳು ಪಾಕಿಸ್ತಾನಕ್ಕೆ ಪಾವತಿಸುತ್ತಿದ್ದುವು.

ಫೆಬ್ರವರಿ 2019ರಲ್ಲಿ ಪುಲ್ವಾಮಾ ಉಗ್ರರ ದಾಳಿಯ ನಂತರ, ಭಾರತೀಯ ವಾಯುಸೇನೆ ಬಾಲಕೋಟ್ ನಲ್ಲಿ ವೈಮಾನಿಕ ದಾಳಿ ನಡೆಸಿತ್ತು. ಇದಾದ ನಂತರ, ಹಲವು ತಿಂಗಳು ಪಾಕ್ ವಾಯುಮಾರ್ಗ ಭಾರತಕ್ಕೆ ಬಂದ್ ಆಗಿತ್ತು.ಪಾಕಿಸ್ತಾನವು ವಾಯುಪ್ರದೇಶವನ್ನು ಬಂದ್ ಮಾಡಿದ್ದಾಗ, ಭಾರತದ ವಿಮಾನಯಾನ ಸಂಸ್ಥೆಗಳಿಗೆ ಸುಮಾರು 700 ಕೋಟಿ ನಷ್ಟವಾಗಿತ್ತು.

ಬೇರೆ ಮಾರ್ಗದಲ್ಲಿ ಸಂಚರಿಸಬೇಕಾದ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ವಿಮಾನಗಳ ಮೇಲೆ ನೇರ ಪರಿಣಾಮ ಬೀರಲಿದೆ.

TAGGED:#Pakistan #closes #airspace #Indian #flights
Share This Article
Facebook Twitter Copy Link Print
Previous Article Realtionship ಮೋಜು ಮಾತ್ರವಲ್ಲ, ಲೈಂಗಿಕ ಕ್ರಿಯೆ ನಡೆಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ?
Next Article Airstrikes ಯೆಮೆನ್ ರಾಜಧಾನಿ ಮೇಲೆ ಅಮೆರಿಕ ವೈಮಾನಿಕ ದಾಳಿ: 8 ಮಂದಿ ಮೃತ್ಯು

Popular Posts

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

You Might Also Like

ವಿದೇಶ

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read
ವಿದೇಶಪ್ರಮುಖ

ಯುಎಇಯಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

2 Min Read
ಪ್ರಮುಖಆರೋಗ್ಯಕರ್ನಾಟಕದೇಶಲೈಫ್‌ಸ್ಟೈಲ್

Health – Insomnia ನಿದ್ರಾಹೀನತೆ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು! ಯಾಕೆ ಹೀಗೆ?

3 Min Read
ಕರ್ನಾಟಕದೇಶಪ್ರಮುಖ

Officers transfer ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?