newsics.com
ತಂತ್ರಜ್ಞಾನಯುಗದಲ್ಲಿ ಬೇರೆ ಬೇರೆ ಆವಿಷ್ಕಾರಗಳು ಅಭಿವೃದ್ದಿ ಪಡಿಸಲಾಗುತ್ತಿದೆ. ಪ್ರತಿಯೊಂದು ರಿಮೋಟ್ ನಲ್ಲಿ ಕಂಟ್ರೋಲ್ ಮಾಡುವ ಕಾಲವಾಗಿದೆ. ಇದಕ್ಕೆ ಪೂರ್ವಕವಾಗಿ ಚೀನಾದಲ್ಲಿ ರಿಮೋಟ್ ಕಂಟ್ರೋಲ್ ಹಾಸಿಗೆಯನ್ನು ಮಾರುಕಟ್ಟೆಗೆ ಬಂದಿದೆ. ಈ ಹಾಸಿಗೆ ರೋಗಿಗಳನ್ನು ಒಂದು ಬೆಡ್ ನಿಂದ ಮತ್ತೊಂದು ಬೆಡ್ ಗೆ ಸುಲಭವಾಗಿ ಶಿಫ್ಟ್ ಮಾಡಬಹುದು.ಹಾಗಾದರೆ ಹೇಗಿದೆ ಈ ರಿಮೋಟ್ ಕಂಟ್ರೋಲ್ ಹಾಸಿಗೆ? ಈ ಬಗ್ಗೆ Hidden Tips ಎನ್ನುವ ಟ್ವಿಟ್ಟರ್ ಖಾತೆ ವಿಡಿಯೋ ಒಂದನ್ನು ಹಂಚಿಕೊಂಡಿದೆ.
ಚೀನಾದಲ್ಲಿ ಈ ಸ್ಮಾರ್ಟ್ ವರ್ಗಾವಣೆ ಹಾಸಿಗೆಯನ್ನು ಅಭಿವೃದ್ಧಿಪಡಿಸಿದ್ದು, ಇದು ರೋಗಿಗಳನ್ನು ಯಾವುದೇ ಒತ್ತಡ ಅಥವಾ ನೋವನ್ನು ಉಂಟುಮಾಡದೆ ಒಂದು ಹಾಸಿಗೆಯಿಂದ ಮತ್ತೊಂದು ಹಾಸಿಗೆಗೆ ವರ್ಗಾಯಿಸುತ್ತದೆ. ಈ ಹಾಸಿಗೆ ರೋಗಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾವಣೆ ಮಾಡುವುದು ಮಾತ್ರವಲ್ಲ, ಅನೇಕ ರೀತಿಯ ವೈಶಿಷ್ಟ್ಯಗಳನ್ನು ಹೊಂದಿವೆ.
ರಿಮೋಟ್ ಕಂಟ್ರೋಲ್ ಹಾಸಿಗೆಯಲ್ಲಿ ರೋಗಿ ತನ್ನ ಅಗತ್ಯಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶ ಇದೆ. ಎಷ್ಟು ಎತ್ತರ ಬೇಕು, ಬೆನ್ನಿಗೆ ಯಾವ ರೀತಿಯಲ್ಲಿ ವಿಶ್ರಾಂತಿ ಕೊಡಬೇಕು, ಕಾಲುಗಳಿಗೆ ವಿರಾಮ ನೀಡುವಾಗ ಎಷ್ಟು ಎತ್ತರ ಬೇಕಾಗುತ್ತದೆ ಹೀಗೆ ಆರಾಮದಾಯಕವಾಗಿ ಮಲಗುವುದಕ್ಕೆ ಇದು ಅನುವು ಮಾಡಿಕೊಡುತ್ತದೆ. ಇದರ ಜೊತೆಗೆ ಈ ಹಾಸಿಗೆಯಲ್ಲಿ ಕೆಲವು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದ್ದು ಪಲ್ಸ್ ಆಕ್ಸಿಮೀಟರ್ ಮತ್ತು ಸ್ಮಾರ್ಟ್ ಸೆನ್ಸರ್ ಗಳು ಇತ್ಯಾದಿ ಮಾಪನಗಳನ್ನು ನೀಡಲಾಗಿದ್ದು ಇದು ರೋಗಿಗೆ ಮಾತ್ರವಲ್ಲ ಅವನ ಆರೈಕೆ ಮಾಡುವವರಿಗೆ ಮತ್ತು ವೈದ್ಯರಿಗೆ ರೋಗಿಯ ದೇಹದಲ್ಲಿ ಕ್ಷಣ ಕ್ಷಣಕ್ಕೂ ಆಗುವಂತಹ ಬದಲಾವಣೆ ಗಮನಿಸಲು ಸಹಕಾರಿಯಾಗಿದೆ.
ಇದು ರೋಗಿಗಳನ್ನು ಒಂದು ಹಾಸಿಗೆಯಿಂದ ಇನ್ನೊಂದು ಹಾಸಿಗೆ ವರ್ಗಾವಣೆ ಮಾಡಲು ಸುಲಭವಾಗುತ್ತದೆ. ರೋಗಿ ಮತ್ತು ಅವನ ಆರೈಕೆ ಮಾಡುವವರಿಗೆ ಎಲ್ಲಾ ರೀತಿಯ ಅನುಕೂಲವಿರುತ್ತದೆ.
ವರ್ಗಾವಣೆಯ ಸಮಯದಲ್ಲಿ ಗಾಯದ ಅಪಾಯವನ್ನು ಕಡಿಮೆ ಮಾಡಬಹುದು.