Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Pak minister threatens ಭಾರತದ ವಿರುದ್ಧ ಪ್ರಯೋಗಿಸಲು 130 ಪರಮಾಣು ಅಸ್ತ್ರ ಸಿದ್ಧ: ಪಾಕ್ ಸಚಿವನ ಬೆದರಿಕೆ
ದೇಶಪ್ರಮುಖವಿದೇಶ

Pak minister threatens ಭಾರತದ ವಿರುದ್ಧ ಪ್ರಯೋಗಿಸಲು 130 ಪರಮಾಣು ಅಸ್ತ್ರ ಸಿದ್ಧ: ಪಾಕ್ ಸಚಿವನ ಬೆದರಿಕೆ

Share
2 Min Read
SHARE

newsics.com

ಇಸ್ಲಾಮಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ಮತ್ತಷ್ಟು ಉಗ್ವಿಗ್ನತೆ ನಡುವೆ ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸಿ ಭಾರತಕ್ಕೆ ಪರಮಾಣು ಪ್ರತೀಕಾರದ ಬೆದರಿಕೆ ಹಾಕಿದ್ದಾರೆ.

ಘೋರಿ, ಶಾಹೀನ್ ಮತ್ತು ಘಜ್ನವಿ ಕ್ಷಿಪಣಿಗಳು ಸೇರಿದಂತೆ ಪಾಕಿಸ್ತಾನದ ಕ್ಷಿಪಣಿ ಶಸ್ತ್ರಾಸ್ತ್ರಗಳು ಮತ್ತು 130 ಪರಮಾಣು ಸಿಡಿತಲೆಗಳನ್ನು ಭಾರತಕ್ಕಾಗಿ ಮಾತ್ರ ಇಡಲಾಗಿದೆ ಎಂದು ಹೇಳಿಕೊಂಡಿದ್ದು ಅವರ ಮಾತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

26 ಜನರ ಸಾವಿಗೆ ಕಾರಣವಾದ ಮಾರಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ಇತ್ತೀಚಿನ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಅಬ್ಬಾಸಿ ಈ ಬೆದರಿಕೆಯನ್ನು ಒಡ್ಡಿದ್ದಾರೆ.

ಭಾರತವು ಪಾಕಿಸ್ತಾನದ ನೀರು ಸರಬರಾಜನ್ನು ನಿಲ್ಲಿಸಲು ನಿರ್ಧರಿಸಿದರೆ, ಅದು ಪೂರ್ಣ ಪ್ರಮಾಣದ ಯುದ್ಧಕ್ಕೆ ಸಿದ್ಧವಾಗಬೇಕು ಎಂದು ಅಬ್ಬಾಸಿ ಬಹಿರಂಗವಾಗಿ ಘೋಷಿಸಿದ್ದಾರೆ. ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಕೇವಲ ಸಾಂಕೇತಿಕವಾಗಿಲ್ಲ ದೇಶಾದ್ಯಂತ ಇರಿಸಲ್ಪಟ್ಟಿವೆ ಮತ್ತು ಬಳಸಲು ಸಿದ್ಧವಾಗಿವೆ ಎಂದು ಹೇಳಿದ್ದಾರೆ.

ಭಾರತ ಸರ್ಕಾರ ನಮಗೆ ನೀರು ಸರಬರಾಜನ್ನು ನಿಲ್ಲಿಸಿದರೆ, ಅವರು ಯುದ್ಧಕ್ಕೆ ಸಿದ್ಧರಾಗಿರಬೇಕು. ನಮ್ಮಲ್ಲಿರುವ ಮಿಲಿಟರಿ ಉಪಕರಣಗಳು, ನಮ್ಮಲ್ಲಿರುವ ಕ್ಷಿಪಣಿಗಳು, ಅವು ಪ್ರದರ್ಶನಕ್ಕೆ ಅಲ್ಲ. ನಾವು ದೇಶಾದ್ಯಂತ ನಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಎಲ್ಲಿ ಇರಿಸಿದ್ದೇವೆ ಎಂದು ಯಾರಿಗೂ ತಿಳಿದಿಲ್ಲ. ನಾನು ಮತ್ತೊಮ್ಮೆ ಹೇಳುತ್ತೇನೆ, ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಅವೆಲ್ಲವೂ ನಿಮ್ಮ ಮೇಲೆ ಗುರಿಯಾಗಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು ಮತ್ತು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾಗಳನ್ನು ರದ್ದುಗೊಳಿಸುವುದು ಸೇರಿದಂತೆ ದುರಂತ ಪಹಲ್ಗಾಮ್ ದಾಳಿಗೆ ಭಾರತ ತೆಗೆದುಕೊಂಡ ಪ್ರತಿಕ್ರಮಗಳ ನಂತರ ಅಬ್ಬಾಸಿಯವರ ಈ ತೀಕ್ಷ್ಣವಾದ ಬೆದರಿಕೆಗಳನ್ನು ಒಡ್ಡಿದ್ದಾರೆ.

ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಉಂಟಾದ ಅಡಚಣೆಯನ್ನು ಉಲ್ಲೇಖಿಸಿದ ಅಬ್ಬಾಸಿ, ಕೇವಲ ಎರಡು ದಿನಗಳಲ್ಲಿ ಭಾರತೀಯ ವಾಯುಯಾನದಲ್ಲಿ ಉಂಟಾದ ಅವ್ಯವಸ್ಥೆಯನ್ನು ಎತ್ತಿ ತೋರಿಸಿದರು. ಇನ್ನೂ 10 ದಿನಗಳ ಕಾಲ ಹೀಗೇ ಮುಂದುವರಿದರೆ ಭಾರತದ ವಿಮಾನಯಾನ ಸಂಸ್ಥೆಗಳು ದಿವಾಳಿಯಾಗುತ್ತವೆ ಎಂದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು ತನ್ನದೇ ಆದ ಭದ್ರತಾ ಲೋಪಗಳನ್ನು ಸರಿಪಡಿಸುವ ಬದಲು ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿದೆ ಎಂದು ಅಬ್ಬಾಸಿ ಟೀಕಿಸಿದರು.

ಭಾರತವು ವ್ಯಾಪಾರ ಮತ್ತು ನೀರು ಸರಬರಾಜನ್ನು ಸ್ಥಗಿತಗೊಳಿಸಿದ ನಂತರದ ಸಂಭವನೀಯ ಆರ್ಥಿಕ ಪರಿಣಾಮಗಳಿಗೆ ಪಾಕಿಸ್ತಾನ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ ಎಂದಿದ್ದಾರೆ.

ಈ ಮಧ್ಯೆ, ಪಾಕಿಸ್ತಾನ ಸೇನೆಯು ಸತತ ಮೂರನೇ ರಾತ್ರಿ ನಿಯಂತ್ರಣ ರೇಖೆಯಾದ್ಯಂತ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಭಾರತೀಯ ಪಡೆಗಳು ಅವರಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯೆ ನೀಡಿವೆ.

Bilawal bhutto zardari ಸಿಂಧೂ ನದಿಯಲ್ಲಿ ನೀರು ಹರಿಯಬೇಕು, ಇಲ್ಲವಾದರೆ ಭಾರತೀಯರ ರಕ್ತ ಹರಿಯುತ್ತದೆ: ಪಿಪಿಪಿ ಅಧ್ಯಕ್ಷನ ಪ್ರಚೋದನಾಕಾರಿ ಹೇಳಿಕೆ

Pahalgam Attack ಪಹಲ್ಗಾಮ್ ದಾಳಿಯಿಂದ ನೊಂದ ಮುಸ್ಲಿಂ ಶಿಕ್ಷಕನೊಬ್ಬ ಇಸ್ಲಾಂ ಧರ್ಮ ತ್ಯಜಿಸಿದ

Siddramiah ಪಾಕಿಸ್ತಾನ ವಿರುದ್ಧ ಯುದ್ಧ ಬೇಡವೆಂದು ನಾನು ಹೇಳಿಲ್ಲ: ವಿವಾದಿತ ಹೇಳಿಕೆ ಬಗ್ಗೆ ಸಿಎಂ ಸ್ಪಷ್ಟನೆ

TAGGED:#130 #nuclear #weapons #ready #against #India #Pakistan #minister #threatens #islamabad #news #newsics
Share This Article
Facebook Twitter Copy Link Print
Previous Article Life style ಫ್ರಿಡ್ಜ್‌ನಲ್ಲಿ ಹೂವುಗಳನ್ನು ವಾರಗಟ್ಟಲೆ ಫ್ರೆಶ್ ಇರಿಸಬೇಕಾ? ಜಸ್ಟ್ ಈ ರೀತಿ ಮಾಡಿ
Next Article ಗಂಡ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತಾ?: ಪತಿ ಕತ್ತಿಗೆ ಚಾಕು ಇರಿದ ಪತ್ನಿ

Popular Posts

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

ಶಾಕಿಂಗ್: ಪೊಲೀಸ್ ಜೀಪ್‌ನಲ್ಲೇ ಬಂದು ಉದ್ಯಮಿಗಳಿಂದ ₹20 ಲಕ್ಷ ದೋಚಿದ ಸಿಐಡಿ ಇನ್ಸ್‌ಪೆಕ್ಟರ್!

1 Min Read

Emotional Elephant ಒಡತಿಯ ನೋವನ್ನೂ ಹಂಚಿಕೊಂಡ ಗಜರಾಜ! ಕುಂಟುತ್ತಾ ನಡೆದ ಮಹಿಳೆಯನ್ನು ಅನುಕರಿಸಿದ ಆನೆ ವೈರಲ್, ವಿಡಿಯೋ ನೋಡಿ

1 Min Read

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

You Might Also Like

ಕರ್ನಾಟಕಪ್ರಮುಖ

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read
ಪ್ರಮುಖ

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read
ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?