Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Life style ಫ್ರಿಡ್ಜ್‌ನಲ್ಲಿ ಹೂವುಗಳನ್ನು ವಾರಗಟ್ಟಲೆ ಫ್ರೆಶ್ ಇರಿಸಬೇಕಾ? ಜಸ್ಟ್ ಈ ರೀತಿ ಮಾಡಿ
ಲೈಫ್‌ಸ್ಟೈಲ್

Life style ಫ್ರಿಡ್ಜ್‌ನಲ್ಲಿ ಹೂವುಗಳನ್ನು ವಾರಗಟ್ಟಲೆ ಫ್ರೆಶ್ ಇರಿಸಬೇಕಾ? ಜಸ್ಟ್ ಈ ರೀತಿ ಮಾಡಿ

Share
2 Min Read
SHARE

newsics.com

ನಮ್ಮಲ್ಲಿ ಬಹುತೇಕರು ಹೂವುಗಳನ್ನು ಖರೀದಿಸಿದ ನಂತರ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ ಫ್ರಿಡ್ಜ್‌ನಲ್ಲಿರಿಸಿದರೂ ಹೂಗಳು ಎರಡೇ ದಿನಕ್ಕೆ ಬಾಡುತ್ತವೆ ಇಲ್ವೇ ಕೊಳೆಯಲು ಆರಂಭಿಸುತ್ತವೆ. ಆದ್ರೆ ಇಂದು ನಾವು ಹೇಳುವ ರೀತಿಯಲ್ಲಿ ಹೂಗಳನ್ನು ಫ್ರಿಡ್ಜ್‌ ನಲ್ಲಿಟ್ರೆ ಒಂದು ವಾರದವರೆಗೆ ಪ್ರೆಶ್ ಆಗಿರುತ್ತವೆ.
ಮೊದಲು ಕಟ್ಟಿದ ಹೂವನ್ನು ಅಂದವಾಗಿ ಸುತ್ತಿ ಅದನ್ನು ಬಾಳೆ ಎಲೆಯಲ್ಲಿ ಇರಿಸಿ ಬಿಗಿಯಾಗಿ ಮಡಿಸಿ. ಬಾಳೆ ಎಲೆಯಲ್ಲಿ ಹೂವನ್ನು ಮಡಿಸುವಾಗ ಒತ್ತಡ ಹೇರದೆ ಲಘುವಾಗಿ ಪ್ಯಾಕ್ ಮಾಡಬೇಕು. ನಂತರ ಅದನ್ನು ಪಾತ್ರೆಯಲ್ಲಿ ಇರಿಸಿ, ಗಾಳಿಯಾಡದಂತೆ ಮುಚ್ಚಿ ನಂತರ ಫ್ರಿಜ್‌ನಲ್ಲಿ ಸಂಗ್ರಹಿಸಿ. ಹೀಗೆ ಇರಿಸಿದ್ರೆ ಮಲ್ಲಿಗೆ ಹೂವು ಒಂದು ವಾರದವರೆಗೆ ಬಾಡದೆ ಮೊಗ್ಗುಗಳಲ್ಲಿ ಉಳಿಯುತ್ತದೆ.
ನಿಮ್ಮ ಬಳಿ ಬಾಳೆ ಇಲ್ಲದಿದ್ರೆ ಹೂಗಳನ್ನು ಬಿಳಿ ಕಾಗದ ಅಥವಾ ಟಿಶ್ಯೂ ಪೇಪರ್‌ನಲ್ಲಿರಿಸಿ ನಿಧಾನವಾಗಿ ಸುತ್ತಬೇಕು. ಕಾಟನ್ ಬಟ್ಟೆಯಲ್ಲಿಯೂ ಹೂಗಳನ್ನು ಇರಿಸಬಹುದು. ಹೂಗಳು ಸುತ್ತುವ ಮುನ್ನ ಕಾಟನ್ ಬಟ್ಟೆಯನ್ನು ತೇವ ಮಾಡಿಕೊಳ್ಳಬೇಕು. ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಬೇಕು. ಈ ರೀತಿ ಮಾಡುವುದರಿಂದ ಮಲ್ಲಿಗೆ ಹೂವುಗಳನ್ನು ದೀರ್ಘಕಾಲ ಬಾಡದೇ ತಾಜಾ ಆಗಿರುತ್ತವೆ.
ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇಲ್ಲದಿದ್ದರೆ, ಒಂದು ಅಗಲವಾದ ಬಟ್ಟಲಿಗೆ ನೀರು ಸುರಿಯಿರಿ ಮತ್ತು ಅದರ ಮೇಲೆ ಬಾಳೆ ಎಲೆಯನ್ನು ಇರಿಸಿ. ನಂತರ ಕಟ್ಟಿದ ಹೂವನ್ನು ಅದರ ಮೇಲೆ ಇರಿಸಿ. ನಂತರ, ನೀವು ಒದ್ದೆಯಾದ ಹತ್ತಿ ಬಟ್ಟೆಯನ್ನು ನೆನೆಸಿ ಹೂವಿನ ಮೇಲೆ ಹಾಕಿ. ಪಾತ್ರೆಯನ್ನು ಮುಚ್ಚಿ, ಅದರ ಮೇಲೆ ಬೆಳ್ಳಿಯ ತಟ್ಟೆಯನ್ನು ತಲೆಕೆಳಗಾಗಿ ಇಟ್ಟರೆ, ಹೂವು ಒಂದು ವಾರದವರೆಗೆ ಬಾಡದೆ ತಾಜಾವಾಗಿರುತ್ತದೆ. ಬಾಳೆ ಎಲೆಯನ್ನು ನೀರಿನಲ್ಲಿ ತೇಲಿಸುವಾಗ, ಬಾಳೆ ಎಲೆಯೊಳಗೆ ನೀರು ಹೋಗದಂತೆ ನೋಡಿಕೊಳ್ಳಿ.
ನಿಮ್ಮ ಮನೆಯಲ್ಲಿ ಫ್ರಿಡ್ಜ್‌ ಇಲ್ಲದಿದ್ರೆ ಮೊದಲು ಹೂಗಳನ್ನು ಮಾಲೆಯಾಗಿ ಕಟ್ಟಿಕೊಳ್ಳಿ. ನಂತರ ಅವುಗಳಲ್ಲಿರುವ ನೀರಿನಂಶ ಹೋಗುವರೆಗೂ ವೇಟ್ ಮಾಡಿ. ಆನಂತರ ಕಾಟನ್ ಬಟ್ಟೆಯಲ್ಲಿ ಸುತ್ತಿ ಗಾಳಿಯಾಡದ ಡಬ್ಬದಲ್ಲಿಟ್ಟರೆ ಹೂಗಳು ಫ್ರೆಶ್ ಆಗಿರುತ್ತವೆ.
ಕಾಟನ್ ಬಟ್ಟೆಯನ್ನು ಬಳಸುವಾಗ, ಅದು ಒಣಗಿದರೆ ಅದನ್ನು ಮತ್ತೆ ಒದ್ದೆ ಮಾಡಲು ಮರೆಯಬೇಡಿ. ಮೇಲಿನ ಸಲಹೆಗಳನ್ನು ನೀವು ಅನುಸರಿಸಿದರೆ, ನಿಮ್ಮ ಮಲ್ಲಿಗೆ ಹೂವುಗಳು ಖಂಡಿತವಾಗಿಯೂ ತಾಜಾವಾಗಿರುತ್ತವೆ ಮತ್ತು ಬಾಡುವುದಿಲ್ಲ. ಫ್ರಿಡ್ಜ್ ಇಲ್ಲದಿದ್ರೆ ಮಡಿಕೆಗಳಲ್ಲಿ ಹೂವಿನ ಮಾಲೆ ಇರಿಸಿ ಸಂಗ್ರಹಿಸಬಹುದು.

Health tips ಗರ್ಭಾವಸ್ಥೆಯಲ್ಲಿ ಈ ರೀತಿ ಮಾಡಿದ್ರೆ ಮಗುವಿಗೆ ಹಾನಿಯಾಗುತ್ತದೆಯೇ..?

TAGGED:Secret tips to keep flowers fresh in the fridge for weeks!
Share This Article
Facebook Twitter Copy Link Print
Previous Article Health tips ಗರ್ಭಾವಸ್ಥೆಯಲ್ಲಿ ಈ ರೀತಿ ಮಾಡಿದ್ರೆ ಮಗುವಿಗೆ ಹಾನಿಯಾಗುತ್ತದೆಯೇ..?
Next Article Pak minister threatens ಭಾರತದ ವಿರುದ್ಧ ಪ್ರಯೋಗಿಸಲು 130 ಪರಮಾಣು ಅಸ್ತ್ರ ಸಿದ್ಧ: ಪಾಕ್ ಸಚಿವನ ಬೆದರಿಕೆ

Popular Posts

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

ಶಾಕಿಂಗ್: ಪೊಲೀಸ್ ಜೀಪ್‌ನಲ್ಲೇ ಬಂದು ಉದ್ಯಮಿಗಳಿಂದ ₹20 ಲಕ್ಷ ದೋಚಿದ ಸಿಐಡಿ ಇನ್ಸ್‌ಪೆಕ್ಟರ್!

1 Min Read

Emotional Elephant ಒಡತಿಯ ನೋವನ್ನೂ ಹಂಚಿಕೊಂಡ ಗಜರಾಜ! ಕುಂಟುತ್ತಾ ನಡೆದ ಮಹಿಳೆಯನ್ನು ಅನುಕರಿಸಿದ ಆನೆ ವೈರಲ್, ವಿಡಿಯೋ ನೋಡಿ

1 Min Read

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

You Might Also Like

ಲೈಫ್‌ಸ್ಟೈಲ್

ಮೊಡವೆ, ತಲೆನೋವಿಗೆ ಇದೇ ರಾಮಬಾಣ!; ಇದನ್ನು ಬಳಸುವುದರಿಂದಾಗುವ ಪ್ರಯೋಜನಗಳೇನು?

2 Min Read
ಪ್ರಮುಖಆರೋಗ್ಯಕರ್ನಾಟಕದೇಶಲೈಫ್‌ಸ್ಟೈಲ್

Health – Insomnia ನಿದ್ರಾಹೀನತೆ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು! ಯಾಕೆ ಹೀಗೆ?

3 Min Read
ಕರ್ನಾಟಕದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

2 Min Read
ಲೈಫ್‌ಸ್ಟೈಲ್ಆರೋಗ್ಯ

ಪ್ರತಿದಿನ 2 ಲವಂಗ ತಿನ್ನಿ ಈ ಆರೋಗ್ಯ ಸಮಸ್ಯೆಯೇ ಬರಲ್ಲ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?