newsics.com
ಮೊದಲ ಬಾರಿಗೆ ಪೋಷಕರಾಗಲಿರುವ ಹೆಚ್ಚಿನ ದಂಪತಿಗಳ ಮನಸ್ಸಿನಲ್ಲಿ ಬರುವ ಪ್ರಶ್ನೆಯೆಂದರೆ ಈ ಸಮಯದಲ್ಲಿ ಲೈಂಗಿಕ ಸಂಭೋಗ ಸುರಕ್ಷಿತವೇ ಎಂಬುದು. ಎಲ್ಲೋ ಹೀಗೆ ಮಾಡುವುದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಯಾವುದೇ ಹಾನಿಯಾಗಬಹುದು ಎನ್ನುವ ಸಂಶಯ ಅವರ ತಲೆಯಲ್ಲಿರುತ್ತೆ.
ಆರೋಗ್ಯ ತಜ್ಞರ ಪ್ರಕಾರ, ಮಹಿಳೆಯ ಗರ್ಭಧಾರಣೆಯು ಸಾಮಾನ್ಯವಾಗಿದ್ದರೆ (ಕಡಿಮೆ ಅಪಾಯದ ಗರ್ಭಧಾರಣೆ), ಹೆಚ್ಚಿನ ಸಂದರ್ಭಗಳಲ್ಲಿ ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಸುರಕ್ಷಿತ. ಇದು ಮಹಿಳೆಗಾಗಲಿ ಅಥವಾ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆಯಾಗಲಿ ಹಾನಿ ಮಾಡುವುದಿಲ್ಲ.
ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಮಗುವಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ, ಏಕೆಂದರೆ ಭ್ರೂಣವು ನಿಮ್ಮ ಗರ್ಭಾಶಯದೊಳಗೆ ಸುರಕ್ಷಿತವಾಗಿರುತ್ತದೆ. ಇದು ಯಾವುದೇ ಆಘಾತ ಅಥವಾ ಒತ್ತಡವನ್ನು ತಡೆದುಕೊಳ್ಳಬಹುದಾದ ಆಮ್ನಿಯೋಟಿಕ್ ದ್ರವದಿಂದ ಆವೃತವಾಗಿದೆ. ಇದಲ್ಲದೆ, ಗರ್ಭಾಶಯ ಮತ್ತು ಗರ್ಭಕಂಠದ ಗೋಡೆಗಳು ಮಗುವನ್ನು ಸುರಕ್ಷಿತವಾಗಿರಿಸುತ್ತವೆ.
ಈ ಸಮಯದಲ್ಲಿ ಬೇಡ : ಗರ್ಭಕಂಠದ ದೌರ್ಬಲ್ಯ, ಅವಧಿಪೂರ್ವ ಹೆರಿಗೆಯ ಅಪಾಯ, ಯೋನಿ ರಕ್ತಸ್ರಾವ ಅಥವಾ ನೋವು, ಅವಳಿ ಅಥವಾ ತ್ರಿವಳಿಗಳಂತಹ ಹೆಚ್ಚಿನ ಅಪಾಯದ ಗರ್ಭಧಾರಣೆಗಳು.. ಇಂತಹ ಸಮಯದಲ್ಲಿ ಲೈಂಗಿಕ ಕ್ರಿಯೆ ಒಳ್ಳೆಯದಲ್ಲ. ನಿಮಗೆ ಈ ಕುರಿತು ಅನುಮಾನಗಳು ಇದ್ದಲ್ಲಿ ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.
ಎಲ್ಲವೂ ಸಾಮಾನ್ಯವಾಗಿದ್ದರೆ, ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ದಂಪತಿಗಳ ನಡುವಿನ ಸಂಬಂಧಗಳು ಸುಧಾರಿಸುತ್ತವೆ. ಆದರೆ, ವೈದ್ಯರಿಂದ ಸಲಹೆ ಪಡೆಯುವುದು ಸೂಕ್ತ.
Siddramiah ಪಾಕಿಸ್ತಾನ ವಿರುದ್ಧ ಯುದ್ಧ ಬೇಡವೆಂದು ನಾನು ಹೇಳಿಲ್ಲ: ವಿವಾದಿತ ಹೇಳಿಕೆ ಬಗ್ಗೆ ಸಿಎಂ ಸ್ಪಷ್ಟನೆ