Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

Share
2 Min Read
SHARE

newsics.com/ನ್ಯೂಸಿಕ್ಸ್

ಸಾಮಾನ್ಯವಾಗಿ ಸಿನಿಮಾ ನಟ ಮತ್ತು ನಟಿಯರ ಮಕ್ಕಳು ಆಗಾಗ್ಗೆ ಟೀಕೆಗೆ ಒಳಗಾಗುತ್ತಾರೆ,. ಅವರ ವೈಯಕ್ತಿಕ ವಿಚಾರ, ದೇಹದ ಬಗ್ಗೆ ಟ್ರೋಲರ್ಸ್​​​ ಲೇವಡಿ ಮಾಡುತ್ತಾರೆ. ಇತ್ತೀಚೆಗೆ ಸಾನ್ವಿ ಸುದೀಪ ಅವರು ಈ ಬಗ್ಗೆ ಕಿಡಿಕಾರಿದ್ದರು. ಅವರ ದೇಹ, ಬೆನ್ನಿನ ಮೇಲೆ ಹಾಕಿದ್ದ ಟ್ಯಾಟೋ ಬಗೆಗಿನ ಟ್ರೋಲ್​ಗೆ ಕಿಡಿಕಾರಿ ಕ್ಲಾಸ್​ ತೆಗೆದುಕೊಂಡಿದ್ದರು. ಈಗದೆ ಸಾಲಿನಲ್ಲಿ ಖುಷ್ಬೂ ಸುಂದರ್​ ಅವರ ಮಗಳು ಆನಂದಿತಾ ಮಾತನಾಡಿದ್ದಾರೆ.

ನಟಿ ರಾಜಕಾರಣಿಯಾದ ಖುಷ್ಬೂ ಸುಂದರ್​ ಪುತ್ರಿ ಆನಂದಿತಾ ಅವರು, ಸಣ್ಣ ವಯಸ್ಸಿನವರಾಗಿದ್ದ ದಿನದಿಂದಲೂ ಟ್ರೋಲ್​ಗೆ ಒಳಗಾಗಿದ್ದರು ಎನ್ನುವ ಬಗ್ಗೆ ಮಾತನಾಡಿದ್ದಾರೆ. ನಾನು ದಪ್ಪಗಿದ್ದಾಗ ತೂಕ ಇಳಿಸಿ ಎಂದು ಟ್ರೋಲ್​ ಮಾಡುತ್ತಿದ್ದರು. ಈಗ ತೂಕ ಇಳಿಸಿಕೊಳ್ಳಲು ಓಜೆಂಪಿಕ್ ಮತ್ತು ಮೌಂಜಾರೊ ಸೇವಿಸಿದರು ಎಂದು ರೂಮರ್ಸ್​ ಎಬ್ಬಿಸಿದ್ದರು ಎನ್ನುವ ಬಗ್ಗೆ ಹೇಳಿಕೊಂಡರು.

ಕತೆ ಕಟ್ಟೋದು ನೋಡಿದ್ರೆ ನಗು ಬರತ್ತೆ
ನಾನು ಮತ್ತು ನನ್ನ ಅಕ್ಕ ಸಣ್ಣವಯಸ್ಸಿನಿಂದಲೇ ಕೊಂಚ ದಪ್ಪ ಇದ್ದೆವು. ಅದು ನಂತರ ಬೊಜ್ಜಾಗಿ ಮಾರ್ಪಟ್ಟಿತ್ತು. ನಮಗೆ ನಂತರ ನಾವು ಫಿಟ್ ಆಗಿರಬೇಕು ಎಂದನಿಸಿ, ವ್ಯಾಯಾಮ, ಜಿಮ್​ ಎಂದು ಶುರು ಮಾಡಿಕೊಂಡೆವು. 2018 ರಲ್ಲಿ ತೂಕ ಇಳಿಸಿಕೊಳ್ಳಲು ಶುರು ಮಾಡಿದೆವು. ಇದೆಲ್ಲ ಸುಲಭವಾಗಿ ಕರಗುವುದಿಲ್ಲ. ಆದರೆ, ಜನರಿಗೆ ಅರ್ಥವೇ ಆಗೋದಿಲ್ಲ ಎಂದು JFW ಪಾಡ್‌ಕ್ಯಾಸ್ಟ್‌ನಲ್ಲಿ ಆನಂದಿತಾ ಹೇಳಿಕೊಂಡಿದ್ದಾರೆ.

2018ರಿಂದ ನಾನು ಬೊಜ್ಜು ಕರಗಿಸಲು ಶುರು ಮಾಡಿದೆ. ಆದರೆ ಜನರು ನಾನು ಸರ್ಜರಿ ಮಾಡಿಸಿದ್ದೇನೆ ಎಂದು ತಿಳಿದಿದ್ದಾರೆ. ಇಲ್ಲವೇ ಓಜೆಂಪಿಕ್ ಮತ್ತು ಮೌಂಜಾರೋ ಔಷಧಗಳನ್ನು ಬಳಸಿದ್ದೇನೆ ಎಂದದು ಕತೆ ಕಟ್ಟಿದರು. ಇಂತಹ ವಿಚಾರಗಳನ್ನು ನೋಡ್ತಿದ್ರೆ ನನಗೆ ನಗು ಬರುತ್ತದೆ. ಜನರು ನಾನು ಬೊಜ್ಜು ಇಳಿಸಲು ಏಳು ವರ್ಷ ಕಷ್ಟ ಪಟ್ಟ ಬಗ್ಗೆ ತಿಳಿಯದೇ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಟ್ರಾನ್ಸಜೆಂಡರ್​ ಜೊತೆ ಹೋಲಿಕೆ
ನಾನು 15 ವರ್ಷದವಳಿದ್ದಾಗಲೇ ನನ್ನ ಕುರಿತು ಬಾಡಿ ಶೇಮಿಂಗ್​ ಮಾಡತೊಡಗಿದರು. ನನ್ನ ಪೋಷಕರು ಸೆಲಬ್ರೆಟಿಗಳು ನಾನಲ್ಲ. ನಾನು ಫೋಟೋ ಹಾಕಿದರೆ ನೀವು ಕುರೂಪಿ ಎಂದು ಕಾಮೆಂಟ್​ ಮಾಡ್ತಾರೆ. ಕೆಲವೊಮ್ಮೆ ಟ್ರಾನ್ಸಜೆಂಡರ್​ ಜೊತೆಗೆ ಹೋಲಿಕೆ ಮಾಡಿದ್ದರು. ನಿಜ ಏನು ಎಂದರೆ, ಲಿಂಗ ಅಲ್ಪ ಸಂಖ್ಯಾತರು ಸೌಮ್ಯ ಸ್ವಭಾವದ ಸುಂದರ ಮನುಷ್ಯರು. ನಾನು ಇಂತಹ ಟೀಕೆಗೆ ಒಗ್ಗಿಕೊಂಡಿದ್ದೇನೆ. ಆದರೂ ಜನರು ಇಷ್ಟು ಕ್ರೂರಿಗಳಾಗಿ ಇರೋಕೆ ಹೇಗೆ ಸಾಧ್ಯ ಎಂದರು,

ನಾನು ಯಾರನ್ನೋ ಮೆಚ್ಚಿಸಲು ನನ್ನ ತೂಕ ಇಳಿಕೆ ಮಾಡಿಕೊಂಡಿಲ್ಲ ನನ್ನ ಆರೋಗ್ಯದ ದೃಷ್ಟಿಯಿಂದ ನಾನು ಈ ನಿರ್ಧಾರವನ್ನು ತೆಗೆದುಕೊಂಡೆ ಎಂದು ಆನಂದಿತಾ ಅವರು ಪಾಡ್​​ಕಾಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ.

 

ಮೊಡವೆ, ತಲೆನೋವಿಗೆ ಇದೇ ರಾಮಬಾಣ!; ಇದನ್ನು ಬಳಸುವುದರಿಂದಾಗುವ ಪ್ರಯೋಜನಗಳೇನು?

TAGGED:My parents are celebritiesnot me'; Khushboo Sundar's daughter Anandita speaks out against body shaming
Share This Article
Facebook Twitter Copy Link Print
Previous Article ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್
Next Article ‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

Popular Posts

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read

You Might Also Like

ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಕರ್ನಾಟಕ

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read
ಪ್ರಮುಖಮನರಂಜನೆ

Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?