newsics.com
ನವದೆಹಲಿ : ಕಟ್ಟಡ ಕುಸಿತದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಮುಸ್ತಫಾಬಾದ್ ನಲ್ಲಿರುವ ಹಳೆಯ ಕಟ್ಟಡವೊಂದು ಏಕಾಏಕಿ ಧರಾಶಾಯಿಯಾಗಿದ್ದು, 8-10 ಮಂದಿ ಅವಶೇಷಗಳಡಿ ಸಿಲುಕಿಬಿದ್ದಿದ್ದಾರೆ.
ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.
ಕುಸಿತದ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿದ್ದು, ಘಟನೆಯ ಭೀಕರತೆಯನ್ನು ಬಿಂಬಿಸುತ್ತಿದೆ.ರಕ್ಷಣಾ ಪಡೆಗಳು, ಪೊಲೀಸರು ಹಾಗೂ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕಪ್ಪಗಿದ್ದೀಯಾ ಅಂತ ಸೂಸೆಗೆ ಕಿರುಕುಳ: ಮನನೊಂದು ನವವಿವಾಹಿತೆ ಆತ್ಮಹತ್ಯೆ