newsics.com
ಬೆಂಗಳೂರು: ಪಿಯುಸಿ ಪರೀಕ್ಷೆ ಬೆನ್ನಲ್ಲೇ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿದೆ. ಕೊನೆಯ ದಿನವಾದ ನಿನ್ನೆ, ಶಿವಮೊಗ್ಗ ಮತ್ತು ಬೀದರ್ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಜನಿವಾರ ತೆಗೆದುಹಾಕುವಂತೆ ಸೂಚಿಸಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಪುರುಷರ ವಸ್ತ್ರ ಸಂಹಿತೆ
- ಪರೀಕ್ಷೆ ದಿನ ಪೂರ್ಣ ತೋಳಿನ ಬಟ್ಟೆ ಧರಿಸುವ ಹಾಗಿಲ್ಲ
- ಕಾಲರ್ ರಹಿತ ನಾರ್ಮಲ್ ಶರ್ಟ್/ ಟೀ ಶರ್ಟ್ ಗೆ ಆದ್ಯತೆ
- ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬು ಕಡಿಮೆಯಿರುವ ಪ್ಯಾಂಟ್)
- ಕುರ್ತಾ, ಪೈಜಾಮ, ಜೀನ್ಸ್ ಪ್ಯಾಂಟ್ ಅವಕಾಶ ಇಲ್ಲ
- ಪರೀಕ್ಷಾ ಹಾಲ್ ಒಳಗೆ ಶೂ ಧರಿಸುವ ಹಾಗಿಲ್ಲ
- ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣ ಧರಿಸುವ ಹಾಗಿಲ್ಲ
- ಕಿವಿಯೋಲೆ ಕಡಗ ಧರಿಸುವ ಹಾಗಿಲ್ಲ.
ಮಹಿಳೆಯರ ವಸ್ತ್ರ ಸಂಹಿತೆ
- ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ ಹೂ ಬಟನ್ ಹೊಂದಿರುವ ಬಟ್ಟೆ ಧರಿಸುವುದು ನಿಷೇಧ.
- ಪರೀಕ್ಷೆ ದಿನ ಪೂರ್ಣ ತೋಳಿನ ಬಟ್ಟೆಯನ್ನು ಜೀನ್ಸ್ ಧರಿಸಬಾರದು.
- ಬದಲಾಗಿ ಅರ್ಧ ತೋಳಿನ ಬಟ್ಟೆ ಮುಜುಗರ ಆಗದಿರುವಂತಹ ಬಟ್ಟೆ ಧರಿಸಬೇಕು ದಪ್ಪ ಹೀಲ್ಸ್ ಬಳಸುವುದು ನಿಷೇಧ.
- ದಪ್ಪವಾದ ಶೂ ದಪ್ಪವಾದ ಚಪ್ಪಲಿ, ಅತಿ ತೆಳುವಾದ ಶೂ ಅತಿ ತೆಳುವಾದ ಚಪ್ಪಲಿ ನಿಷೇಧ.
- ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣ ಧರಿಸುವುದು ನಿಷೇಧ.
- ಕಿವಿ ಓಲೆ ಉಂಗುರ ಧರಿಸುವ ಹಾಗಿಲ್ಲ.
- ಮಂಗಳ ಸೂತ್ರ ಮತ್ತು ಕಾಲುಂಗುರ ಧರಿಸಲು ಅವಕಾಶ.
ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ (ಕೆಎಎಸ್) ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ ಮತ್ತು ಕಾಲುಂಗುರ ತೆಗೆಸಿರುವ ಪ್ರಕರಣ ನಡೆದಿದ್ದವು. ಇದು ಭಾರೀ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಕೆಇಎ ಮಂಗಳಸೂತ್ರ ಮತ್ತು ಕಾಲುಂಗುರಕ್ಕೆ ಅವಕಾಶ ನೀಡಿತ್ತು. ಆದ್ರೆ, ಇದೀಗ ಜನಿವಾರ ವಿವಾದ ಹುಟ್ಟುಹಾಕಿದೆ.
ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿ ತೀರ್ಥಹಳ್ಳಿಯ ಬ್ರಾಹ್ಮಣ ವಿದ್ಯಾರ್ಥಿ ಅಭಿಜ್ಞಾ ಧರಿಸಿದ್ದ ಜನಿವಾರ ಮತ್ತು ಕೈಯಲ್ಲಿ ಕಟ್ಟಿಕೊಂಡಿದ್ದ ಕಾಶಿ ದಾರವನ್ನು ತೆಗೆಸಿದ್ದಾರೆ. ಈ ವಿಚಾರ ಕ್ಷಣಮಾತ್ರದಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧ ಬ್ರಾಹ್ಮಣ ಸಂಘಗಳ ಒಕ್ಕೂಟದ ಮುಖಂಡರು ಪರೀಕ್ಷಾ ಸಿಬ್ಬಂದಿಯ ನಡೆಯನ್ನು ಖಂಡಿಸಿದ್ದಾರೆ.
ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದಷ್ಟೇ ಅಲ್ಲದೆ, ಸಿಬ್ಬಂದಿ ಅದನ್ನು ತುಂಡು ಮಾಡಿ ಕಸದ ಬುಟ್ಟಿಗೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Health Tips: ನೀವು ಪ್ರತಿದಿನ ಬಿಸಿ ನೀರಿನಲ್ಲಿ ಸ್ನಾನ ಮಾಡ್ತೀರಾ? ಹಾಗಾದ್ರೆ ಈಗ್ಲೆ ಬಿಟ್ಟುಬಿಡಿ