newsics.com
ಹರ್ಯಾಣ: ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಇಲ್ಲೊಬ್ಬ ಅಭಿಮಾನಿ ಚಪ್ಪಲಿ ಧರಿಸದೆ ಬರಿಗಾಲಲ್ಲೇ ಓಡಾಡುವ ಶಪಥ ಮಾಡಿದ್ದಾರೆ.
ಹೌದು ಮೋದಿ ಅಭಿಮಾನಿ ರಾಂಪಾಲ್ ಕಶ್ಯಪ್. ಮೋದಿಗಾಗಿ 14 ವರ್ಷಗಳಿಂದ ಕಶ್ಯಪ್ ಚಪ್ಪಲಿ ಧರಿಸದೆ ಬರಿಗಾಲಲ್ಲೇ ಓಡಾಡುತ್ತಿದ್ದರು. ಇದೀಗ ಪ್ರಧಾನಿ ಮೋದಿ ರಾಂಪಾಲ್ ಕಶ್ಯಪ್ ಭೇಟಿಯಾಗಿದ್ದಾರೆ. ಈ ವೇಳೆ ಮೋದಿ ಹೊಸ ಶೂ ಕೊಡಿಸಿ ಧರಿಸುವಂತೆ ಸೂಚಿಸಿದ್ದಾರೆ. ಮೋದಿ ಕೈಯಾರೆ ಕೊಟ್ಟ ಶೂ ಧರಿಸಿದ ರಾಂಪಾಲ್ ಶಪಥ ಅಂತ್ಯಗೊಳಿಸಿದ್ದಾರೆ.
14 ವರ್ಷಗಳ ಹಿಂದೆ ಮೋದಿ ಪ್ರಧಾನಿಯಾಗಬೇಕು ಎಂದು ರಾಂಪಾಲ್ ಕಶ್ಯಪ್ ಶಪಥ ಮಾಡಿದ್ದರು. ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೂ ರಾಂಪಾಲ್ ಕಶ್ಯಪ್ ಶಪಥ ಹಾಗೇ ಮುಂದುವರಿಸಿದ್ದರು. ಮೋದಿ ಪ್ರಧಾನಿಯಾಗಿ ಮತ್ತಷ್ಟು ಕಾಲ ಆಡಳಿತ ನಡೆಸಬೇಕು, ಅಭಿವೃದ್ಧಿ ಮಾಡಬೇಕು ಅನ್ನೋದು ರಾಂಪಲ್ ಮನದಾಸೆಯಾಗಿದೆ.
ಕೇಳಿದ ಮೊದಲ ಪ್ರಶ್ನೆ, ಯಾಕೇ ರೀತಿ ಮಾಡಿದ್ದೀರಿ, ನಿಮಗೆ ನೀವು ಯಾಕೆ ಈ ರೀತಿ ಕಷ್ಟ ಕೊಡುತ್ತೀರಿ ಎಂದು ಮೋದಿ ಕೇಳಿದ್ದಾರೆ. ಒಂದು ಕ್ಷಣ ಏನು ಉತ್ತರಿಸಬೇಕು ಅನ್ನೋದೇ ತಿಳಿಯದ ರಾಂಪಾಲ್ ಕಶ್ಯಪ್, ನೀವು ಪ್ರಧಾನಿಯಾಗಬೇಕು, ಅಧಿಕಾರ ನಡೆಸಬೇಕು ಅನ್ನೋ ಹಂಬಲದಲ್ಲಿ ಈ ಶಪಥ ಮಾಡಿದ್ದೇನೆ. ನೀವು ಪ್ರಧಾನಿಗಿರಬೇಕು ಎಂದು ರಾಂಪಾಲ್ ಕಶ್ಯಪ್ ಉತ್ತರಿಸಿದ್ದಾರೆ.
https://www.newsics.com/2025/04/14/it-is-very-dangerous-to-have-this-number-in-your-mobile-number/