newsics.com
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು,ಜುಲೈಯೊಳಗೆ ಹಳದಿ ಮಾರ್ಗ ಸಂಚಾರ ಮುಕ್ತವಾಗಿದೆ. ಈ ಮೂಲಕ ಯೆಲ್ಲೋ ಲೈನ್ ಮೆಟ್ರೋಗಾಗಿ ಕಾಯುತ್ತಿರುವವರಿಗಾಗಿ ಇದೀಗ ಬಿಎಂಆರ್ಸಿಎಲ್ ಗುಡ್ನ್ಯೂಸ್ ನೀಡಿದ್ದು, ಇದೇ ಜುಲೈಯೊಳಗೆ ಹಳದಿ ಮಾರ್ಗ ಸಂಚಾರ ಮುಕ್ತವಾಗಲಿದೆ ಎಂದು ತಿಳಿಸಿದೆ.
ಈ ಹಿಂದೆ ಹಲವು ಬಾರಿ ನಮ್ಮ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತವಾಗುತ್ತದೆ ಎಂದು ಹೇಳುತ್ತಾ ದಿನಾಂಕ ಮುಂದೂಡುತ್ತಲೇ ಹೋಗಿದ್ದರಿಂದ ಜನರು ದಂಗಾಗಿ ಹೋಗಿದ್ದರು. ಸಾರ್ವಜನಿಕರ ಬೇಡಿಕೆಹೆಚ್ಚುತ್ತಿದ್ದಂತೆ ನಮ್ಮ ಮೆಟ್ರೋ ತೀವ್ರ ಗತಿಯಲ್ಲಿ ಕೆಲಸ ಮಾಡಿ ಮುಗಿಸಿದೆ. ಕೊನೆಗೂ ಜುಲೈ ಒಳಗಾಗಿ ಸಂಚಾರಕ್ಕೆ ಲಭ್ಯವಾಗಲಿದೆ ಎನ್ನಲಾಗಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಡ್ರೈವರ್ ಲೆಸ್ ಮೆಟ್ರೋಗಳು ಓಡಾಡಲಿವೆ. ಚೀನಾದಿಂದ ಈ ರೈಲುಗಳು ಆಗಮಿಸಿದ್ದರೂ ತುಂಬಾ ತಡವಾಗಿದ್ದರಿದ ಕಾರ್ಯಾಚರಣೆ ಕೂಡಾ ಅತ್ಯಂತ ವಿಳಂಬವಾಗಿದೆ. ಇನ್ನು ಕೂಡಾ ಪೂರ್ಣ ಪ್ರಮಾಣದ ರೈಲುಗಳು ಬಿಎಂಆರ್ಸಿಎಲ್ ಕೈ ಸೇರಿಲ್ಲ. ಸದ್ಯ ಈಗ ಲಭ್ಯವಿರುವ ರೈಲುಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲು ಬಿಎಂಆರ್ಸಿಎಲ್ ಸಜ್ಜು ನಡೆಸುತ್ತಿದೆ.
ಐಟಿ ಪಾರ್ಕ್ ಸ್ಥಾಪನೆಗೆ 400 ಎಕರೆ ಅರಣ್ಯ ನಾಶ; ಮೂಕ ಪ್ರಾಣಿಗಳ ರೋಧನೆ, ವಿಡಿಯೋ ವೈರಲ್!