newsics.com
‘ಎಲ್ 2: ಎಂಪುರಾನ್’ ಸಿನಿಮಾ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತದೆ. ಆದರೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲನ್ ಅವರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಇಡಿ ಶೋಧ ನಡೆಸುತ್ತಿದೆ. ಚೆನ್ನೈ ಹಾಗೂ ಕೊಚ್ಚಿಯಲ್ಲಿರುವ ಗೋಪಾಲನ್ ಅವರ ಕಚೇರಿ ಮೇಲೆ ಈ ದಾಳಿ ನಡೆದಿದೆ. ಗೋಪಾಲನ್ ಅವರ ನೇತೃತ್ವದಲ್ಲಿ ಶ್ರೀ ಗೋಕುಲಂ ಚಿಟ್ಸ್ ಹಾಗೂ ಫೈನಾನ್ಸ್ ಪ್ರಮುಖ ಸಂಸ್ಥೆಗಳಾಗಿವೆ. ಇವರು ಆಸ್ಪತ್ರೆ, ಮಾಧ್ಯಮ, ಆರೋಗ್ಯ ಕ್ಷೇತ್ರ, ಶಿಕ್ಷಣ ಮತ್ತು ಲಾಜಿಸ್ಟಿಕ್ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ.
ಗೋಕುಲಂ ಚಿಟ್ಸ್ ಮೇಲೆ ಏಪ್ರಿಲ್ 2017 ರಲ್ಲಿ, ತೆರಿಗೆ ವಂಚನೆಗಾಗಿ ಆದಾಯ ತೆರಿಗೆ ಮೂರು ರಾಜ್ಯಗಳಲ್ಲಿ ಶ್ರೀ ಗೋಕುಲಂ ಚಿಟ್ಸ್ ಫಂಡ್ ಮೇಲೆ ದಾಳಿ ನಡೆಸಿತ್ತು.
https://www.newsics.com/2025/04/04/400-acres-of-forest-destroyed-for-setting-up-it-park/