newsics.com
ಬೆಂಗಳೂರು: ಯುಗಾದಿ ಮತ್ತು ರಂಜಾನ್ ಹಬ್ಬಕ್ಕೆ ರಜೆ ಇರುವ ಕಾರಣ ಜನರು ಊರಿಗೆ ತೆರಳುತ್ತಿದ್ದಾರೆ. ಆದರೆ ಪ್ರಯಾಣಿಕರಿಗೆ ಶಾಕ್ ಕೊಟ್ಟಿದೆ. ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಶೇ.50 ಏರಿಕೆ ಮಾಡಿದ್ದಾರೆ.
ಟಿಕೆಟ್ ದರ ಏರಿಕೆ ಮಾಡಿದ್ದರೂ, ಕಡಿವಾಣ ಹಾಕದ ಕಣ್ಮುಚ್ಚಿ ಕುಳುತಿರುವ ಸಾರಿಗೆ ಇಲಾಖೆ ಮತ್ತು ಆರ್ಟಿಒ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ. ಹಬ್ಬದ ನೆಪದಲ್ಲಿ ಟಿಕೆಟ್ ಖಾಸಗಿ ಬಸ್ ಮಾಲೀಕರು ಸುಲಿಗೆ ಮಾಡುತ್ತಿದ್ದಾರೆ. ಬೇರೆ ವಿಧಿಯಿಲ್ಲದೆ ಪ್ರಯಾಣಿಕರು ದುಪ್ಪಟ್ಟು ದರ ಕೊಟ್ಟು ಪ್ರಯಾಣಿಸುತ್ತಿದ್ದಾರೆ.
ಇದೀಗ ಪ್ರಯಾಣಿಕರು ಖಾಸಗಿ ಬಸ್ ಮಾಲೀಕರಿಗೆ ಬಿಸಿ ಮುಟ್ಟಿಸಲು ಬೆಂಗಳೂರು ಕೇಂದ್ರೀಯ ವಿಭಾಗ ಆರ್ಟಿಒ ಅಧಿಕಾರಿಗಳು ಮುಂದಾಗಿದ್ದಾರೆ.ಬೆಂಗಳೂರು ಕೇಂದ್ರೀಯ ವಿಭಾಗದ ಆರ್ಟಿಒ ಅಧಿಕಾರಿಗಳು ಕಲಾಸಿಪಾಳ್ಯ, ಆನಂದ್ರಾವ್ ಸರ್ಕಲ್, ಮೈಸೂರ್ ರಸ್ತೆ, ಟಿನ್ ಫ್ಯಾಕ್ಟರಿ, ಗೋರಗುಂಟೆ ಪಾಳ್ಯ ಸೇರಿ 10 ಕಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.